ಆ್ಯಪ್ನಗರ

ಆಯುರ್ವೇದ ವೈದ್ಯ ಪದ್ಧತಿ ನೇತ್ರ ಸಮಸ್ಯೆಗೂ ಪರಿಹಾರ

ಹುಬ್ಬಳ್ಳಿ : ವಿಜಯ ಕರ್ನಾಟಕ ಮತ್ತು ಕೇರಳದ ಶ್ರೀಧರೀಯಮ್‌ ಆಯುರ್ವೇದ ಸಂಸ್ಥೆ ಸಹಯೋಗದಲ್ಲಿ ಶನಿವಾರ ನಗರದಲ್ಲಿನ ಹನ್ಸ್‌ ಹೋಟೆಲ್‌ನಲ್ಲಿ ನಡೆದ ನೇತ್ರ ತಪಾಸಣೆ ಶಿಬಿರ ನಡೆಯಿತು. ತಪಾಸಣೆಗೆ ಬಂದವರು ಮೊದಲು ಹೆಸರು ನೋಂದಣಿ ಮಾಡಿಕೊಂಡರು. ನಂತರ ಅವರನ್ನು ವೈದ್ಯರು ತಪಾಸಣೆ ಮಾಡಿ ಕಣ್ಣಿನ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು.

Vijaya Karnataka 6 Jan 2019, 5:00 am
ಹುಬ್ಬಳ್ಳಿ : ವಿಜಯ ಕರ್ನಾಟಕ ಮತ್ತು ಕೇರಳದ ಶ್ರೀಧರೀಯಮ್‌ ಆಯುರ್ವೇದ ಸಂಸ್ಥೆ ಸಹಯೋಗದಲ್ಲಿ ಶನಿವಾರ ನಗರದಲ್ಲಿನ ಹನ್ಸ್‌ ಹೋಟೆಲ್‌ನಲ್ಲಿ ನಡೆದ ನೇತ್ರ ತಪಾಸಣೆ ಶಿಬಿರ ನಡೆಯಿತು. ತಪಾಸಣೆಗೆ ಬಂದವರು ಮೊದಲು ಹೆಸರು ನೋಂದಣಿ ಮಾಡಿಕೊಂಡರು. ನಂತರ ಅವರನ್ನು ವೈದ್ಯರು ತಪಾಸಣೆ ಮಾಡಿ ಕಣ್ಣಿನ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು.
Vijaya Karnataka Web DRW-5MANJU1A
ವಿಜಯ ಕರ್ನಾಟಕ ಮತ್ತು ಕೇರಳದ ಶ್ರೀಧರೀಯಮ್‌ ಆಯುರ್ವೇದ ಸಂಸ್ಥೆ ಸಹಯೋಗದಲ್ಲಿ ಶನಿವಾರ ಹುಬ್ಬಳ್ಳಿಯಲ್ಲಿನ ಹನ್ಸ್‌ ಹೋಟೆಲ್‌ನಲ್ಲಿ ನಡೆದ ನೇತ್ರ ತಪಾಸಣೆ ಶಿಬಿರದಲ್ಲಿ ವೈದ್ಯರು ತಪಾಸಣೆ ಮಾಡುತ್ತಿರುವುದು.


ಯಾವ ಔಷಧ ತೆಗೆದುಕೊಳ್ಳಬೇಕು, ಆಹಾರ ಪದ್ಧತಿ ಹೇಗಿರಬೇಕು ಮತ್ತು ಕಣ್ಣಿಗೆ ಅಗತ್ಯ ಇರುವ ವ್ಯಾಯಾಮದ ಬಗ್ಗೆ ವೈದ್ಯರು ಮಾಹಿತಿ ನೀಡಿದರು. ಇನ್ನು ಶಿಬಿರದಲ್ಲಿ ಶ್ರೀಧರೀಯಮ್‌ ಸಂಸ್ಥೆಯವರೇ ತಯಾರಿಸಿದ ಔಷಧ ಮಾರಾಟಕ್ಕೆ ಲಭ್ಯ ಇದ್ದವು.

ಆಯುರ್ವೇದ ವೈದ್ಯ ಪದ್ಧತಿಯಿಂದ ಮಾರಣಾಂತಿಕ ಕಾಯಿಲೆ ಅಷ್ಟೇ ಅಲ್ಲದೆ ಕಣ್ಣಿನ ಸಮಸ್ಯೆಗಳಗೂ ಪರಿಹಾರ ನೀಡಬಲ್ಲದು. ಶಸ್ತ್ರ ಚಿಕಿತ್ಸೆ ಇಲ್ಲದೆ ಕಣ್ಣಿನ ಸಮಸ್ಯೆಗಳನ್ನು ಆಯುರ್ವೇದಿಕ್‌ ಪದ್ಧತಿಯಿಂದ ಗುಣಮುಖ ಮಾಡಬಹುದು ಎಂದು ಕೇರಳ ರಾಜ್ಯದ ಶ್ರೀಧರೀಯಮ್‌ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶ್ರೀಕಾಂತ ನಂದೊಂದ್ರಿ ಹೇಳಿದರು.

ಔಷಧಕ್ಕೆ ಗುಣವಾಗದಿರುವ ಕಣ್ಣಿನ ಸಮಸ್ಯೆಗಳಿದ್ದರೆ ಕೇರಳದ ಕೊಚ್ಚಿನ್‌ ಜಿಲ್ಲೆಯ ಎರನಾಕುಲಂನ ಶ್ರೀಧರೀಯಮ್‌ ಆಯುರ್ವೇದ ನೇತ್ರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಆಯುರ್ವೇದಿಕ್‌ ಪದ್ಧತಿ ಮೂಲಕ ಸಂಪೂರ್ಣ ಗುಣಮುಖ ಮಾಡಲಾಗುವುದು. ಆಸ್ಪತ್ರೆಯಲ್ಲಿ 350 ಬೆಡ್‌ಗಳು ಇದ್ದು, ನಿಸರ್ಗದತ್ತವಾದ ಆಸ್ಪತ್ರೆಯಾಗಿದೆ. ಆಸ್ಪತ್ರೆಯಲ್ಲಿ 650ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ ಎಂದು ಡಾ.ಶ್ರೀಕಾಂತ ನಂದೊಂದ್ರಿ ವಿವರಿಸಿದರು.

ಕೇರಳದಲ್ಲಿ ಅಷ್ಟೇ ಅಲ್ಲದೆ ದೇಶದ ವಿವಿಧ ನಗರದಲ್ಲಿ ನಮ್ಮ ಸಂಸ್ಥೆ 26 ಕೇಂದ್ರಗಳನ್ನು ಹೊಂದಿದೆ. ಕೇಂದ್ರ ಸರಕಾರದ ಆಯುಷ್‌ ಇಲಾಖೆಯಿಂದ ಮಾನ್ಯತೆ ಪಡೆದ ಸಂಸ್ಥೆ ನಮ್ಮದಾಗಿದೆ ಎಂದರು.

ವೈದ್ಯರಾದ ಡಾ.ಆದುಲ್‌ ಮೋಹನ್‌, ಡಾ.ಅರುಣ್‌ ಪಿಳ್ಳೆ ಹಾಗೂ ಸಿಬ್ಬಂದಿ ಸೇರಿದಂತೆ ಅನೇಕರು ಇದ್ದರು.
ಆಸ್ಪತ್ರೆ ವಿಳಾಸ:

ಶ್ರೀಧರೀಯಮ್‌ ಆಯುರ್ವೇದ ನೇತ್ರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಎರನಾಕುಲಂ ಕೊಚ್ಚಿನ್‌ ಜಿಲ್ಲೆ, ಕೇರಳ, ನೋಂದಣಿಗೆ 914852253007, 914852276000

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ