ಆ್ಯಪ್ನಗರ

17ರ ಯುವಕನ ಮೂತ್ರ ಚೀಲದಲ್ಲಿತ್ತು 800 ಗ್ರಾಂ ಗಡ್ಡೆ; ಯಶಸ್ವಿ ಶಸ್ತ್ರಚಿಕಿತ್ಸೆ

17 ವರ್ಷದ ಯುವಕನೊಬ್ಬನಿಗೆ ಆಗಾಗ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿತ್ತು. ಮೂತ್ರಚೀಲದ ಹಿಂಭಾಗದಲ್ಲಿ ಗೆಡ್ಡೆ ಇರುವುದನ್ನು ವೈದ್ಯರು ಪತ್ತೆ ಮಾಡಿದ್ದರು. ಹುಟ್ಟಿನಿಂದಲೇ ಬಂದ ಇದು ನರಗಳ ಅರ್ಭುದ ಗಡ್ಡೆ ಎಂದು ಪತ್ತೆ ಹಚ್ಚಿ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಲು ತೀರ್ಮಾನಿಸಿದರು.

Vijaya Karnataka Web 19 Oct 2020, 4:55 pm
ಧಾರವಾಡ: ಯುವಕನೊಬ್ಬನಿಗೆ ಮೂತ್ರಚೀಲದ ಹಿಂಭಾಗದಲ್ಲಿ ಬೆಳೆದಿದ್ದ 800 ಗ್ರಾಂ ಗಡ್ಡೆಯನ್ನು ಧಾರವಾಡ ಎಸ್‌ಡಿಎಂ ವೈದ್ಯಕೀಯ ಕಾಲೇಜಿನ ಶಸ್ತ್ರಚಿಕಿತ್ಸಕರು ಇತ್ತೀಚೆಗೆ ಯಶಸ್ವಿಯಾಗಿ ಹೊರತೆಗೆದಿದ್ದಾರೆ.
Vijaya Karnataka Web ಸ್ಟೆತಾಸ್ಕೋಪ್‌
ಸ್ಟೆತಾಸ್ಕೋಪ್‌


17 ವರ್ಷದ ಯುವಕನೊಬ್ಬನಿಗೆ ಆಗಾಗ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿತ್ತು. ಮೂತ್ರರೋಗ ವಿಭಾಗದಲ್ಲಿ ಕಳೆದ ಸೆಪ್ಟೆಂಬರ್‌ನಲ್ಲಿ ತೋರಿಸಿದಾಗ ಮೂತ್ರಚೀಲದ ಹಿಂಭಾಗದಲ್ಲಿ ಗೆಡ್ಡೆ ಇರುವುದನ್ನು ವೈದ್ಯರು ಪತ್ತೆ ಮಾಡಿದ್ದರು. ಹುಟ್ಟಿನಿಂದಲೇ ಬಂದ ಇದು ನರಗಳ ಅರ್ಭುದ ಗಡ್ಡೆ ಎಂದು ಪತ್ತೆ ಹಚ್ಚಿ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಲು ತೀರ್ಮಾನಿಸಿದರು.

ಎಸ್‌ಡಿಎಂ ವೈದ್ಯಕೀಯ ನಿರ್ದೇಶಕ ಡಾ.ನಿರಂಜಕುಮಾರ್‌ ಮಾರ್ಗದರ್ಶನದಲ್ಲಿ ಇತ್ತೀಚೆಗೆ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಪ್ರೊ.ಬಿ.ಶ್ರೀನಿವಾಸ ಪೈ ಅವರ ನೇತೃತ್ವದ ಶಸ್ತ್ರಚಿಕಿತ್ಸಕರ ತಂಡ ಸಜ್ಜುಗೊಂಡಿತು. ಡಾ.ಪ್ರಶಾಂತ ತುಬಚಿ, ಡಾ.ಸಂದೀಪ ಪಾಟೀಲ, ಡಾ.ಸಾಧಿಕ್‌ ಹುಸೇನ್‌ ಕಚವಿ, ಡಾ.ಸಿ.ಜಿ.ಸುನೀಲ್‌, ಡಾ.ರೂಪಶ್ರೀ, ಡಾ.ಯಜ್ಞೇಶ್‌, ಅರಿವಳಿಕೆ ತಜ್ಞ ಡಾ.ಇಮ್ರಾನ್‌, ಶುಶ್ರೂಷಕಿ ಶ್ರೀದೇವಿ ಅವರು ತಂಡದಲ್ಲಿದ್ದರು.

ಶಸ್ತ್ರಚಿಕಿತ್ಸೆ ನಂತರ ಬಾಲಕ ಶೀಘ್ರ ಗುಣಮುಖನಾಗಿದ್ದಾನೆ. ಹೆಚ್ಚಿನ ಅಧ್ಯಯನಕ್ಕೆ ಈ ಗಡ್ಡೆಯನ್ನು ಪರೀಕ್ಷೆಗೆ ಒಳಪಡಿಸಿದಾಗ ಇದು ಗ್ಲಿಯೋನ್ಯೂರೋಬ್ಲಾಸ್ಟೊಮ್‌ ಎಂದು ವೈದ್ಯರು ಗುರುತಿಸಿದ್ದಾರೆ. ಜನ್ಮಜಾತವಾಗಿರುವ ಹಾಗೂ ನರಗಳಿಂದ ಸೃಷ್ಟಿಯಾಗುವ ಈ ಗೆಡ್ಡೆಯು ಹೊಟ್ಟೆಯ ಕೆಳಭಾಗದಲ್ಲಿಪತ್ತೆಯಾಗುವುದು ತೀರಾ ವಿರಳ. ಈ ವರೆಗೂ ಇಂಥ 20 ಪ್ರಕರಣಗಳು ಮಾತ್ರ ಕಂಡುಬಂದಿವೆ ಎನ್ನುತ್ತಾರೆ ಪ್ರೊ. ಶ್ರೀನಿವಾಸ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ