ಆ್ಯಪ್ನಗರ

ಕೊಪ್ಪದ ಪತ್ನಿಗೆ ಜಮೀನು ಹಕ್ಕುಪತ್ರ ಹಸ್ತಾಂತರ

ಕುಂದಗೋಳ:ಕಳೆದ ವರ್ಷ ಸಿಯಾಚಿನ್ ಪ್ರದೇಶದಲ್ಲಿ ಹಿಮದಡಿ ಸಿಲುಕಿ ಬದುಕುಳಿದು ನಂತರ ವೀರಮರಣ ಹೊಂದಿದ ತಾಲೂಕಿನ ಬೆಟದೂರು ಗ್ರಾಮದ ಲಾನ್ಸ ನಾಯಕ್

ವಿಕ ಸುದ್ದಿಲೋಕ 7 Mar 2017, 5:00 am
ಕುಂದಗೋಳ:ಕಳೆದ ವರ್ಷ ಸಿಯಾಚಿನ್ ಪ್ರದೇಶದಲ್ಲಿ ಹಿಮದಡಿ ಸಿಲುಕಿ ಬದುಕುಳಿದು ನಂತರ ವೀರಮರಣ ಹೊಂದಿದ ತಾಲೂಕಿನ ಬೆಟದೂರು ಗ್ರಾಮದ ಲಾನ್ಸ ನಾಯಕ್ ಹನುಮಂತಪ್ಪ ಕೊಪ್ಪದ ಅವರ ಪತ್ನಿ ಮಹಾದೇವಿ ಅವರಿಗೆ 4 ಎಕರೆ ಜಮೀನಿನ ಹಕ್ಕು ಪತ್ರವನ್ನು ಶಾಸಕ ಸಿ.ಎಸ್.ಶಿವಳ್ಳಿ ಸೋಮವಾರ ಹಸ್ತಾಂತರಿಸಿದರು.
Vijaya Karnataka Web alienation of land title koppada wife
ಕೊಪ್ಪದ ಪತ್ನಿಗೆ ಜಮೀನು ಹಕ್ಕುಪತ್ರ ಹಸ್ತಾಂತರ

ಪಟ್ಟಣದ ತಹಸೀಲ್ದಾರ ಕಚೆೇರಿಯಲ್ಲಿ ನಡೆದ ಸಭೆಯಯಲ್ಲಿ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು, ರಾಜ್ಯ ಸರಕಾರ ನೀಡಿದ ಭರವಸೆಯಂತೆ ಮಹಾದೇವಿ ಅವರಿಗೆ ಈಗಾಗಲೇ 25 ಲಕ್ಷ ರೂ. ಹಾಗೂ ಹುಬ್ಬಳ್ಳಿಯಲ್ಲಿ 40*30 ಅಳತೆಯ ನಿವೇಶನ ನೀಡಲಾಗಿದೆ. ಈಗ ತಾಲೂಕಿನ ಮತ್ತಿಗಟ್ಟಿ ಗ್ರಾಮದಲ್ಲಿ 4 ಎಕರೆ ಜಮೀನಿನ ಹಕ್ಕುಪತ್ರ ನೀಡಲಾಗಿದೆ. ಇನ್ನು ಅವರಿಗೆ ಸರಕಾರಿ ನೌಕರಿ ಹಾಗೂ ಹುಬ್ಬಳ್ಳಿಯ ರಸ್ತೆಯೊಂದಕ್ಕೆ ಹನುಮಂತಪ್ಪ ಅವರ ನಾಮಕರಣ ಮಾಡುವುದು ಮಾತ್ರ ಉಳಿದಿದ್ದು ಅದನ್ನು ಕೂಡ ಶೀಘ್ರವೇ ಈಡೇರಿಸುವುದಾಗಿ ಹೇಳಿದರು.
ಹಕ್ಕು ಪತ್ರ ಸ್ವೀಕರಿಸಿ ಮಾತನಾಡಿದ ಮಹಾದೇವಿ ಕೊಪ್ಪದ, ವೀರ ಮರಣ ಹೊಂದಿದ ಯೋಧರ ಕುಟುಂಬಗಳಿಗೆ ನೀಡುವ ಭರವಸೆಗಳನ್ನು ತಕ್ಷಣವೇ ಈಡೇರಿಸಬೇಕು. ರಾಜ್ಯ ಸರಕಾರ ನೀಡಿದ ಹಲವು ಭರವಸೆಗಳಲ್ಲಿ ಕೆಲವು ಈಡೇರಿವೆ ಎಂದು ಹೇಳಿದರು.
ಪಪಂ ಅಧ್ಯಕ್ಷ ಮಲ್ಲಿಕಾರ್ಜುನ ಕಿರೇಸೂರ, ಗ್ರೇಡ್-2 ತಹಸೀಲ್ದಾರ ವಿ.ಎಸ್.ಮುಳಗುಂದಮಠ ಮತ್ತಿತರರು ಉಪಸ್ಥಿತರಿದ್ದರು. ಸಭೆಯ ಕೊನೆಯಲ್ಲಿ ಮಹಾದೇವಿ ಅವರನ್ನು ಸನ್ಮಾನಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ