ಆ್ಯಪ್ನಗರ

ಪರಿಸರ ಕಾಳಜಿ ಮೈಗೂಡಿಸಿಕೊಳ್ಳಲು ಸಲಹೆ

ಹುಬ್ಬಳ್ಳಿ : ಗಣೇಶೋತ್ಸವದಲ್ಲಿ ಮಣ್ಣನಿಂದ ಮಾಡಿದ ಮೂರ್ತಿಗಳನ್ನು ಬಳಸುವ ಮೂಲಕ ಪರಿಸರ ಕಾಳಜಿ ಮೈಗೂಡಿಸಿಕೊಳ್ಳಬೇಕು ಎಂದು ಹುಬ್ಬಳ್ಳಿ ಸಾರ್ವಜನಿಕ ಗಣೇಶ ಸಮಿತಿಗಳ ಮಹಾಮಂಡಳದ ಅಧ್ಯಕ್ಷ ಮೋಹನ ಲಿಂಬಿಕಾಯಿ ಹೇಳಿದರು.

Vijaya Karnataka 28 Aug 2019, 5:00 am
ಹುಬ್ಬಳ್ಳಿ : ಗಣೇಶೋತ್ಸವದಲ್ಲಿ ಮಣ್ಣನಿಂದ ಮಾಡಿದ ಮೂರ್ತಿಗಳನ್ನು ಬಳಸುವ ಮೂಲಕ ಪರಿಸರ ಕಾಳಜಿ ಮೈಗೂಡಿಸಿಕೊಳ್ಳಬೇಕು ಎಂದು ಹುಬ್ಬಳ್ಳಿ ಸಾರ್ವಜನಿಕ ಗಣೇಶ ಸಮಿತಿಗಳ ಮಹಾಮಂಡಳದ ಅಧ್ಯಕ್ಷ ಮೋಹನ ಲಿಂಬಿಕಾಯಿ ಹೇಳಿದರು.
Vijaya Karnataka Web advice on incorporating environmental concerns
ಪರಿಸರ ಕಾಳಜಿ ಮೈಗೂಡಿಸಿಕೊಳ್ಳಲು ಸಲಹೆ


ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶ ಸಮಿತಿಗಳ ಮಹಾಮಂಡಳದ 43ನೇ ವರ್ಷದ ಸರ್ವ ಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು.

ಮಳೆ ಪ್ರವಾಹದಿಂದ ಅನೇಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂತ್ರಸ್ತರಿಗೆ ಸಹಾಯಹಸ್ತ ಚಾಚುವ ನಿಟ್ಟಿನಲ್ಲಿ ಗಣೇಶ ಮಂಡಳಿಗಳು ಶ್ರಮಿಸಬೇಕು. ಪ್ರತಿಯೊಂದು ಮಂಡಳಿಯೂ ಪರಿಸರ ಪ್ರೇಮಿ ಗಣೇಶನ ಪ್ರತಿಷ್ಠಾಪಿಸುವಂತೆ ಮನವಿ ಮಾಡಿದರು.

ಇದೇ ವೇಳೆ ಸೆ.2 ರಂದು ಗಣೇಶ ವಿಗ್ರಹ ಪ್ರತಿಷ್ಠಾಪನೆ, 10ಕ್ಕೆ ಹಳೆ ಹುಬ್ಬಳ್ಳಿಯ ಗಣೇಶ ವಿಗ್ರಹಗಳ ವಿಸರ್ಜನೆ, 12ಕ್ಕೆ ಸಮಗ್ರ ಹುಬ್ಬಳ್ಳಿಯ ಗಣೇಶ ವಿಗ್ರಹಗಳ ವಿಸರ್ಜನೆ ಮಾಡುವ ತೀರ್ಮಾನ ಕೈಗೊಳ್ಳಲಾಯಿತು.

ಮಾಜಿ ಮಹಾಪೌರ ಡಿ.ಕೆ.ಚವ್ಹಾಣ, ಅಲ್ತಾಫ ಕಿತ್ತೂರು, ಶಾಂತರಾಜ ಪೋಳ, ರಾಘವೇಂದ್ರ ಮುರಗೋಡ, ಎಸ್‌.ಎಸ್‌. ಕಮಡೊಳ್ಳಿಶೆಟ್ರು, ಅನಿಲ ಕವಿಶೆಟ್ಟಿ, ಚನ್ನಬಸಪ್ಪಾ ಧಾರವಾಡಶೆಟ್ರು, ಸುರೇಶ ಮೆಣಸಗಿ, ರೂಪಾ ಅಂಗಡಿ, ಅಕ್ಕಮ್ಮಾ ಕಂಬಳಿ, ಪುಷ್ಪಾ ಹಿತ್ತಾಳಿ, ಮಂಗಳಾ ಬೊಮ್ಮನಹಳ್ಳಿ, ಕೆ.ಐ.ಪೂಜಾರ, ಹೆಸ್ಕಾಂ ಅಧಿಕಾರಿ ರಮೇಶಗೌಡ ಸಿ.ಎಂ, ರಾಘವೇಂದ್ರ ಬೆಟಗೇರಿ, ಶಿವಾನಂದ ಕೊಡ್ಲಿ, ಹರೀಶ ಭಾರಡ, ಅನಿಲ ಬೆವಿನಕಟ್ಟಿ ಇದ್ದರು.

ಅಮರೇಶ ಹಿಪ್ಪರಗಿ ಸ್ವಾಗತಿಸಿದರು. ಡಾ. ಆದಾನಂದ ತೆಗ್ಗಿನಹಳ್ಳಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ