Please enable javascript.4 ಎಸಿಪಿ, 18 ಇನ್ಸಪೆಕ್ಟರ್‌ಗಳು ಎತ್ತಂಗಡಿ - 4 ಎಸಿಪಿ, 18 ಇನ್ಸಪೆಕ್ಟರ್‌ಗಳು ಎತ್ತಂಗಡಿ - Vijay Karnataka

4 ಎಸಿಪಿ, 18 ಇನ್ಸಪೆಕ್ಟರ್‌ಗಳು ಎತ್ತಂಗಡಿ

ವಿಕ ಸುದ್ದಿಲೋಕ 27 Sep 2013, 4:32 am
Subscribe

ಹುಬ್ಬಳ್ಳಿ :ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಕಮಿಷ್ನರೇಟ್ ಸೇರಿದಂತೆ ಜಿಲ್ಲೆಯ ವಿವಿಧ ವಿಭಾಗಗಳ ಪೊಲೀಸ್ ಅಧಿಕಾರಿಗಳ ಭಾರಿ ವರ್ಗಾವಣೆ ಮಾಡಿ ರಾಜ್ಯ ಸರಕಾರ ಬುಧವಾರ ತಡರಾತ್ರಿ ಆದೇಶ ಹೊರಡಿಸಿದೆ.

4 18
4 ಎಸಿಪಿ, 18 ಇನ್ಸಪೆಕ್ಟರ್‌ಗಳು ಎತ್ತಂಗಡಿ
ಹುಬ್ಬಳ್ಳಿ :ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಕಮಿಷ್ನರೇಟ್ ಸೇರಿದಂತೆ ಜಿಲ್ಲೆಯ ವಿವಿಧ ವಿಭಾಗಗಳ ಪೊಲೀಸ್ ಅಧಿಕಾರಿಗಳ ಭಾರಿ ವರ್ಗಾವಣೆ ಮಾಡಿ ರಾಜ್ಯ ಸರಕಾರ ಬುಧವಾರ ತಡರಾತ್ರಿ ಆದೇಶ ಹೊರಡಿಸಿದೆ.

ಮಹಾನಗರ ಸಂಚಾರ ವಿಭಾಗದ ಎಸಿಪಿ ಎನ್.ಎಸ್.ಪಾಟೀಲ ಹೆಸ್ಕಾಂಗೆ ವರ್ಗವಾಗಿದ್ದು, ಎ.ಆರ್.ಬಡಿಗೇರ ಅವರ ಸ್ಥಾನಕ್ಕೆ ಆಗಮಿಸಿದ್ದಾರೆ. ಕುಂದಾಪುರದಲ್ಲಿದ್ದ ಯಶೋಧಾ ಒಂಟಿಗೊಡಿ ಹುಬ್ಬಳ್ಳಿ ಉತ್ತರ, ದಕ್ಷಿಣಕ್ಕೆ ನಾರಾಯಣ ಬಿರ್ಜೆ, ಧಾರವಾಡ ಎಸಿಪಿಯಾಗಿ ಬಾಗಲಕೋಟಿಯಿಂದ ಎಸ್.ಎಚ್.ಕೇರಿ ವರ್ಗವಾಗಿದ್ದಾರೆ. ರೈಲ್ವೆ ಹುಬ್ಬಳ್ಳಿ ವಿಭಾಗದ ಎಸಿಪಿಯಾಗಿ ಆರ್.ಕೆ.ಪಾಟೀಲ್ ವರ್ಗಾವಣೆಗೊಂಡಿದ್ದಾರೆ.

ಎಸ್.ಎನ್.ಹೊಳೆಹೊಸೂರ ಹು-ಧಾ ಸಿಸಿಆರ್‌ಬಿಗೆ, ಜಿ.ಎಂ. ದೇಸೂರ ಜಮಖಂಡಿಗೆ ಹಾಗೂ ಧಾರವಾಡ ಡಿಎಆರ್‌ನ ಭರತ್ ತಳವಾರ ಹಾವೇರಿಗೆ ಎತ್ತಂಗಡಿಯಾಗಿದ್ದಾರೆ.

ಮಹಾನಗರದ 21 ಪೊಲೀಸ್ ಠಾಣೆಗಳ ಪೈಕಿ 18 ಠಾಣೆಗಳ ಇನ್ಸಪೆಕ್ಟರ್‌ಗಳು ವರ್ಗವಾಗಿದ್ದಾರೆ. ಘಂಟಿಕೇರಿ ಠಾಣೆಗೆ ಹೊಸಕೇರಿಯಿಂದ ಗಣಪತಿ ಗುಡಜಿ, ಹುಬ್ಬಳ್ಳಿ ಶಹರಕ್ಕೆ ಶ್ಯಾಮರಾಜ್ ಸಜ್ಜನ್, ಕಮರಿಪೇಟೆಗೆ ಕಾರವಾರದಿಂದ ಸುಧಾಮ ನಾಯ್ಕ, ಕೇಶ್ವಾಪೂರ ಠಾಣೆಗೆ ಉಡುಪಿಯ ಜಗದೀಶ ಎಂ. ಹಳೇಹುಬ್ಬಳ್ಳಿ ಠಾಣೆಗೆ ಸಿಸಿಬಿಯಲ್ಲಿದ್ದ ಶಿವಾನಂದ ಎಚ್. ವರ್ಗವಾಗಿದ್ದಾರೆ.

ಇನ್ಸಪೆಕ್ಟರ್ ಲಕ್ಷ್ಮಣ ಶಿರಕೋಳ ಹುಬ್ಬಳ್ಳಿ ಪೂರ್ವಕ್ಕೆ, ನಾಗರಾಜ ಎಸ್.ಎಂ.ಹುಬ್ಬಳ್ಳಿ ಉತ್ತರ ಸಂಚಾರಕ್ಕೆ, ಚಂದ್ರಕಾಂತ ಪೂಜಾರಿ ಹುಬ್ಬಳ್ಳಿ ದಕ್ಷಿಣ ಸಂಚಾರಕ್ಕೆ, ಪ್ರಭುಗೌಡ ಪಾಟೀಲ ಗೋಕುಲ ರಸ್ತೆಗೆ, ಬಿ.ಎಂ. ಗಂಗಾಧರ ಧಾರವಾಡ ಶಹರ, ರಾಮನಗೌಡ ಹಟ್ಟಿ ಧಾರವಾಡ ಉಪನಗರ, ಎನ್.ಆರ್.ಚಲವಾದಿ ಮಹಿಳಾ ಠಾಣೆಗೆ, ಟಿ.ಚನ್ನಕೇಶವ ವಿದ್ಯಾಗಿರಿ ಠಾಣೆಗೆ ವರ್ಗವಾಗಿದ್ದಾರೆ.

ಧಾರವಾಡ ಡಿಸಿಐಬಿಗೆ ಅನಿಲಕುಮಾರ ಬಿ, ಧಾರವಾಡ ರೂರಲ್ ಸಿಪಿಐ ಆಗಿ ಅಶೋಕ ಡಿ, ಹುಬ್ಬಳ್ಳಿ ಗ್ರಾಮೀಣಕ್ಕೆ ಮುತ್ತಣ್ಣ ಸರವಗೋಳ, ಕಲಘಟಗಿ ಸಿಪಿಐ ಆಗಿ ಮಂಜುನಾಥ ನಡುವಿನಮನಿ, ಕುಂದಗೋಳಕ್ಕೆ ಮುತ್ತಪ್ಪ ಪಾಟೀಲ, ಹು-ಧಾ ಸಿಸಿಬಿ ಇನ್ಸಪೆಕ್ಟರ್ ಆಗಿ ವೀರಭದ್ರಯ್ಯ ಇ.ಎಸ್., ಪ್ರಾಣೇಶ ರೊಟ್ಟಿ ಹಾಗೂ ಎಂ.ಎಸ್. ನಾಯ್ಕರ ವರ್ಗವಾಗಿದ್ದಾರೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ