ಆ್ಯಪ್ನಗರ

ಧಾರವಾಡ: ಕೊರೊನಾ ತಡೆಗೆ 800 ಸ್ಥಳಗಳಲ್ಲಿ ಸೀಲ್‌ಡೌನ್‌

ಮಾಸ್ಕ್‌ ಬಳಕೆ, ಸಾಮಾಜಿಕ ಅಂತರ ಪ್ರಾಥಮಿಕ ನಿಯಮ ಪಾಲಿಸದೇ ಹೊರಗಡೆ ಅನಗತ್ಯವಾಗಿ ತಿರುಗಾಡುವವರ ಮೇಲೆ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆ ವಾಹನಗಳ ಮೂಲಕ ಜಲಫಿರಂಗಿ ಸಿಂಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ತಿಳಿಸಿದ್ದಾರೆ.

Vijaya Karnataka Web 22 Jul 2020, 12:31 am
ಧಾರವಾಡ: ಕೊರೊನಾ ಸೋಂಕು ಕಂಡುಬಂದ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಸುಮಾರು 800ಕ್ಕೂ ಹೆಚ್ಚು ಸ್ಥಳಗಳಲ್ಲಿ ಸೀಲ್‌ಡೌನ್‌ ಮಾಡಲಾಗಿದೆ. ಪ್ರತಿ ಸೀಲ್‌ಡೌನ್‌ ಪ್ರದೇಶಕ್ಕೆ ಇನ್ಸಿಡೆಂಟ್‌ ಕಮಾಂಡರ್‌ಗಳನ್ನು ನೇಮಿಸಲಾಗಿದೆ.
Vijaya Karnataka Web ಸೀಲ್‌ಡೌನ್‌
ಸೀಲ್‌ಡೌನ್‌


ಈ ಅಧಿಕಾರಿಗಳು ಸೀಲ್‌ಡೌನ್‌ ಪ್ರದೇಶದ ಪ್ರಾಥಮಿಕ ಸಂಪರ್ಕ ಹೊಂದಿದವರ ಮಾಹಿತಿ, ಗರ್ಭಿಣಿ, ಬಾಣಂತಿಯರು, ಮಕ್ಕಳು ಹಾಗೂ ಇತರೆ ಕಾಯಿಲೆಗಳಿಂದ ಬಳಲುತ್ತಿರುವ ದುರ್ಬಲ ಆರೋಗ್ಯದ ವ್ಯಕ್ತಿಗಳ ಮಾಹಿತಿ ಹೊಂದಿರುತ್ತಾರೆ. ಈ ಕುರಿತು ಜಿಟಿ ವೆಬ್‌ಪೋರ್ಟಲ್‌ನಲ್ಲಿ ಪ್ರಕಟಿಸಲಾಗಿದೆ. ಸಾರ್ವಜನಿಕರು ತಮ್ಮ ಪ್ರದೇಶದ ಅಧಿಕಾರಿಯ ದೂ.ಸಂ.ಗೆ ಸಂಪರ್ಕಿಸಿ ತಮ್ಮ ತೊಂದರೆ ನಿವೇದಿಸಿಕೊಳ್ಳಬಹುದು ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

ಕೊರೊನಾ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳನ್ನು ಯಾರೂ ಉಲ್ಲಂಘಿಸಬಾರದು. ಈಗಾಗಲೇ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಜಲಫಿರಂಗಿ ಬಳಸಲು ಮುಂದಾಗಿವೆ.

ಮಾಸ್ಕ್‌ ಬಳಕೆ, ಸಾಮಾಜಿಕ ಅಂತರ ಪ್ರಾಥಮಿಕ ನಿಯಮ ಪಾಲಿಸದೇ ಹೊರಗಡೆ ಅನಗತ್ಯವಾಗಿ ತಿರುಗಾಡುವವರ ಮೇಲೆ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆ ವಾಹನಗಳ ಮೂಲಕ ಜಲಫಿರಂಗಿ ಸಿಂಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ತಿಳಿಸಿದ್ದಾರೆ. ಜಲಫಿರಂಗಿ ಅಪಾಯಕಾರಿ ಅಲ್ಲವಾದರೂ ಇಂತಹ ಕ್ರಮಕ್ಕೆ ಜನರು ಅವಕಾಶ ನೀಡದ ರೀತಿ ವರ್ತಿಸಬೇಕು ಎಂದು ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ