ಆ್ಯಪ್ನಗರ

ಸೂಕ್ತ ಸಂಶೋಧನಾ ಚಟುವಟಿಕೆ ಅಗತ್ಯ

ಧಾರವಾಡ : ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡ ಹವಾಮಾನ ಆಧಾರಿತ ಪರ್ಯಾಯ ಬೆಳೆ ಯೋಜನೆಯ ಕುರಿತು ನಡೆದ ತರಬೇತಿ ಕಾರ್ಯಕ್ರಮವನ್ನು ಸಂಶೋಧನಾ ನಿರ್ದೇಶಕ ಡಾ. ಎಚ್‌.ಎಲ್‌.ನದಾಫ್‌ ಶನಿವಾರ ಉದ್ಘಾಟಿಸಿದರು.

Vijaya Karnataka 14 Jul 2019, 5:00 am
ಧಾರವಾಡ : ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡ ಹವಾಮಾನ ಆಧಾರಿತ ಪರ್ಯಾಯ ಬೆಳೆ ಯೋಜನೆಯ ಕುರಿತು ನಡೆದ ತರಬೇತಿ ಕಾರ್ಯಕ್ರಮವನ್ನು ಸಂಶೋಧನಾ ನಿರ್ದೇಶಕ ಡಾ. ಎಚ್‌.ಎಲ್‌.ನದಾಫ್‌ ಶನಿವಾರ ಉದ್ಘಾಟಿಸಿದರು.
Vijaya Karnataka Web appropriate research activity is required
ಸೂಕ್ತ ಸಂಶೋಧನಾ ಚಟುವಟಿಕೆ ಅಗತ್ಯ


ಈ ವೇಳೆ ಮಾತನಾಡಿದ ಅವರು, ಅರಣ್ಯ ಕೃಷಿಕ್ಷೇತ್ರ ಕಡಿಮೆ ಆಗುತ್ತಿರುವ ಕಾರಣ ಹವಾಮಾನ ಬದಲಾವಣೆಯಿಂದ ಇತ್ತೀಚಿನ ದಿನಗಳಲ್ಲಿ ಸಕಾಲಿಕವಾಗಿ ಮಳೆ ಆಗದೇ ಮಳೆ ಪ್ರಮಾಣದಲ್ಲಿಯೂ ಕಡಿಮೆಯಾಗಿದೆ. ಮಳೆ ಪ್ರಮಾಣ ವೈಪರೀತ್ಯದಿಂದ ಕೂಡಿದೆ. ಈ ನಿಟ್ಟಿನಲ್ಲಿ ಹವಾಮಾನ ಬದಲಾವಣೆ ಹಿನ್ನಲೆಯಲ್ಲಿ ವಲಯವಾರು ಸೂಚಿತ ಬೆಳೆ ಪದ್ಧತಿಗಳನ್ನು ಸೂಕ್ತವಾಗಿ ಮಾರ್ಪಡಿಸುವ ದಿಸೆಯಲ್ಲಿ ಸೂಕ್ತ ಸಂಶೋಧನಾ ಚಟುವಟಿಕೆಗಳ ನಡೆಯುವ ಅವಶ್ಯಕತೆ ಇದೆ ಎಂದರು.

ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಎಚ್‌. ವೆಂಕಟೇಶ ಮಾತನಾಡಿ, ಹೈದರಾಬಾದ ಹಾಗೂ ದೆಹಲಿ ಭಾರತೀಯ ಹವಾಮಾನ ವಿಭಾಗದ ಒಣ ಭೂಮಿ ಕೃಷಿ ಸಂಶೋಧನಾ ಸಂಸ್ಥೆಗಳಿಂದ ಬರುವ ಹವಾಮಾನ ಮುನ್ಸೂಚನೆ ಆಧಾರದ ಮೇಲೆ ಅನಿಶ್ಚಿತ ಮಳೆಯ ಪ್ರಸಂಗದಲ್ಲಿ ಪರ್ಯಾಯ ಬೆಳೆಯ ಕೃಷಿ ಸಲಹೆಗಳನ್ನು ರೈತರಿಗೆ ನೀಡಬೇಕು ಎಂದರು.

ಇದೇ ವೇಳೆ ಸಮೇತಿ ಉತ್ತರದಿಂದ ಹಮ್ಮಿಕೊಂಡ ತರಬೇತಿ ಕಾರ್ಯಕ್ರಮದಲ್ಲಿ ಹವಾಮಾನ ಮುನ್ಸೂಚನೆ, ಭೂ ಬಳಕೆ ಪದ್ಧತಿ, ಸೂಕ್ತ ಬೆಳೆ ಪದ್ಧತಿ ಸೇರಿದಂತೆ ಇತರ ವಿಷಯಗಳ ಕುರಿತು ನುರಿತ ತಜ್ಞರು ತರಬೇತಿ ನೀಡಿದರು. ವಿವಿಧ ಜಿಲ್ಲೆಗಳ ಕೃಷಿ, ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರ, ಕೃಷಿ ವಿಸ್ತರಣಾ ಸೇವಾ ಘಟಕಗಳ ಜನರು ತರಬೇತಿಯ ಲಾಭ ಪಡೆದರು.

ತರಬೇತಿ ಘಟಕದ ಮುಖ್ಯಸ್ಥ ಡಾ. ಎಸ್‌.ಬಿ.ಪಾಟೀಲ ಸ್ವಾಗತಿಸಿದರು. ಡಾ.ಎಚ್‌.ಟಿ.ಚನ್ನಾಳ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ