ಆ್ಯಪ್ನಗರ

ಅಧಿಕೃತ ಆಹ್ವಾನ, ಖರ್ಚಿಗೆ ಪಾಲಿಕೆ ಹಣ: ಮುತ್ತಣ್ಣವರ

ಹುಬ್ಬಳ್ಳಿ : ಮಹಾನಗರ ಪಾಲಿಕೆ ಸ್ವಚ್ಛ ಭಾರತ ಯೋಜನೆಯಡಿ ಖರೀದಿಸಿದ ಕಸ ಸಂಗ್ರಹ ವಾಹನಗಳಿಗೆ ಚಾಲನೆ ನೀಡಲು ಚಿತ್ರ ನಟಿ ರಾಗಿಣಿ ದ್ವಿವೇದಿ ಅವರಿಗೆ ಅಧಿಕೃತ ಆಹ್ವಾನ ನೀಡಲಾಗಿತ್ತು. ಅವರು ಬಂದು ಹೋಗುವ ಖರ್ಚನ್ನು ಪಾಲಿಕೆಯಿಂದಲೇ ನೀಡಲು ನಿರ್ಧರಿಸಲಾಗಿತ್ತು ಎಂದು ಆರೋಗ್ಯ ಮತ್ತು ನೈರ್ಮಲ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಾನಂದ ಮುತ್ತಣ್ಣವರ ಹೇಳಿಕೊಂಡಿದ್ದಾರೆ.

Vijaya Karnataka 21 Feb 2019, 5:00 am
ಹುಬ್ಬಳ್ಳಿ : ಮಹಾನಗರ ಪಾಲಿಕೆ ಸ್ವಚ್ಛ ಭಾರತ ಯೋಜನೆಯಡಿ ಖರೀದಿಸಿದ ಕಸ ಸಂಗ್ರಹ ವಾಹನಗಳಿಗೆ ಚಾಲನೆ ನೀಡಲು ಚಿತ್ರ ನಟಿ ರಾಗಿಣಿ ದ್ವಿವೇದಿ ಅವರಿಗೆ ಅಧಿಕೃತ ಆಹ್ವಾನ ನೀಡಲಾಗಿತ್ತು. ಅವರು ಬಂದು ಹೋಗುವ ಖರ್ಚನ್ನು ಪಾಲಿಕೆಯಿಂದಲೇ ನೀಡಲು ನಿರ್ಧರಿಸಲಾಗಿತ್ತು ಎಂದು ಆರೋಗ್ಯ ಮತ್ತು ನೈರ್ಮಲ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಾನಂದ ಮುತ್ತಣ್ಣವರ ಹೇಳಿಕೊಂಡಿದ್ದಾರೆ.
Vijaya Karnataka Web actress raghini decided to spend on the expenses muthanna
ಅಧಿಕೃತ ಆಹ್ವಾನ, ಖರ್ಚಿಗೆ ಪಾಲಿಕೆ ಹಣ: ಮುತ್ತಣ್ಣವರ


ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಗಿಣಿ ದ್ವಿವೇದಿ ಉಳಿದುಕೊಂಡಿದ್ದ ನಗರದ ಗೋಕುಲ ರಸ್ತೆಯ ಸ್ಟಾರ್‌ ಹೋಟೆಲ್‌ದಲ್ಲಿ ಒಟ್ಟು 7,950 ರೂ. ಮೊತ್ತದ ಊಟ, ಕಾಫಿ, ಜ್ಯೂಸ್‌, ಉಪಹಾರ ಸೇವಿಸಿದ್ದಾರೆ. ಅಲ್ಲದೇ ಬೆಂಗಳೂರು-ಹುಬ್ಬಳ್ಳಿ-ಬೆಂಗಳೂರು ವಿಮಾನ ಪ್ರಯಾಣಕ್ಕಾಗಿ 18,304 ರೂ. ಖರ್ಚು ಮಾಡಿದ್ದಾರೆ. ಇದಲ್ಲದೇ ಅದೇ ಸ್ಟಾರ್‌ ಹೋಟೆಲ್‌ದಲ್ಲಿ 75 ಜನರ ಊಟಕ್ಕೆ 52,029 ರೂ. ಹಾಗೂ 8 ಕಲಾ ತಂಡಗಳಿಗೆ 92 ಸಾವಿರ ರೂ. ಬಿಲ್‌ ಪಾವತಿಸಲಾಗಿದೆ ಎಂದು ಮುತ್ತಣ್ಣವರ ತಿಳಿಸಿದ್ದಾರೆ.

ಒಂದು ಊಟಕ್ಕೆ 575 ರೂ. ದರ ವಿಧಿಸಿದ್ದು, ಒಟ್ಟು 75 ಜನರು ಊಟ ಮಾಡಿದ್ದಾರೆ. ರಾಗಿಣಿ ದ್ವಿವೇದಿ ಉಳಿದುಕೊಂಡ ರೂಂ ಬಾಡಿಗೆ ಟ್ಯಾಕ್ಸ್‌ ಸೇರಿ 3,540 ಮತ್ತು ಊಟೋಪಚಾರಕ್ಕೆ 4,366 ರೂ. ಹಾಗೂ ಮೈಕ್‌ಗೆ 1ಸಾವಿರ ರೂ. ಬಿಲ್‌ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಕಲಾವಿದರಿಗೆ 92 ಸಾವಿರ ರೂ. ಖರ್ಚು

ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಕಲಾ ಪ್ರದರ್ಶನ ಮಾಡಿದ 8 ತಂಡಗಳಿಗೆ 92 ಸಾವಿರ ರೂ. ಖರ್ಚು ಮಾಡಲಾಗಿದೆ. ಗೋಪನಕೊಪ್ಪದ ಸಂಬಾಳ ವಾದ್ಯ ತಂಡಕ್ಕೆ 9,500, ಅದೇ ಗ್ರಾಮದ ಜಗ್ಗಲಗಿ ತಂಡಕ್ಕೆ 13,200, ಕಲಘಟಗಿ ಸೋಮನಕೊಪ್ಪದ ಮಹಿಳಾ ಕೋಲಾಟ ತಂಡಕ್ಕೆ 11,500, ಸುಳ್ಳ ಗ್ರಾಮದ ಮಹಿಳಾ ಡೊಳ್ಳು ಕುಣಿತ ತಂಡಕ್ಕೆ 11,400, ಕೊಪ್ಪಳದ ಅಬ್ಬಿಗೇರಿ ಸಮ್ಮಾಳವಾದನ ತಂಡಕ್ಕೆ 11,200, ಸುಳ್ಳದ ಝಾಂಜ್‌ ಮೇಳಕ್ಕೆ 10,500 ರೂ., ಬಳ್ಳಾರಿ ಜಿಲ್ಲೆಯ ಸೋಮಲಾಪುರದ ಹಗಲು ವೇಷ ಕಲಾತಂಡಕ್ಕೆ 11,300 ಹಾಗೂ ಹುಬ್ಬಳ್ಳಿ ಅಯೋಧ್ಯ ನಗರದ ಬ್ಯಾಚೋ ಸದಟ್ಟ ತಂಡಕ್ಕೆ 13,400 ಬಿಲ್‌ ಪಾವತಿಸಲಾಗಿದೆ ಎಂದು ಮುತ್ತಣ್ಣವರ ನೀಡಿದ ದಾಖಲೆಗಳು ತಿಳಿಸುತ್ತವೆ.

ಈ ಎಲ್ಲಾ ತಂಡಗಳಲ್ಲಿ ತಲಾ 6 ಕಲಾವಿದರಿದ್ದು, ಅವರ ವಾಹನ ಬಾಡಿಗೆ ಮತ್ತು ಖರ್ಚು ವೆಚ್ಚ ದಾಖಲಿಸಿರುವುದು ವಿಶೇಷ. ಆದರೆ, ಆಯುಕ್ತರು ನೀಡಿರುವ ಸಾಮಾನ್ಯಸಭೆ ವಿಷಯ ಪಟ್ಟಿಯ ಟಿಪ್ಪಣಿಯಲ್ಲಿ ಕೇವಲ 5 ಕಲಾತಂಡಗಳು ಪಾಲ್ಗೊಂಡಿದ್ದವು ಎಂದು ತಿಳಿಸಿದ್ದರು. ಆದರೆ, ಆರೋಗ್ಯ ಮತ್ತು ನೈರ್ಮಲ್ಯ ಸ್ಥಾಯಿ ಸಮಿತಿಗೆ ಸಲ್ಲಿಕೆಯಾಗಿರುವ ಕಲಾವಿದರ ಪಟ್ಟಿಯಲ್ಲಿ 8 ತಂಡಗಳ ಹೆಸರು ಇವೆ. ಅಲ್ಲದೇ ಅಧಿಕೃತ ಆಹ್ವಾನದ ಕುರಿತಾಗಿ ಪಾಲಿಕೆ ಆಯುಕ್ತರು ಇಲ್ಲವೇ ಮೇಯರ್‌ ಪತ್ರಗಳ ದಾಖಲೆಗಳನ್ನು ಮುತ್ತಣ್ಣವರ ನೀಡಿರುವುದಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ