ಆ್ಯಪ್ನಗರ

ಗಮನ ನೀಡದ ಗ್ರಾಮ ಪಂಚಾಯಿತಿ

ಕುಂದಗೋಳ : ಆಗಸ್ಟ್‌ ತಿಂಗಳಿನಲ್ಲಿಆದ ಅತಿವೃಷ್ಟಿಯಿಂದಾಗಿ ಸಂಶಿ ಗ್ರಾಮದ ಹಳ್ಳಿಕೇರಿ ಬಡಾವಣೆಯಲ್ಲಿ11 ಮನೆಗಳು ನೀರಿನಲ್ಲಿಮುಳುಗಿದ್ದವು. ಆಗ ಸಂಶಿ ಗ್ರಾಮ ಪಂಚಾಯಿತಿ ಇವರನ್ನು ಎಪಿಎಂಸಿ ಯಾರ್ಡ್‌ ಮಳಿಗೆಗಳಿಗೆ ಸ್ಥಳಾಂತರಿಸಿತ್ತು. ಕೆಲ ಕುಟುಂಬದವರು ಮನೆಗಳಿಗೆ ಮರಳಿದ್ದಾರೆ. ಆದರೆ ಇನ್ನೂ ಕೆಲವರು ಮನೆಗಳ ಅವಸ್ಥೆ ನೋಡಿ ಬರಲು ಹೆದರುತ್ತಿದ್ದು, ಎಪಿಎಂಸಿ ಮಳಿಗೆಗಳಲ್ಲೇ ವಾಸವಾಗಿದ್ದಾರೆ.

Vijaya Karnataka 13 May 2020, 5:00 am
ಕುಂದಗೋಳ : ಆಗಸ್ಟ್‌ ತಿಂಗಳಿನಲ್ಲಿಆದ ಅತಿವೃಷ್ಟಿಯಿಂದಾಗಿ ಸಂಶಿ ಗ್ರಾಮದ ಹಳ್ಳಿಕೇರಿ ಬಡಾವಣೆಯಲ್ಲಿ11 ಮನೆಗಳು ನೀರಿನಲ್ಲಿಮುಳುಗಿದ್ದವು. ಆಗ ಸಂಶಿ ಗ್ರಾಮ ಪಂಚಾಯಿತಿ ಇವರನ್ನು ಎಪಿಎಂಸಿ ಯಾರ್ಡ್‌ ಮಳಿಗೆಗಳಿಗೆ ಸ್ಥಳಾಂತರಿಸಿತ್ತು. ಕೆಲ ಕುಟುಂಬದವರು ಮನೆಗಳಿಗೆ ಮರಳಿದ್ದಾರೆ. ಆದರೆ ಇನ್ನೂ ಕೆಲವರು ಮನೆಗಳ ಅವಸ್ಥೆ ನೋಡಿ ಬರಲು ಹೆದರುತ್ತಿದ್ದು, ಎಪಿಎಂಸಿ ಮಳಿಗೆಗಳಲ್ಲೇ ವಾಸವಾಗಿದ್ದಾರೆ.
Vijaya Karnataka Web attention gram panchayat
ಗಮನ ನೀಡದ ಗ್ರಾಮ ಪಂಚಾಯಿತಿ


11 ಕುಟುಂಬದವರ ಮನೆಗಳು ಪೂರ್ಣ ನೀರಿನಲ್ಲಿಮುಳುಗಿದ್ದರಿಂದ ಎಪಿಎಂಸಿ ಆಡಳಿತ ಮಂಡಳಿ ಅನುಮತಿ ಮೇರೆಗೆ ಗ್ರಾ.ಪಂ. ಸ್ಥಳಾವಕಾಶ ಕಲ್ಪಿಸಿತ್ತು. 9 ತಿಂಗಳಿಂದ ಎಪಿಎಂಸಿ ಯಾರ್ಡ್‌ನಲ್ಲೇ ಕುಟುಂಬಗಳು ಕಾಲ ಕಳೆಯುತ್ತಿವೆ. ಕೆಲವರು ತಮ್ಮ ಮನೆಗಳಿಗೆ ಹೋಗಿದ್ದಾರೆ. ಆದರೆ ಇನ್ನೂ 4-5 ಕುಟುಂಬಗಳು ಇಲ್ಲಿಯೇ ಉಳಿದಿವೆ. ಇದೀಗ ಎಪಿಎಂಸಿ ಜಾಗ ಖಾಲಿ ಮಾಡಬೇಕೆಂದು ನೋಟಿಸ್‌ ನೀಡುತ್ತಿದ್ದು, ಸಂತ್ರಸ್ತರಿಗೆ ಸಂಕಷ್ಟ ಎದುರಾಗಿದೆ.

ಗ್ರಾಮ ಪಂಚಾಯಿತಿ 'ನಿಮ್ಮ ಮನೆಗಳಲ್ಲಿನ ನೀರು ಖಾಲಿಯಾಗಿದೆ, ನೀವು ನಿಮ್ಮ-ನಿಮ್ಮ ಮನೆಗಳಿಗೆ ಹೋಗಿರಿ' ಎಂದು ನಿರ್ದಾಕ್ಷಿಣ್ಯವಾಗಿ ಹೇಳುತ್ತಿದೆ. ಆದರೆ ತಮ್ಮ ಮನೆಗಳಿಗೆ ಹೋಗಲಾರದೇ ಅತಂತ್ರರಾಗಿದ್ದಾರೆ.

ಸಂತ್ರಸ್ತ ಕುಟುಂಬಗಳಿಗೆ ನವಗ್ರಾಮ ಸ್ಥಳದಲ್ಲಿಶಾಶ್ವತವಾಗಿ ಸೂರು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ ಗ್ರಾಮ ಪಂಚಾಯಿತಿ, 1 ವರ್ಷವಾದರೂ, ಭರವಸೆ ಈಡೇರಿಸಿಲ್ಲ. ''ನಿಮ್ಮ ಮನೆಗಳಲ್ಲೇ ಜೀವನ ಸಾಗಿಸಿ ಎಂದು ಹೇಳಿ ಗ್ರಾ.ಪಂ ತಮ್ಮನ್ನು ನಡುನೀರಿನಲ್ಲಿಕೈ ಬಿಡುತ್ತಿದೆ'' ಎಂದು ಸಂತ್ರಸ್ತರು ಅಳಲು ತೋಡಿಕೊಳ್ಳುತ್ತಾರೆ.

ಆದರೆ ಗ್ರಾ.ಪಂ. ಆಡಳಿತ ಹೇಳುವುದೇ ಬೇರೆ. ''ನವಗ್ರಾಮ ಸ್ಥಳದಲ್ಲಿಸಂತ್ರಸ್ತರಿಗೆ ಮನೆ ಕೊಡುತ್ತೇವೆ ಎಂದು ಹೇಳಿಲ್ಲ. ಕೆರೆಯಲ್ಲಿನ ನೀರು ಖಾಲಿಯಾದ ಮೇಲೆ ನಿಮ್ಮ ಮನೆಗಳಿಗೆ ನೀವು ಹೋಗಿ ಎಂದು ತಿಳಿಸಲಾಗಿತ್ತು.'' ಎನ್ನುತ್ತದೆ.

ಈ ಕುರಿತು ಪ್ರಶ್ನಿಸಲು ಪಿಡಿಒ ವೈ.ಎಚ್‌.ಹೊಟ್ಟಿಗೌಡ್ರ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದರೂ ಕರೆ ಸ್ವೀಕರಿಸಿಲ್ಲ. ಇನ್ನಾದರೂ ಗ್ರಾ.ಪಂ. ಸೂಕ್ತ ಕ್ರಮ ಕೈಗೊಳ್ಳುವುದೋ ಕಾದು ನೋಡಬೇಕು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ