ಆ್ಯಪ್ನಗರ

ಕೃಷಿ ಅಭಿವೃದ್ಧಿ, ಶಿಕ್ಷಣ,ಸಣ್ಣ ಉದ್ಯಮಶೀಲತೆ ಬೆಳವಣಿಗೆ ಸಂವಾದ

ಹುಬ್ಬಳ್ಳಿ : ದೇಶಪಾಂಡೆ ಫೌಂಡೇಶನ್‌ ವತಿಯಿಂದ ಫೆಬ್ರವರಿ 1 ಮತ್ತು 2ರಂದು ಅಭಿವೃದ್ಧಿ ಶೃಂಗ-2020 ಹಾಗೂ ನವೋದ್ಯಮಿಗಳ ಸಮ್ಮೇಳನ ಆಯೋಜಿಸಲಾಗಿದ್ದು, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಪಾಲ್ಗೊಳ್ಳಲಿದ್ದಾರೆ ಎಂದು ಫೌಂಡೇಶನ್‌ ಸಂಸ್ಥಾಪಕ ಗುರುರಾಜ್‌ ದೇಶಪಾಂಡೆ ಅವರು ತಿಳಿಸಿದರು.

Vijaya Karnataka 18 Jan 2020, 5:00 am
ಹುಬ್ಬಳ್ಳಿ : ದೇಶಪಾಂಡೆ ಫೌಂಡೇಶನ್‌ ವತಿಯಿಂದ ಫೆಬ್ರವರಿ 1 ಮತ್ತು 2ರಂದು ಅಭಿವೃದ್ಧಿ ಶೃಂಗ-2020 ಹಾಗೂ ನವೋದ್ಯಮಿಗಳ ಸಮ್ಮೇಳನ ಆಯೋಜಿಸಲಾಗಿದ್ದು, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಪಾಲ್ಗೊಳ್ಳಲಿದ್ದಾರೆ ಎಂದು ಫೌಂಡೇಶನ್‌ ಸಂಸ್ಥಾಪಕ ಗುರುರಾಜ್‌ ದೇಶಪಾಂಡೆ ಅವರು ತಿಳಿಸಿದರು.
Vijaya Karnataka Web agricultural development education small entrepreneurship growth dialogue
ಕೃಷಿ ಅಭಿವೃದ್ಧಿ, ಶಿಕ್ಷಣ,ಸಣ್ಣ ಉದ್ಯಮಶೀಲತೆ ಬೆಳವಣಿಗೆ ಸಂವಾದ


ನಗರದಲ್ಲಿಸುದ್ದಿಗೋಷ್ಠಿಯಲ್ಲಿಶುಕ್ರವಾರ ಮಾತನಾಡಿದ ಅವರು, ಈ ಬಾರಿ ಜೋಡಣೆ ಉದ್ದೇಶ, ನಾವೀನ್ಯತೆ ಮತ್ತು ಪರಿಣಾಮ (ಅಲೈನಿಂಗ್‌ ಇಂಟೆನ್‌ಷನ್‌, ಇನ್ನೋವೇಶನ್‌ ಆ್ಯಂಡ್‌ ಇಂಪ್ಯಾಕ್ಟ್) ಪರಿಕಲ್ಪನೆಯಡಿ ಕೃಷಿ ಅಭಿವೃದ್ಧಿ, ಶಿಕ್ಷಣ ಹಾಗೂ ಸಣ್ಣ ಉದ್ಯಮಶೀಲತೆ ಬೆಳವಣಿಗೆ ಕುರಿತು ಸಂವಾದ ನಡೆಯಲಿದೆ ಎಂದರು.

ಕಾರ್ಪೋರೇಟ್‌ ಕಂಪನಿಗಳ ಸಾಮಾಜಿಕ ಜವಾಬ್ದಾರಿಗೆ (ಸಿಎಸ್‌ಆರ್‌)ಯೋಜನೆಯಡಿ ಪ್ರತಿ ವರ್ಷ 20 ಸಾವಿರ ಕೋಟಿ ರೂ. ಸಂಗ್ರಹವಾಗುತ್ತಿದೆ. ಈ ಅನುದಾನ ಇದುವರೆಗೆ ಅನುತ್ಪಾದಕತೆ ಮಾತ್ರ ಬಳಕೆಯಾಗುತ್ತಿದ್ದು, ಕೃಷಿ, ಶಿಕ್ಷಣ ಮತ್ತು ಸಣ್ಣ ಉದ್ಯಮಶೀಲತೆ ಕ್ಷೇತ್ರಗಳಲ್ಲೂಉಪಯೋಗಿಸಬಹುದು ಎಂಬುದರ ಬಗ್ಗೆ ಚರ್ಚಿಸಲಾಗುತ್ತದೆ. ಕೇಂದ್ರ ಕೃಷಿ ಇಲಾಖೆ ಕಾರ್ಯದರ್ಶಿ ವಸುಧಾ ಮಿಶ್ರಾ, ಏರಿಯನ್‌ ಕೆಪಿಟಲ್‌ನ ಅಧ್ಯಕ್ಷ ಮೋಹನದಾಸ್‌ ಪೈ, ನಬಾರ್ಡ್‌ ಚೇರಮನ್‌ ಹರಿಶಕುಮಾರ ಬನಾಲವಾಲಾ, ಹೇಮಂತ ಶರ್ಮಾ ಸೇರಿದಂತೆ ಸಾಧಕರು, ನೀತಿ ನಿರೂಪಕರು ಪ್ರಮುಖರು ಪಾಲ್ಗೊಂಡು ಸಾಮಾಜಿಕ ಪರಿಣಾಮಗಳ ಬಗ್ಗೆ ಮಾಹಿತಿ ನೀಡುವರು ಎಂದು ವಿವರಿಸಿದರು.

ಕೌಶಲಾಭಿವೃದ್ಧಿ ಕೇಂದ್ರ ಉದ್ಘಾಟನೆ
ಫೆಬ್ರವರಿ 2ರಂದು ಗೋಕುಲ ರಸ್ತೆಯಲ್ಲಿರುವ ಕೌಶಲಾಭಿವೃದ್ಧಿ ಕೇಂದ್ರವನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಉದ್ಘಾಟಿಸುವರು. ಈ ಕೇಂದ್ರದಲ್ಲಿ800 ಯುವತಿಯರು, 600 ಯುವಕರು ಕೌಶಲ ತರಬೇತಿ ಪಡೆಯುತ್ತಿದ್ದಾರೆ. ಇಲ್ಲಿತರಬೇತಿ ಪಡೆದವರಲ್ಲಿಶೇ 90 ರಷ್ಟು ಯುವಕರು ಉದ್ಯೋಗ ಪಡೆದಿದ್ದಾರೆ ಎಂದು ಗುರುರಾಜ್‌ ದೇಶಪಾಂಡೆ ವಿವರಿಸಿದರು. ಇದೇ ಕೇಂದ್ರದಲ್ಲಿಫೆ 1ರಂದು ನವೋದ್ಯಮಿಗಳ ಸಮಾವೇಶ, 2ರಂದು ಸ್ಟಾರ್ಟ್‌ಅಪ್‌ ಡೈಲಾಗ್‌ ಜರುಗಲಿದೆ. ನಾನಾ ರಾಜ್ಯಗಳಿಂದ 400 ಪ್ರತಿನಿಧಿನಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು. ಯುವ ಸಮಿತ್‌ನಲ್ಲಿ1ಸಾವಿರ ನವೋದ್ಯಮಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿಡಾ. ಜಯಶ್ರೀ ದೇಶಪಾಂಡೆ, ಫೌಂಡೇಶನ್‌ ಸಿಇಒ ವಿವೇಕ ಪವಾರ್‌, ಇಒಒ ಪಿ.ಎನ್‌. ನಾಯಕ್‌ ಸುದ್ದಿಗೋಷ್ಠಿಯಲ್ಲಿದ್ದರು.

ಕೃಷಿ ಹೊಂಡ ಬೇಡಿಕೆ
ಕೃಷಿ ಹೊಂಡಗಳ ನಿರ್ಮಾಣ ಮತ್ತು ಕೃಷಿ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿದೇಶಪಾಂಡೆ ಫೌಂಡೇಶನ್‌ ಜಿಲ್ಲೆಯಲ್ಲಿಹಲವು ಚಟುವಟಿಕೆಗಳನ್ನು ಹಮ್ಮಿಕೊಂಡಿದೆ. 1500 ಕೃಷಿ ಹೊಂಡ ನಿರ್ಮಿಸಿಕೊಟ್ಟಿದ್ದು, ರೈತರು ಬಹು ಬೆಳೆಯೊಂದಿಗೆ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಮುಂದಿನ ವರ್ಷದೊಳಗೆ 5ಸಾವಿರ ಹೊಂಡ ನಿರ್ಮಿಸುವ ಗುರಿ ಇದೆ. ಇದರ ಜತೆಗೆ ಕಾಲೇಜುಗಳಲ್ಲಿಕೌಶಲ ತರಬೇತಿ ನೀಡುವ ಉದ್ದೇಶ ಹೊಂದಿದ್ದೇವೆ. ಇದಲ್ಲದೇ ಮಕ್ಕಳಿಗೆ ಇಂಗ್ಲಿಷ್‌ ಕಲಿಕಾ ಯೋಜನೆಯು ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ