ಆ್ಯಪ್ನಗರ

ಅನುದಾನಿತ ಸಂಸ್ಥೆ ಶಿಕ್ಷಕರ ವೇತನ ಬಿಡುಗಡೆ

ಅನುದಾನಿತ ಶಿಕ್ಷ ಕರ ಹೋರಾಟಕ್ಕೆ ಮಣಿದ ಸರಕಾರ ಧಾರವಾಡ ತಾಲೂಕು ಪಂಚಾಯತಿಗೆ 3 ಕೋಟಿ 95 ಲಕ್ಷ ರೂ...

Vijaya Karnataka 8 Mar 2019, 5:00 am
ಧಾರವಾಡ : ಅನುದಾನಿತ ಶಿಕ್ಷ ಕರ ಹೋರಾಟಕ್ಕೆ ಮಣಿದ ಸರಕಾರ ಧಾರವಾಡ ತಾಲೂಕು ಪಂಚಾಯತಿಗೆ 3 ಕೋಟಿ 95 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದು ಜಿಲ್ಲಾಧ್ಯಕ್ಷ ವಿಲ್ಸನ್‌ ಜೆ ಮೈಲಿ ತಿಳಿಸಿದ್ದಾರೆ.
Vijaya Karnataka Web aided institution releases teacher salary
ಅನುದಾನಿತ ಸಂಸ್ಥೆ ಶಿಕ್ಷಕರ ವೇತನ ಬಿಡುಗಡೆ


ಈ ಕುರಿತು ಗುರುವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಳೆದ 3 ತಿಂಗಳಿನಿಂದ ಜಿಲ್ಲೆಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷ ಕಕರು ವೇತನ ಇಲ್ಲದೇ ಹಲವು ಬಾರಿ ಪ್ರತಿಭಟನೆ ನಡೆಸಿದ್ದರು.ಶಿಕ್ಷ ಕರ ನೇತಾರ ವಿಪ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅವರ ಸತತ ಪ್ರಯತ್ನದಿಂದ ಹಣ ಬಿಡುಗಡೆ ಆಗಿದೆ ಎಂದಿದ್ದಾರೆ. ಅಲ್ಲದೇ ಕರ್ನಾಟಕ ರಾಜ್ಯ ಖಾಸಗಿ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದ ರಾಜ್ಯಾಧ್ಯಕ್ಷ ದಿವಾಕರ ಪುನೀತ ಪದಾಧಿಕಾರಿಗಳಾದ ಸುಧಾಮಣಿರಾವ್‌, ಎಫ್‌.ಟಿ.ಕೆಮ್ಮಣಕೇರಿ, ಆರ್‌.ಐ.ಪಡನೂರ, ಆರ್‌.ಕೆ.ಬಳಗಾನೂರ, ಎಸ್‌.ಎಂ.ಹೂಗಾರ, ಎಸ್‌.ಎಸ್‌.ಕತ್ತೆಬೆನ್ನೂರ, ಎಂ.ಎಚ್‌.ಕಲಗುಡಿ, ಎಸ್‌.ಬಿ. ಮುದೇಗೌಡರ ಸೇರಿದಂತೆ ಇತರರು ವಿಪ ಮಾಜಿ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ .

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ