ಆ್ಯಪ್ನಗರ

ಹಲ್ಲೆ, ಪೊಲೀಸರ ವರ್ತನೆಗೆ ಖಂಡನೆ

ಧಾರವಾಡ: ಸಂಘದ ಸದಸ್ಯ ಯಲ್ಲಪ್ಪ ಎಂ.ಬೆಳ್ಳಕ್ಕಿ ಮೇಲಿನ ಹಲ್ಲೆಹಾಗೂ ಪೊಲೀಸರ ಅನುಚಿತ ವರ್ತನೆ ಖಂಡಿಸಿ ಸೋಮವಾರ ಕೋರ್ಟ್‌ ಕಲಾಪಗಳಿಂದ ದೂರ ಉಳಿದ ಧಾರವಾಡ ವಕೀಲರ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Vijaya Karnataka 15 Oct 2019, 5:00 am
ಧಾರವಾಡ: ಸಂಘದ ಸದಸ್ಯ ಯಲ್ಲಪ್ಪ ಎಂ.ಬೆಳ್ಳಕ್ಕಿ ಮೇಲಿನ ಹಲ್ಲೆಹಾಗೂ ಪೊಲೀಸರ ಅನುಚಿತ ವರ್ತನೆ ಖಂಡಿಸಿ ಸೋಮವಾರ ಕೋರ್ಟ್‌ ಕಲಾಪಗಳಿಂದ ದೂರ ಉಳಿದ ಧಾರವಾಡ ವಕೀಲರ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
Vijaya Karnataka Web assault condemnation of police behavior
ಹಲ್ಲೆ, ಪೊಲೀಸರ ವರ್ತನೆಗೆ ಖಂಡನೆ


ಮನೆ ಕಟ್ಟುವ ವಿಷಯಕ್ಕೆ ಸಂಬಂಧಿಸಿದಂತೆ ತಕರಾರು ತೆಗೆದು ಕಮಲಾಪುರದ ಕುಂಬಾರ ಎಂಬ ಕುಟುಂಬದವರು ವಕೀಲ ಯಲ್ಲಪ್ಪ ಸೇರಿದಂತೆ ಅವರ ಸಂಬಂಧಿಕರ ಮೇಲೆ ಹಲ್ಲೆನಡೆಸಿದ್ದಾರೆ. ಇದು ಖಂಡನೀಯ. ಈ ವೇಳೆ ನ್ಯಾಯ ನೀಡುವಂತೆ ಹಲ್ಲೆಗೊಳಗಾದವರು ಉಪನಗರ ಠಾಣೆಗೆ ಹೋದರೆ ಪೊಲೀಸ್‌ ಅಧಿಕಾರಿಗಳು ವಕೀಲರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಬೇಸರಿಸಿದರು.

ಸೋಮವಾರ ಬೆಳಗ್ಗೆ ಸಭೆ ನಡೆಸಿದ ವಕೀಲರ ಸಂಘದ ಪದಾಧಿಕಾರಿಗಳು ಈ ಬೆಳವಣಿಗೆ ವಿರೋಧಿಸಿ ಕೋರ್ಟ್‌ ಕಲಾಪದಿಂದ ದೂರ ಉಳಿಯಲು ತೀರ್ಮಾನಿಸಿದರು. ಅಲ್ಲದೆ ವಕೀಲರ ಮೇಲೆ ಹಲ್ಲೆಮಾಡಿದ ಆರೋಪಿತರ ಪರವಾಗಿ ಯಾರೂ ವಕಾಲತು ವಹಿಸಬಾರದು ಎಂದು ಸರ್ವಾನುಮತದಿಂದ ನಿರ್ಣಯಿಸಲಾಯಿತು.

ನಂತರ ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ವಕೀಲರ ಮೇಲೆ ಹಲ್ಲೆಮಾಡಿದ ವ್ಯಕ್ತಿಗಳ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಿದರು.

ಹಲ್ಲೆಗೊಳಗಾದ ವ್ಯಕ್ತಿಗೆ ನ್ಯಾಯ ಕೊಡಿಸುವುದು ಪೊಲೀಸರ ಕೆಲಸ. ಆದರೆ ಧಾರವಾಡ ಉಪನಗರ ಠಾಣೆ ಅಧಿಕಾರಿಗಳು ಅದಾವುದನ್ನೂ ಮಾಡದೆ ವಕೀಲರ ಜತೆಗೆ ಅನುಚಿತವಾಗಿ ವರ್ತಿಸಿದ್ದಾರೆ. ಹೀಗಾಗಿ ಅಲ್ಲಿನ ಪ್ರೊಬೇಷನರಿ ಪಿಎಸ್‌ಐ ಸೇರಿದಂತೆ ಕೆಲವರ ವಿರುದ್ಧ ಮೇಲಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿಧಾರವಾಡ ವಕೀಲರ ಸಂಘವು ಉಗ್ರವಾಗಿ ಹೋರಾಟ ಮಾಡಲಿದೆ ಎಂದು ಸಂಘದ ಸಭೆಯಲ್ಲಿನಿರ್ಣಯ ಪಾಸ್‌ ಮಾಡಲಾಗಿದೆ.

ಸೋಮವಾರ ಬೆಳಗ್ಗೆ ಸಂಘದ ಅಧ್ಯಕ್ಷ ಬಿ.ಎಸ್‌.ಗೋಡಸೆ ಅಧ್ಯಕ್ಷತೆಯಲ್ಲಿನಡೆದ ಸಭೆಯಲ್ಲಿಸಂಘದ ಸದಸ್ಯರಾದ ಆರ್‌.ಯು.ಬೆಳ್ಳಕ್ಕಿ, ಜಿ.ಜಿ.ಗದಗ, ಎನ್‌.ಬಿ.ಜೋಡಳ್ಳಿ, ಎ.ಎ.ಬುಗಡಿ, ಪ್ರಕಾಶ ಉಡಕೇರಿ, ಹೇಮಂತ ಕಣಕಿಕೊಪ್ಪ, ಸಿ.ಎಸ್‌.ಪೊಲೀಸ ಪಾಟೀಲ, ನದಾಫ ಮತ್ತಿತರರು ಮಾತನಾಡಿದರು.

ಉಪಾಧ್ಯಕ್ಷ ರಾಜು ಕೋಟಿ, ಪ್ರಧಾನ ಕಾರ್ಯದರ್ಶಿ ಎನ್‌.ಆರ್‌.ಮಟ್ಟಿ, ಸಹಕಾರ್ಯದರ್ಶಿ ಆಶಿಷ ಎ.ಮಗದುಮ್‌್ಮ, ಖಜಾಂಚಿ ಎನ್‌.ಬಿ.ಖೈರೋನವರ, ಕಾರ್ಯಕಾರಿ ಮಂಡಳಿ ಸದಸ್ಯರಾದ ಎಂ.ಎನ್‌.ತಾರಿಹಾಳ, ಸಂತೋಷ ಎಸ್‌.ಭಾವಿಹಾಳ, ಕೃಷ್ಣಾ ಪವಾರ, ಪ್ರಕಾಶ ಭಾವಿಕಟ್ಟಿ, ರಾಹುಲ ಅರವಾಡೆ, ಕಲ್ಮೇಶ ನಿಂಗಣ್ಣವರ, ರೂಪಾ ಕೆಂಗಾನೂರ ಸೇರಿದಂತೆ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ