ಆ್ಯಪ್ನಗರ

ಕಾಯಿದೆ ತಿದ್ದುಪಡಿಯಿಂದ ಖಾಸಗಿ ತೆಕ್ಕೆಗೆ ಎಪಿಎಂಸಿ

ಹುಬ್ಬಳ್ಳಿ : ಇಡೀ ದೇಶವೇ ಕೋವಿಡ್‌-19ರ ವಿರುದ್ಧ ಎಲ್ಲಭೇದಗಳನ್ನು ಮರೆತು ಹೋರಾಟದಲ್ಲಿತೊಡಗಿರುವಾಗ ಸದರಿ ಸಂದರ್ಭ ದುರುಪಯೋಗ ಪಡಿಸಿಕೊಂಡು ದೇಶದ ರೈತರು ಹಾಗೂ ಕೂಲಿಕಾರರ ಆಧಾರಿತ ವ್ಯವಸಾಯದ ಮೇಲೆ ಖಾಸಗಿ ಕಂಪನಿಗಳ ಪರ ಗಂಭೀರ ದಾಳಿ ಮಾಡಲು ಮುಂದಾಗಿರುವ ಕೇಂದ್ರ ಸರಕಾರದ ಕ್ರಮವನ್ನು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್‌) ಮತ್ತು ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌ (ಸಿಐಟಿಯು) ಧಾರವಾಡ ಜಿಲ್ಲಾ ಸಮಿತಿಗಳು ಬಲವಾಗಿ ಖಂಡಿಸಿವೆ.

Vijaya Karnataka 13 May 2020, 5:00 am
ಹುಬ್ಬಳ್ಳಿ : ಇಡೀ ದೇಶವೇ ಕೋವಿಡ್‌-19ರ ವಿರುದ್ಧ ಎಲ್ಲಭೇದಗಳನ್ನು ಮರೆತು ಹೋರಾಟದಲ್ಲಿತೊಡಗಿರುವಾಗ ಸದರಿ ಸಂದರ್ಭ ದುರುಪಯೋಗ ಪಡಿಸಿಕೊಂಡು ದೇಶದ ರೈತರು ಹಾಗೂ ಕೂಲಿಕಾರರ ಆಧಾರಿತ ವ್ಯವಸಾಯದ ಮೇಲೆ ಖಾಸಗಿ ಕಂಪನಿಗಳ ಪರ ಗಂಭೀರ ದಾಳಿ ಮಾಡಲು ಮುಂದಾಗಿರುವ ಕೇಂದ್ರ ಸರಕಾರದ ಕ್ರಮವನ್ನು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್‌) ಮತ್ತು ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌ (ಸಿಐಟಿಯು) ಧಾರವಾಡ ಜಿಲ್ಲಾ ಸಮಿತಿಗಳು ಬಲವಾಗಿ ಖಂಡಿಸಿವೆ.
Vijaya Karnataka Web apmc to private embrace by amendment of the act
ಕಾಯಿದೆ ತಿದ್ದುಪಡಿಯಿಂದ ಖಾಸಗಿ ತೆಕ್ಕೆಗೆ ಎಪಿಎಂಸಿ


ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಕೆಪಿಆರ್‌ಎಸ್‌ ಅಧ್ಯಕ್ಷ ಬಿ.ಎಸ್‌.ಸೊಪ್ಪಿನ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ ಅವರು, ಲಾಕ್‌ಡೌನ್‌ ನಿಂದಾಗಿ ಸಂಕಷ್ಟದಲ್ಲಿರುವ ರೈತಾಪಿ ಜನತೆಯ ಪರವಾಗಿ ನಿಂತು ನೆರವಾಗುವ ಬದಲು, ಬೆನ್ನಿಗೆ ಇರಿಯುವ ಕೆಲಸದಲ್ಲಿಕೇಂದ್ರ ಹಾಗೂ ರಾಜ್ಯ ಸರಕಾರಗಳು ತೊಡಗಿವೆ ಎಂದು ಟೀಕಿಸಿದ್ದಾರೆ.

ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯ ಮತ್ತು ಕೃಷಿ ಮತ್ತು ಸಹಕಾರ ಹಾಗೂ ರೈತ ಕಲ್ಯಾಣ ಇಲಾಖೆಯು ರಾಜ್ಯ ಸರಕಾರಕ್ಕೆ ಪತ್ರ ಬರೆದು, ರಾಜ್ಯದ ಖಾಸಗಿ ಕೃಷಿ ಮಾರುಕಟ್ಟೆಯ ಮೇಲಿನ ಕೃಷಿ ಉತ್ಪನ್ನಗಳ ಮಾರುಕಟ್ಟೆ ಸಮಿತಿಯ ನಿಯಂತ್ರಣ ತೆಗೆದು ಹಾಕಲು ಸೂಚಿಸಿದೆ ಮತ್ತು ಸದರಿ ಕಾಯ್ದೆಗೆ ತಿದ್ದುಪಡಿ ಮಾಡಲು ಕೋರಿದೆಯಲ್ಲದೇ ಅದರ ಮಾಹಿತಿಯನ್ನು ತನಗೆ ನೀಡುವಂತೆ ಕೇಳಿದೆ. ರಾಜ್ಯ ಸರಕಾರವು ಈ ಸೇವೆಗೆ ತುದಿಗಾಲ ಮೇಲೆ ನಿಂತಿರುವಂತೆ ಸಚಿವ ಸಂಪುಟದ ಸಭೆಯಲ್ಲಿಸುಗ್ರೀವಾಜ್ಞೆ ಹೊರಡಿಸುವ ತವಕದಲ್ಲಿದೆ ಎಂದು ಆರೋಪಿಸಿದ್ದಾರೆ.

ಸದ್ಯ ಎಪಿಎಂಸಿಯಾಚೆ ಹೊರಗಡೆ, ರೈತರಿಂದ ಕೃಷಿ ಉತ್ಪನ್ನಗಳನ್ನು ಲೈಸೆನ್ಸ್‌ ಹೊಂದಿಲ್ಲದ ವರ್ತಕರು ಖರೀದಿಸುವಂತಿಲ್ಲಮತ್ತು ವರ್ತಕರು ಮನಬಂದಂತೆ ರೈತರ ಶೋಷಣೆ ನಡೆಸಲು ಮತ್ತು ಎಪಿಎಂಸಿ ಆದಾಯದ ವಂಚನೆ ಮಾಡಲು ಅವಕಾಶವಿಲ್ಲ. ಆ ರೀತಿಯಲ್ಲಿನಿಯಮಗಳನ್ವಯ ನಡೆಯದಿದ್ದಲ್ಲಿಅಂತಹ ವರ್ತಕರ ಮೇಲೆ ಕ್ರಿಮಿನಲ್‌ ಧಾವೆ ಹೂಡಲು ಅವಕಾಶಗಳಿತ್ತು. ಈಗ ಇವುಗಳನ್ನೇ ತೆಗೆದು ಹಾಕಿದಲ್ಲಿರೈತರ ಶೋಷಣೆ ವ್ಯಾಪಕವಾಗಿ ಹೆಚ್ಚಾಗಲಿದೆ. ಕೃಷಿ ಮಾರುಕಟ್ಟೆ ಎಂಬುದು ಪೂರ್ಣ ಮುಕ್ತವಾದ ಖಾಸಗಿ ಮಾರುಕಟ್ಟೆಯಾಗಲಿದೆ ಎಂದು ಹೇಳಿದ್ದಾರೆ.

ಕಾಯ್ದೆಗೆ ತಿದ್ದುಪಡಿಯಾದರೆ, ರೈತರನ್ನು ಮತ್ತು ಕೃಷಿ ಕೂಲಿಕಾರರನ್ನು ವ್ಯವಸಾಯದಿಂದ ಹಾಗೂ ಲಕ್ಷಾಂತರ ಸಣ್ಣ ಹಾಗೂ ಮಧ್ಯಮ ವರ್ತಕರನ್ನು ಉದ್ಯೋಗದಿಂದ ಹೊರದೂಡುವುದರ ಜತೆಗೆ ಕೃಷಿಯನ್ನು ಮತ್ತು ರಾಜ್ಯದ ಗ್ರಾಹಕ ಮಾರುಕಟ್ಟೆಯನ್ನು ನಿಧಾನವಾಗಿ ಖಾಸಗಿ ಕುಳಗಳ ಕೈಗೆ ವರ್ಗಾಯಿಸಲಿದೆ. ರಾಜ್ಯದ 177 ಕೃಷಿ ಮಾರುಕಟ್ಟೆಗಳನ್ನು, ಅದೇ ರೀತಿ ಎಲ್ಲಾ ಉಪ ಮಾರುಕಟ್ಟೆಗಳನ್ನು ಹಾಗೂ ಅಲ್ಲಿನ ಲಕ್ಷಾಂತರ ಹಮಾಲರು, ನೌಕರರ ಉದ್ಯೋಗಗಳನ್ನು ನಾಶ ಪಡಿಸಲಿದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

ಕೂಡಲೇ ರಾಜ್ಯ ಸರಕಾರ ಜನ ವಿರೋಧಿ ತಿದ್ದುಪಡಿಗೆ ಮುಂದಾಗಬಾರದು. ಬದಲಿಗೆ ಎಪಿಎಂಸಿಗಳನ್ನು ಬಲಪಡಿಸಲು ಮತ್ತು ಖಾಸಗಿ ಮಾರುಕಟ್ಟೆಯನ್ನು ನಿಷೇಧಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಕೆಪಿಆರ್‌ಎಸ್‌ ಮತ್ತು ಸಿಐಟಿಯು ಧಾರವಾಡ ಜಿಲ್ಲಾ ಸಮಿತಿಗಳು, ತಪ್ಪಿದರೆ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ