ಆ್ಯಪ್ನಗರ

ಮೈತ್ರಿ ಅಭ್ಯರ್ಥಿ ವಿನಯ್‌ ಪರ ಬೈಕ್‌ ರಾರ‍ಯಲಿ

ಹುಬ್ಬಳ್ಳಿ : ಹು-ಧಾ ಪೂರ್ವ ಕ್ಷೇತ್ರದಲ್ಲಿ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಅಭ್ಯರ್ಥಿ ವಿನಯ್‌ ಕುಲಕರ್ಣಿ ಪರ ಭಾನುವಾರ ವಿವಿಧೆಡೆ ಬೈಕ್‌ ರಾರ‍ಯಲಿ ಮೂಲಕ ಪ್ರಚಾರ ನಡೆಸಲಾಯಿತು.

Vijaya Karnataka 15 Apr 2019, 5:00 am
ಹುಬ್ಬಳ್ಳಿ : ಹು-ಧಾ ಪೂರ್ವ ಕ್ಷೇತ್ರದಲ್ಲಿ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಅಭ್ಯರ್ಥಿ ವಿನಯ್‌ ಕುಲಕರ್ಣಿ ಪರ ಭಾನುವಾರ ವಿವಿಧೆಡೆ ಬೈಕ್‌ ರಾರ‍ಯಲಿ ಮೂಲಕ ಪ್ರಚಾರ ನಡೆಸಲಾಯಿತು.
Vijaya Karnataka Web DRW-14 NADAF 3
ಹುಬ್ಬಳ್ಳಿಯಲ್ಲಿ ಹು-ಧಾ ಪೂರ್ವ ಕ್ಷೇತ್ರದಲ್ಲಿ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಪರ ಭಾನುವಾರ ವಿವಿಧೆಡೆ ಬೈಕ್‌ ರಾರ‍ಯಲಿ ಮೂಲಕ ಪ್ರಚಾರ ನಡೆಸಲಾಯಿತು.


ಮಂಟೂರು ರಸ್ತೆಯ ಅಹ್ಮದ್‌ ಪ್ಲಾಟ್‌ ಮುಖ್ಯ ರಸ್ತೆಯಿಂದ ಆರಂಭವಾದ ಬೈಕ್‌ ರಾರ‍ಯಲಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ. ದೇಶಪಾಂಡೆ, ಶಾಸಕ ಪ್ರಸಾದ ಅಬ್ಬಯ್ಯ, ಮಾಜಿ ಸಂಸದ ಪ್ರೊ.ಐ.ಜಿ. ಸನದಿ ಅಧ್ಯಕ್ಷ ರಾದ ಅಲ್ತಾಫ್‌ ಹಳ್ಳೂರು, ಅನಿಲಕುಮಾರ ಪಾಟೀಲ, ಪ್ರಚಾರ ಸಮಿತಿ ಅಧ್ಯಕ್ಷ ಮಹೇಂದ್ರ ಸಿಂಘಿ ಸೇರಿದಂತೆ ಪಾಲಿಕೆ ಮಾಜಿ ಸದಸ್ಯರು, ಇತರ ಗಣ್ಯರು, ಮುಖಂಡರು, ಪಕ್ಷ ದ ವಿವಿಧ ಘಟಕಗಳ ಮುಂಚೂಣಿ ನಾಯಕರು ಪಾಲ್ಗೊಂಡಿದ್ದರು.

ಬೈಕ್‌ ರಾರ‍ಯಲಿಯು ಮಂಟೂರು ರಸ್ತೆಯಿಂದ ಆರಂಭವಾಗಿ ಗಣೇಶಪೇಟೆ, ಸಿಬಿಟಿ, ಮಂಗಳವಾರ ಪೇಟೆ, ಸೆಟ್ಲಮೆಂಟ್‌, ಕೆ.ಬಿ. ನಗರ, ಯಲ್ಲಾಪುರ ಓಣಿ, ವೀರಾಪುರ ಓಣಿ, ಬಂಕಾಪುರ ಚೌಕ್‌, ಇಸ್ಲಾಂಪುರ, ಹಳೇ ಹುಬ್ಬಳ್ಳಿ ವೃತ್ತ, ಬಮ್ಮಾಪುರ ಓಣಿ, ಅಕ್ಕಿಹೊಂಡ, ದಾಜೀಬಾನ್‌ ಪೇಟೆ ಸೇರಿದಂತೆ ಇನ್ನಿತರ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮೂರುಸಾವಿರ ಮಠದ ಆವರಣದಲ್ಲಿ ಮುಕ್ತಾಯಗೊಂಡಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ದೇಶಪಾಂಡೆ, ಸರ್ವ ಸಮುದಾಯದ ಹಿತ ಚಿಂತಕ ವಿನಯ ಕುಲಕರ್ಣಿಯವರಿಗೆ ಮತ ನೀಡುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಆಶೀರ್ವದಿಸಬೇಕೆಂದು ಮನವಿ ಮಾಡಿದರು.

ಅಭ್ಯರ್ಥಿ ವಿನಯ ಕುಲಕರ್ಣಿ ಮಾತನಾಡಿ, ಬಿಜೆಪಿ ಅಭ್ಯರ್ಥಿ ಜೋಶಿಯವರ ಬಳಿ ತಮ್ಮ ಸಾಧನೆ ಹೇಳಿಕೊಳ್ಳಲು ಏನೂ ಇಲ್ಲ. ಕೇವಲ ಮೋದಿಗಾಗಿ ಮತ ನೀಡಿ ಎನ್ನುತ್ತಿದ್ದಾರೆ. ಜನತೆ ಬಿಜೆಪಿಯ ಬಣ್ಣದ ಮಾತುಗಳಿಗೆ ಮರುಳಾಗಬಾರದು ಎಂದರು. ಸಾವಿರಾರು ಕಾಂಗ್ರೆಸ್‌ ಕಾರ್ಯಕರ್ತರು, ಆಭಿಮಾನಿಗಳು ಬೈಕ್‌ ರಾರ‍ಯಲಿಯಲ್ಲಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ