ಆ್ಯಪ್ನಗರ

5 ಸೋಂಕಿತರ ಟ್ರ್ಯಾವೆಲ್‌ ಹಿಸ್ಟರಿ

ಧಾರವಾಡ : ಹೊರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸಿದ ಐವರಲ್ಲಿಗುರುವಾರ ಕೊರೊನಾ ಸೋಂಕು ದೃಢಪಟ್ಟಿದ್ದು ಅವರನ್ನು ಪಿ-1505, ಪಿ-1506, ಪಿ-1507, ಪಿ-1508 ಹಾಗೂ ಪಿ-1509 ಎಂದು ಗುರುತಿಸಲಾಗಿದೆ. ಈ ಐದು ಜನರ ಪ್ರಯಾಣದ ವಿವರಗಳನ್ನು ಸಾರ್ವಜನಿಕ ಮಾಹಿತಿಗಾಗಿ ಜಿಲ್ಲಾಡಳಿತ ಪ್ರಕಟಿಸಿದೆ.

Vijaya Karnataka 22 May 2020, 5:00 am
ಧಾರವಾಡ : ಹೊರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸಿದ ಐವರಲ್ಲಿಗುರುವಾರ ಕೊರೊನಾ ಸೋಂಕು ದೃಢಪಟ್ಟಿದ್ದು ಅವರನ್ನು ಪಿ-1505, ಪಿ-1506, ಪಿ-1507, ಪಿ-1508 ಹಾಗೂ ಪಿ-1509 ಎಂದು ಗುರುತಿಸಲಾಗಿದೆ. ಈ ಐದು ಜನರ ಪ್ರಯಾಣದ ವಿವರಗಳನ್ನು ಸಾರ್ವಜನಿಕ ಮಾಹಿತಿಗಾಗಿ ಜಿಲ್ಲಾಡಳಿತ ಪ್ರಕಟಿಸಿದೆ.
Vijaya Karnataka Web 5 travel history of the infected
5 ಸೋಂಕಿತರ ಟ್ರ್ಯಾವೆಲ್‌ ಹಿಸ್ಟರಿ


ಪಿ-1505 ಹಾಗೂ ಪಿ-1506 ಹಳೇ ಹುಬ್ಬಳ್ಳಿಯ ನಿವಾಸಿಗಳು. ಇವರು ಮಾ.18ರಂದು ಹುಬ್ಬಳ್ಳಿಯಿಂದ ವಿಜಯವಾಡ ರೈಲು ಮೂಲಕ ಕರ್ನೂಲ್‌ನಲ್ಲಿಯ ಸಂಬಂಧಿಗಳ ಮನೆಗೆ ಹೋಗಿದ್ದರು. ಅಲ್ಲಿಮೇ 17ರ ವರೆಗೆ ವಾಸವಿದ್ದು, 17ರಂದು ಸಂಜೆ 5ಕ್ಕೆ ಕುಟುಂಬದ 4 ಜನ ಸದಸ್ಯರು ಸ್ಥಳೀಯ ಆಟೊ ಮೂಲಕ ಸಂಜೆ 6-30ಕ್ಕೆ ಅಲ್ಲಪೂರಂ ಚೌರಾಷ್ಟ್ರ ತಲುಪಿದರು. ಅಲ್ಲಿಂದ ಬಾಡಿಗೆ ಕಾರಿನ ಮೂಲಕ ರಾಯಚೂರು, ಮಾನ್ವಿ, ಗಂಗಾವತಿ ಮಾರ್ಗವಾಗಿ ಬಂದಿದ್ದಾರೆ. ರಾಯಚೂರಿನ ಶಕ್ತಿನಗರ ಮತ್ತು ಧಾರವಾಡ ಜಿಲ್ಲೆಯ ಅಣ್ಣಿಗೇರಿ ಚೆಕ್‌ಪೊಸ್ಟ್‌ ದಾಟಿ ಮೇ 18ರಂದು ಬೆಳಗ್ಗೆ 9ಕ್ಕೆ ಧಾರವಾಡ ತಲುಪಿದ್ದಾರೆ. ಅದೇ ದಿನ ಎಲ್ಲ4 ಸದಸ್ಯರನ್ನು ಕ್ವಾರಂಟೈನ್‌ನಲ್ಲಿಇಡಲಾಗಿತ್ತು. ಮೇ 20 ರಂದು ಪಿ-1505 ಹಾಗೂ ಪಿ-1506 ಕೊರೊನಾ ದೃಢಪಟ್ಟಿದ್ದರಿಂದ ಕಿಮ್ಸ್‌ಗೆ ದಾಖಲಿಸಲಾಗಿದೆ.

ಪಿ-1507, ಪಿ-1508 ಹಾಗೂ ಪಿ-1509: ಇವರು ಮುಂಬಯಿಯ ಶಿವಾಜಿ ನಗರದ ನಿವಾಸಿಗಳು. ಮೇ 16ರಂದು ರಾತ್ರಿ 11.30ಕ್ಕೆ ಬಾಡಿಗೆ ಇನ್ನೊವಾ ವಾಹನ ಸಂಖ್ಯೆ: ಎಂ.ಎಚ್‌- 04- ಇಡಿ- 5367 ಮೂಲಕ ಕುಟುಂಬದ 11 ಸದಸ್ಯರು ಮುಂಬಯಿಯಿಂದ ಹೊರಟು ಮೇ 17ರಂದು ರಾತ್ರಿ 8ಕ್ಕೆ ಕೊಲ್ಲಾಪುರ ಚೆಕ್‌ಪೊಸ್ಟ್‌ ಹತ್ತಿರ ಊಟ ಮಾಡಿದ್ದಾರೆ. ನಂತರ ರಾತ್ರಿ 11.30ಕ್ಕೆ ಕೊಲ್ಲಾಪುರ ಚೆಕ್‌ಪೋಸ್ಟ್‌ನಿಂದ ಹೊರಟು ಮೇ 18ರಂದು ಬೆಳಗ್ಗೆ 5ಕ್ಕೆ ಧಾರವಾಡ ತಲುಪಿದ್ದಾರೆ. ಅದೇ ದಿನ ಎಲ್ಲ11 ಜನರ ಗಂಟಲು ದ್ರವ ಪರೀಕ್ಷೆಗೊಳಪಡಿಸಿ ಕ್ವಾರಂಟೈನ್‌ನಲ್ಲಿರಿಸಲಾಗಿತ್ತು. ಮೇ 20ರಂದು ಇವರಲ್ಲಿಮೂವರು ಕೊರೊನಾ ಸೋಂಕಿತರೆಂದು ದೃಢಪಟ್ಟಿದ್ದರಿಂದ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಐದು ವ್ಯಕ್ತಿಗಳನ್ನು ಸಂಪರ್ಕಿಸಿದ ಸಾರ್ವಜನಿಕರಿಗೆ ಕೊರೊನಾ ಸೋಂಕು ತಗಲುವ ಸಾಧ್ಯತೆ ಇದ್ದು, ಅಂತಹ ಎಲ್ಲವ್ಯಕ್ತಿಗಳು ಕೂಡಲೇ ಕೊರೊನಾ ಸಹಾಯವಾಣಿ 1077ಗೆ ಕರೆಮಾಡಿ ತಮ್ಮ ವಿವರ ನೀಡಬೇಕು ಹಾಗೂ ಕೂಡಲೇ ಸಮೀಪದ ಸರಕಾರಿ ಆಸ್ಪತ್ರೆಗೆ ಹಾಜರಾಗಿ ಪರೀಕ್ಷೆಗೆ ಒಳಪಡಬೇಕು ಎಂದು ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ