ಆ್ಯಪ್ನಗರ

ಸಂಶಯಿಸಿ 8 ಜನರ ಬಂಧನ

ಧಾರವಾಡ : ಗುಂಪು ಗುಂಪಾಗಿ ನಿಂತು ಗಲಾಟೆ ಅಥವಾ ದುಷ್ಕೃತ್ಯ ಮಾಡಬಹುದು ಎಂಬ ಸಂಶಯದ ಮೇರೆಗೆ ವಿದ್ಯಾಗಿರಿ ಠಾಣೆ ಪೊಲೀಸರು ಗುರುವಾರ 8 ಜನರನ್ನು ತೇಜಸ್ವಿನಗರ ಬ್ರಿಡ್ಜ್‌ ಬಳಿ ಬಂಧಿಸಿದ್ದಾರೆ.

Vijaya Karnataka 28 Sep 2019, 5:00 am
ಧಾರವಾಡ : ಗುಂಪು ಗುಂಪಾಗಿ ನಿಂತು ಗಲಾಟೆ ಅಥವಾ ದುಷ್ಕೃತ್ಯ ಮಾಡಬಹುದು ಎಂಬ ಸಂಶಯದ ಮೇರೆಗೆ ವಿದ್ಯಾಗಿರಿ ಠಾಣೆ ಪೊಲೀಸರು ಗುರುವಾರ 8 ಜನರನ್ನು ತೇಜಸ್ವಿನಗರ ಬ್ರಿಡ್ಜ್‌ ಬಳಿ ಬಂಧಿಸಿದ್ದಾರೆ.
Vijaya Karnataka Web arrest of 8 people suspected
ಸಂಶಯಿಸಿ 8 ಜನರ ಬಂಧನ


ಕೇಶವನಗರದ ನಿವಾಸಿ ಮಲ್ಲಯ್ಯ ದಾನಯ್ಯ ಮಠದ, ಗಾಂಧಿನಗರದ ವರಣುಕುಮಾರ, ಶಿವರಾಜ ನೆಲವಗಿ, ರಾಮಾಪುರ ಓಣಿಯ ವೀರಪಾಕ್ಷಯ್ಯ ಮಂಜುನಾಥ ಹಿರೇಮಠ,ಬೈರಿದೇವರಕೊಪ್ಪದ ರಜಾಕ ಇಮಾಮಸಾಬ ನಧಾಪ್‌, ನವನಗರದ ಆದಿತ್ಯ ರಾಜಪ್ಪ ಪಡಿಯೇರ್‌, ಮಾಳಮಡ್ಡಿಯ ಶಾರೂಖ ಬಶೀರಅಹ್ಮದ, ನಾಗರಾಜ ಹೂಗಾರ, ಜೈ ಭೀಮನಗರದ ಪಿತಾಂಬರ ಗಜಾನನ ಚಲವಾದಿ ಬಂಧಿತ ಆರೋಪಿಗಳು.

ಗುರುವಾರ ಮಧ್ಯಾಹ್ನ 2ಗಂಟೆಗೆ ವಿದ್ಯಾಗಿರಿ ಠಾಣೆ ಪೊಲೀಸರು ಪೆಟ್ರೋಲಿಂಗ್‌ದಲ್ಲಿರುವಾಗ ತೇಜಸ್ವಿನಗರ ಬ್ರಿಡ್ಜ್‌ ಬಳಿ 8 ರಿಂದ 9 ಜನರು ಗುಂಪು ಗುಂಪಾಗಿ ನಿಂತು ಗಲಾಟೆ ಮಾಡಬಹುದು ಎಂಬ ಸಂಶಯದ ಮೇರೆಗೆ ಶಾಂತಿ ಭಂಗ ಕಲಂ 107 ಅಡಿ ಬಂಧಿಸಲಾಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹು-ಧಾ ಪೊಲೀಸ್‌ ಆಯುಕ್ತ ಆರ್‌.ದಿಲೀಪ್‌ ಮಾರ್ಗದರ್ಶನದಲ್ಲಿಡಿಸಿಪಿಗಳಾದ ಡಿ.ಎಲ್‌.ನಾಗೇಶ, ಡಾ.ಶಿವಕುಮಾರ ಗುಣಾರೆ ಹಾಗೂ ಎಸಿಪಿ ರುದ್ರಪ್ಪ ಸೂಚನೆ ಮೇರೆಗೆ ವಿದ್ಯಾಗಿರಿ ಠಾಣೆ ಇನ್ಸ್‌ಪೆಕ್ಟರ್‌ ಅಲ್ತಾಫ್‌ ಮುಲ್ಲಾಹಾಗೂ ಸಿಬ್ಬಂದಿ ಬಂಧಿಸಿದ್ದಾರೆ. ಈ ಕುರಿತು ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ