ಆ್ಯಪ್ನಗರ

ಬೆಳವಡಿ ಮಲ್ಲಮ್ಮ ಮಹಿಳಾ ಮಂಡಳಿದ 6ನೇ ವಾರ್ಷಿಕೋತ್ಸವ, ನಗೆಹಬ್ಬ

ಅಣ್ಣಿಗೇರಿ : ತಂತ್ರಜ್ಞಾನ ಯುಗದಲ್ಲಿ ಜೀವನದ ಏರಿಳಿತಗಳಲ್ಲಿ ಸಶಕ್ತ ಬದುಕನ್ನು ಕಂಡುಕೊಳ್ಳುವಲ್ಲಿ ಮಹಿಳೆಯರು ವಿಫಲವಾಗಿತ್ತಿರುವುದು ವಿಷಾದನೀಯ. ಅದಕ್ಕಾಗಿ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಮಹಿಳೆಯರ ಕಲ್ಯಾಣಕ್ಕಾಗಿ ಹಲವಾರು ಜನಪರ ಯೋಜನೆ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ ಎಂದು ಶಿಲ್ಪಾ ಜಗದೀಶ ಶೆಟ್ಟರ ಹೇಳಿದರು.

Vijaya Karnataka 5 Mar 2019, 5:00 am
ಅಣ್ಣಿಗೇರಿ : ತಂತ್ರಜ್ಞಾನ ಯುಗದಲ್ಲಿ ಜೀವನದ ಏರಿಳಿತಗಳಲ್ಲಿ ಸಶಕ್ತ ಬದುಕನ್ನು ಕಂಡುಕೊಳ್ಳುವಲ್ಲಿ ಮಹಿಳೆಯರು ವಿಫಲವಾಗಿತ್ತಿರುವುದು ವಿಷಾದನೀಯ. ಅದಕ್ಕಾಗಿ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಮಹಿಳೆಯರ ಕಲ್ಯಾಣಕ್ಕಾಗಿ ಹಲವಾರು ಜನಪರ ಯೋಜನೆ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ ಎಂದು ಶಿಲ್ಪಾ ಜಗದೀಶ ಶೆಟ್ಟರ ಹೇಳಿದರು.
Vijaya Karnataka Web DRW-4ANG1
ಅಣ್ಣಿಗೇರಿಯ ವಿದ್ಯಾನಗರದ ಉದ್ಯಾನವನದಲ್ಲಿ ನಡೆದ ಬೆಳವಡಿ ಮಲ್ಲಮ್ಮ ಮಹಿಳಾ ಮಂಡಳಿದ 6ನೇ ವಾರ್ಷಿಕೋತ್ಸವ, ನಗೆಹಬ್ಬದ ಕಾರ್ಯಕ್ರಮವನ್ನು ಶಿಲ್ಪಾ ಜಗದೀಶ ಶೆಟ್ಟರ ಉದ್ಘಾಟಿಸಿದರು.


ಸ್ಥಳೀಯ ವಿದ್ಯಾನಗರದ ಉದ್ಯಾನವನದಲ್ಲಿ ಬೆಳವಡಿ ಮಲ್ಲಮ್ಮ ಮಹಿಳಾ ಮಂಡಳಿದ 6ನೇ ವಾರ್ಷಿಕೋತ್ಸವ ಹಾಗೂ ನಗೆಹಬ್ಬದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೆಣ್ಣು ಮಕ್ಕಳನ್ನು ಉಳಿಸಿ ಬೆಳೆಸಿ ಎಂಬ ಆಂದೋಲನದ ಮೂಲಕ ಉಚಿತ ಅರೋಗ್ಯ ತಪಾಸಣೆ, ಗೃಹ ಕೈಗಾರಿಕೆ, ಉದ್ಯೋಗ, ಉಚಿತ ಗ್ಯಾಸ್‌, ವಿದ್ಯಾಬ್ಯಾಸಕ್ಕೆ ಸ್ಕಾಲರಶೀಪ್‌, ಶಿಕ್ಷ ಣ, ಲ್ಯಾಪ್‌ಟ್ಯಾಪ್‌, ತಾಂತ್ರಿಕ ವಿದ್ಯಾರ್ಥಿಗಳಿಗೆ ಬ್ಯಾಂಕ್‌ನಿಂದ ಬಡ್ಡಿ ರಹಿತ ಆರ್ಥಿಕ ನೆರವು, ರಿಯಾಯಿತಿ ದರದಲ್ಲಿ ಮೋದಿ ಜನೌಷಧಿ ಸೇರಿದಂತೆ ಅನೇಕ ಯೋಜನೆಗಳನ್ನು ನೀಡಿದ್ದು ಅವುಗಳ ಉಪಯೋಗ ಪಡೆದುಕೊಳ್ಳಬೇಕು. ಮುಂಬರುವ ಚುನಾವಣೆಯಲ್ಲಿ ಮೋದಿ ಅವರು ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಮಹಿಳೆಯರು ಶ್ರಮಿಸೋಣ ಎಂದರು.

ಜ್ಯೋತಿ ಜೋಶಿ, ಪ್ರಭಾವತಿ ಮುನೇನಕೊಪ್ಪ, ವಿಜಯಲಕ್ಷ್ಮಿ ಪಾಟೀಲ, ಶಾಂತಕ್ಕ ನಿಡವಣೆ, ರಾಜೇಶ್ವರಿ ದೇಶಮುಖ, ಕಸ್ತೂರಿ ದಳವಾಯಿ ಮಾತನಾಡಿದರು. ದಾಸೋಹಮಠದ ಶಿವಕುಮಾರ, ಅಂತೂರು-ಬೆಂತೂರ ಬೂದಿಸ್ವಾಮಿ ಹಿರೇಮಠದ ಕುಮಾರ ದೇವರು ಉದ್ಘಾಟಿಸಿದರು.

ಸಂಸ್ಥಾಪಕ ಅಧ್ಯಕ್ಷೆ ಶಕುಂತಲಾ ಬೆಂಡಿಗೇರಿ ಅಧ್ಯಕ್ಷ ತೆ ವಹಿಸಿದ್ದರು. ಪ್ರಭಾವತಿ ಯಳವತ್ತಿ ವರದಿವಾಚನ ಮಂಡಿಸಿದರು. ಎಸ್‌.ಸಾಲಿಮಠ ನಿರೂಪಿಸಿದರು. ಶಶಿಕಲಾ ಯಮನೂರ ಸ್ವಾಗತಿಸಿದರು. ರಜನಿಬಾಯಿ ವೇರ್ಣೇಕರ ಪ್ರಾರ್ಥಿಸಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ