ಆ್ಯಪ್ನಗರ

'ಬಹುತೇಕ ನಾನೇ ಸಭಾಪತಿ ಆಗಬಹುದು' - ಬಸವರಾಜ ಹೊರಟ್ಟಿ ವಿಶ್ವಾಸ

ಜೆಡಿಎಸ್‌ ವರಿಷ್ಠ ದೇವೇಗೌಡರು ಸಹ ಸಭಾಪತಿ ಸ್ಥಾನಕ್ಕೆ ಹೊರಟ್ಟಿ ಸೂಕ್ತ ವ್ಯಕ್ತಿ ಎಂದು ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಪರಿಷತ್‌ ಸಭಾಪತಿ ಸ್ಥಾನಕ್ಕೆ ನನ್ನ ಹೆಸರು ಪ್ರಸ್ತಾಪಿಸಿದ್ದಕ್ಕೆ ಎಲ್ಲ ಪಕ್ಷಗಳು ಸಹಮತ ವ್ಯಕ್ತಪಡಿಸುವ ವಿಶ್ವಾಸ ಇದೆ ಎಂದು ಅವರು ಹೇಳಿದ್ದಾರೆ.

Vijaya Karnataka 7 Jan 2021, 1:52 pm
ಹುಬ್ಬಳ್ಳಿ: ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸಿನಲ್ಲಿ ನನಗೆ ಬೇಕಾದವರು ಸಾಕಷ್ಟು ಜನರಿದ್ದಾರೆ. ಹೀಗಾಗಿ ನಾನು ಎಲ್ಲರಿಗೂ ಸರ್ವಸಮ್ಮತ ಸಭಾಪತಿ ಆಗಬಹುದೆಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Vijaya Karnataka Web MLC Basavaraj Horatti
ಹಿರಿಯ ಜೆಡಿಎಸ್‌ ನಾಯಕ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊಟ್ಟಿ


ಹುಬ್ಬಳ್ಳಿಯ ಐಟಿ ಪಾರ್ಕ್‌ನಲ್ಲಿ ನಡೆದ ನಗರಾಭಿವೃದ್ಧಿ ಇಲಾಖೆಯ ಸಭೆಯ ನಂತರ ಮಾಧ್ಯಮದವರ ಜತೆ ಮಾತನಾಡಿದ ಅವರು, “ಬಹುತೇಕ ನಾನೇ ಸಭಾಪತಿ ಆಗಬಹುದು. ಯಾರೂ ವಿರೋಧ ಮಾಡುವ ಸಂಭವ ಕಡಿಮೆಯಿದೆ,” ಎಂದು ಹೇಳಿದರು.

ಕೊನೆಗಳಿಗೆಯಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಆಗ ನೋಡಬೇಕಾಗುತ್ತದೆ. . ಆದರೆ, ಯಾರೂ ಆ ರೀತಿ ಮಾಡಲಿಕ್ಕಿಲ್ಲ ಎಂದು ಜೆಡಿಎಸ್‌ನ ಹಿರಿಯ ನಾಯಕ ಬಸವರಾಜ್ ಹೊರಟ್ಟಿ ಅಭಿಪ್ರಾಯಪಟ್ಟರು.

ಪಕ್ಷದ ವರಿಷ್ಠ ಎಚ್‌ಡಿ ದೇವೇಗೌಡರು ಸಹ ಸಭಾಪತಿ ಸ್ಥಾನಕ್ಕೆ ಹೊರಟ್ಟಿ ಸೂಕ್ತ ವ್ಯಕ್ತಿ ಎಂದು ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಸಭಾಪತಿ ಸ್ಥಾನಕ್ಕೆ ನನ್ನ ಹೆಸರು ಪ್ರಸ್ತಾಪಿಸಿದ್ದಕ್ಕೆ ಎಲ್ಲ ಪಕ್ಷಗಳು ಸಹಮತ ವ್ಯಕ್ತಪಡಿಸುವ ವಿಶ್ವಾಸ ಇದೆ ಎಂದು ಅವರು ತಿಳಿಸಿದರು.

ರಣರಂಗವಾದ ವಿಧಾನ ಪರಿಷತ್‌..! ಸಭಾಪೀಠ ಧ್ವಂಸಕ್ಕೆ ಯತ್ನ; ಗ್ಲಾಸ್‌, ಮೈಕ್‌ ಕಿತ್ತುಹಾಕಿದ ಸದಸ್ಯರು

ಮೂರು‌ ಸಾವಿರ ಮಠದ‌ ಆಸ್ತಿ ದಾನ ಮಾಡಿರುವ ವಿಚಾರ ಪ್ರಸ್ತಾಪಿಸಿದ ಅವರು, ಜಮೀನು ದಾನ ಮಾಡುವಲ್ಲಿ ಸ್ವಾಮೀಜಿ ಪಾತ್ರ ಏನಿಲ್ಲ.‌ ಹಿಂದಿನ ಸ್ವಾಮೀಜಿ ಬರೆದ ವಿಲ್‌ ನಂತಯೇ ಎಲ್ಲವೂ ನಡೆದಿದ್ದು, ಉನ್ನತ‌ ಸಮಿತಿ‌ ಸದಸ್ಯರು ಸಹ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದರು. ‌

ಸಮಾಜದಲ್ಲಿ ಈ ಬಗ್ಗೆ ಚರ್ಚೆಗಳು ನಡೆದಿದ್ದು, ಸಮಿತಿ ಸದಸ್ಯರು ಸಭೆ ಚರ್ಚಿಸಿ ವಾಸ್ತವ ವಿಚಾರಗಳನ್ನು ಸಮಾಜಕ್ಕೆ ತಿಳಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ