ಆ್ಯಪ್ನಗರ

3 ನಾಮಪತ್ರ ತಿರಸ್ಕೃತ 23 ಕ್ರಮಬದ್ಧ

ಧಾರವಾಡ : ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ನಾಮಪತ್ರಗಳ ಪರಿಶೀಲನೆ ಕಾರ್ಯ ಶುಕ್ರವಾರ ನಡೆಯಿತು. ಈ ವೇಳೆ ಮೂವರು ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತವಾಗಿವೆ. ಉಳಿದ 23 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ.

Vijaya Karnataka 6 Apr 2019, 5:00 am
ಧಾರವಾಡ : ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ನಾಮಪತ್ರಗಳ ಪರಿಶೀಲನೆ ಕಾರ್ಯ ಶುಕ್ರವಾರ ನಡೆಯಿತು. ಈ ವೇಳೆ ಮೂವರು ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತವಾಗಿವೆ. ಉಳಿದ 23 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ.
Vijaya Karnataka Web DRW-05RANGA09
ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ನಾಮಪತ್ರಗಳ ಪರಿಶೀಲನೆ ನಡೆಸುತ್ತಿರುವ ಜಿಲ್ಲಾ ಚುನಾವಣಾಧಿಕಾರಿ ಎಂ.ದೀಪಾ ಹಾಗೂ ಭಾರತ ಚುನಾವಣಾ ಆಯೋಗದ ವೀಕ್ಷ ಕ ಸಮೀರ್‌ಕುಮಾರ್‌ ಬಿಸ್ವಾಸ್‌ .


ಪರಿಷ್ಕೃತ ಅಫಿಡವಿಟ್‌ ಸಲ್ಲಿಸಿದ ಕಾರಣಕ್ಕಾಗಿ ರಾಷ್ಟ್ರೀಯ ಮಹಿಳಾ ಪಕ್ಷ ದ (ಎನ್‌ಡಬ್ಲೂಪಿ) ಅಭ್ಯರ್ಥಿ ಇರ್ಷಾದ್‌ಬೇಗಂ ಅವರ ನಾಮಪತ್ರ, ಅಫಿಡವಿಟ್‌ನಲ್ಲಿ ಕೆಲವು ಕಾಲಂಗಳನ್ನು ಭರ್ತಿ ಮಾಡದೇ ಖಾಲಿಬಿಟ್ಟ ಕಾರಣ ಶಿವಸೇನಾ ಅಭ್ಯರ್ಥಿ ವಿಠ್ಠಲ ನಾರಾಯಣಸಾ ಪವಾರ್‌ ಹಾಗೂ ಪಕ್ಷೇತರ ಅಭ್ಯರ್ಥಿ ಮಾರುತಿ ಹನಸಿ ಅವರ ನಾಮಪತ್ರಗಳು ತಿರಸ್ಕೃತವಾಗಿವೆ ಎಂದು ಜಿಲ್ಲಾಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಎಂ.ದೀಪಾ ತಿಳಿಸಿದ್ದಾರೆ.

ನಾಮಪತ್ರಗಳ ಪರಿಶೀಲನೆ ಸಮಯದಲ್ಲಿ ಭಾರತ ಚುನಾವಣಾ ಆಯೋಗದ ವೀಕ್ಷ ಕ ಸಮೀರ್‌ಕುಮಾರ್‌ ಬಿಸ್ವಾಸ್‌, ಸಹಾಯಕ ಚುನಾವಣಾಧಿಕಾರಿ ಡಾ.ಸುರೇಶ ಇಟ್ನಾಳ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ