ಆ್ಯಪ್ನಗರ

5, 10 ರೂ. ನಾಣ್ಯ ಚಲಾವಣೆ ರದ್ದು ಇಲ್ಲ

ಹುಬ್ಬಳ್ಳಿ: ಸಾಮಾಜಿಕ ಜಾಲತಾಣ ಸೇರಿದಂತೆ ವ್ಯಾಪಾರ ವಹಿವಾಟು ಕೇಂದ್ರಗಳಲ್ಲಿ5 ಹಾಗೂ 10 ರೂ. ನಾಣ್ಯಗಳನ್ನು ಚಲಾವಣೆಯಿಂದ ರದ್ದು ಮಾಡಲಾಗಿದೆ ಎಂದು ಸುಳ್ಳು ಸುದ್ದಿ ಹರಿದಾಡುತ್ತಿವೆ. ಸಾರ್ವಜನಿಕರು ಇಂಥ ಸುದ್ದಿಗೆ ಕಿವಿಗೊಡಬಾರದು ಎಂದು ಆರ್‌ಬಿಐ ಬೆಂಗಳೂರಿನ ಎಜಿಎಂ ದತ್ತಾತ್ರೇಯ ಹೇಳಿದರು.

Vijaya Karnataka 14 Jan 2020, 5:38 pm
ಹುಬ್ಬಳ್ಳಿ: ಸಾಮಾಜಿಕ ಜಾಲತಾಣ ಸೇರಿದಂತೆ ವ್ಯಾಪಾರ ವಹಿವಾಟು ಕೇಂದ್ರಗಳಲ್ಲಿ5 ಹಾಗೂ 10 ರೂ. ನಾಣ್ಯಗಳನ್ನು ಚಲಾವಣೆಯಿಂದ ರದ್ದು ಮಾಡಲಾಗಿದೆ ಎಂದು ಸುಳ್ಳು ಸುದ್ದಿ ಹರಿದಾಡುತ್ತಿವೆ. ಸಾರ್ವಜನಿಕರು ಇಂಥ ಸುದ್ದಿಗೆ ಕಿವಿಗೊಡಬಾರದು ಎಂದು ಆರ್‌ಬಿಐ ಬೆಂಗಳೂರಿನ ಎಜಿಎಂ ದತ್ತಾತ್ರೇಯ ಹೇಳಿದರು.
Vijaya Karnataka Web 5 10 rs currency circulation is not canceled
5, 10 ರೂ. ನಾಣ್ಯ ಚಲಾವಣೆ ರದ್ದು ಇಲ್ಲ


ಸೋಮವಾರ ನಗರದ ಜೆ.ಸಿ.ನಗರದ ಕೆಸಿಸಿಐನಲ್ಲಿಸಿಂಡಿಕೇಟ್‌ ಬ್ಯಾಂಕ್‌, ರಿಜನಲ್‌ ಕಚೇರಿಯಿಂದ ಸೋಮವಾರ ನಡೆದ 5 ಹಾಗೂ 10 ರೂ. ನಾಣ್ಯಗಳ ಚಲಾವಣೆ, ಸ್ವೀಕಾರದಲ್ಲಿನ ಗೊಂದಲ' ಕುರಿತಾದ ತಿಳಿವಳಿಕೆ ಕಾರ್ಯಕ್ರಮದಲ್ಲಿಮಾತನಾಡಿ, ಆರ್‌ಬಿಐ 5, 10 ರೂ. ಕಾಯಿನ್‌ಗಳನ್ನು ಚಲಾವಣೆಯಿಂದ ರದ್ದು ಮಾಡಿಲ್ಲಎಂದು ಸ್ಪಷ್ಟಪಡಿಸಿದರು.

ನಾಣ್ಯಗಳ ಸಮಸ್ಯೆ ಕರ್ನಾಟಕ ಹಾಗೂ ಆಂಧ್ರದಲ್ಲಿಹೆಚ್ಚಿದ್ದು, ತಮಿಳನಾಡು, ಕೇರಳ ಸೇರಿದಂತೆ ವಿವಿಧೆಡೆ ನಾಣ್ಯಗಳ ಸ್ವೀಕಾರ, ಚಲಾವಣೆಯಲ್ಲಿಯಾವುದೇ ಸಮಸ್ಯೆ ಇಲ್ಲ. ಈ ಎರಡು ನಾಣ್ಯಗಳು ಅನ್‌ಲಿಮಿಟೆಡ್‌ ಲಿಗಲ್‌ ಟೆಂಡರ್‌ ಕಾಯಿನ್‌ಗಳಾಗಿವೆ. ಹೀಗಾಗಿ ಇವುಗಳನ್ನು ರದ್ದು ಮಾಡುವುದು ಅಸಾಧ್ಯ. ಅಲ್ಲದೆ, ನೋಟ್‌ಗಳಂತೆ ನಕಲಿ ಕಾಯಿನ್‌ಗಳನ್ನು ತಯಾರಿಸುವುದು ಅಸಾಧ್ಯ ಎಂದರು.

ನಾಣ್ಯಗಳ ನಿರಾಕರಣೆ ಕುರಿತು 100 ಬ್ಯಾಂಕ್‌ಗಳಲ್ಲಿಸಮೀಕ್ಷೆ ನಡೆಸಿದಾಗ, ಶೇ.40ರಷ್ಟು ಬ್ಯಾಂಕ್‌ಗಳಲ್ಲಿನಾಣ್ಯ ಸ್ವೀಕರಿಸಲಾಗುತ್ತಿದೆ. ಶೇ.5ರಷ್ಟು ಬ್ಯಾಂಕ್‌ಗಳಲ್ಲಿಲಾಕರ್‌ ಸಮಸ್ಯೆಯಿದ್ದು, ಕೆಲವೆಡೆ ಸ್ವೀಕರಿಸಲಾಗಿಲ್ಲ. ಅಂತಲ್ಲಿದಂಡ ವಿಧಿಸಲಾಗಿದೆ. ಇಂಥ ಸುಳ್ಳು ಸುದ್ದಿ ನಂಬಿ ಗ್ರಾಹಕರಿಂದ ನಾಣ್ಯ ಸ್ವೀಕರಿಸದೆ ಇರುವುದು ತಪ್ಪು. ಹಾಗೊಂದು ವೇಳೆ ಅವುಗಳನ್ನು ಪಡೆಯದಿದ್ದರೆ ಅಂತವರ ವಿರುದ್ಧ ದೂರು ದಾಖಲಿಸಬಹುದಾಗಿದೆ ಎಂದು ತಿಳಿಸಿದರು.

ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಮಹೇಂದ್ರ ಲದ್ದಡ, ಸಿಂಡಿಕೇಟ್‌ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ಚಂದ್ರಶೇಖರ ಪಾಟೀಲ್‌, ರವಿ ಕರಮಡಿ ಸೇರಿದಂತೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ