ಆ್ಯಪ್ನಗರ

ಭಗವದ್ಗೀತೆ ಅಭಿಯಾನ ಯಶಸ್ವಿಗೆ ಮನವಿ

ಹುಬ್ಬಳ್ಳಿ : ನಗರದ ನೆಹರು ಕ್ರೀಡಾಂಗಣದಲ್ಲಿ ಡಿಸೆಂಬರ್‌ 19 ರಂದು ಬೃಹತ್‌ ಭಗವದ್ಗೀತೆ ಪಠಣ ಕಾರ್ಯಕ್ರಮ ಆಯೋಜಿಸಿದ್ದು, ಯಶಸ್ಸಿಗೆ ಎಲ್ಲ ಸಮಾಜ ಬಾಂಧವರು ಕೈ ಜೋಡಿಸಬೇಕೆಂದು ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನಮಠದ ಜ.ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಮನವಿ ಮಾಡಿದರು.

Vijaya Karnataka 27 Nov 2018, 5:00 am
ಹುಬ್ಬಳ್ಳಿ : ನಗರದ ನೆಹರು ಕ್ರೀಡಾಂಗಣದಲ್ಲಿ ಡಿಸೆಂಬರ್‌ 19 ರಂದು ಬೃಹತ್‌ ಭಗವದ್ಗೀತೆ ಪಠಣ ಕಾರ್ಯಕ್ರಮ ಆಯೋಜಿಸಿದ್ದು, ಯಶಸ್ಸಿಗೆ ಎಲ್ಲ ಸಮಾಜ ಬಾಂಧವರು ಕೈ ಜೋಡಿಸಬೇಕೆಂದು ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನಮಠದ ಜ.ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಮನವಿ ಮಾಡಿದರು.
Vijaya Karnataka Web DRW-26MANJU3A


ಭಗವದ್ಗೀತೆ ಅಭಿಯಾನದ ಅಂಗವಾಗಿ ನಗರದ ಹವ್ಯಕ ಭವನದಲ್ಲಿ ಸೋಮವಾರ ಸಂಜೆ ನಡೆದ ಸರ್ವ ಸಮಾಜದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

''ಒಂದು ಲಕ್ಷ ಬಾರಿ ಗೀತಾ ಪಠಣ ಮಾಡಿಸಬೇಕೆಂಬ ಗುರಿ ಹೊಂದಿದ್ದೇವೆ. ಇದಕ್ಕಾಗಿ ವ್ಯಾಪಕ ಸಿದ್ಧತೆಗಳು ಭರದಿಂದ ನಡೆಯುತ್ತಿದ್ದು, ಕಾರ್ಯಕ್ರಮದ ಸಮಿತಿ ಮತ್ತು ಉಪಸಮಿತಿಗಳು ಕಾರ್ಯನಿರ್ವಹಿಸುತ್ತಿವೆ. ಭಗವದ್ಗೀತೆ ಮತ್ತು ದೇಶದ ಕಾನೂನು ಕುರಿತು ಡಿ. 2ರಂದು ಉಪನ್ಯಾಸ, ಡಿ. 4ರಿಂದ 10ರವರೆಗೆ ಗೀತಾ ಸಂದೇಶ ಸಾಪ್ತಾಹ ನಡೆಯಲಿದೆ'' ಎಂದು ಅಭಿಯಾನದ ರೂಪುರೇಷೆ ವಿವರಿಸಿದರು.

''ಭಗವದ್ಗೀತೆ ಹೆಚ್ಚಿನವರಿಗೆ ತಲುಪಿಸುವ ಉದ್ದೇಶದಿಂದ ಈ ವರ್ಷ ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ 1000 ಕಡೆ ಗೀತಾ ಅಭಿಯಾನ ಹಾಗೂ 100 ಉಪನ್ಯಾಸ ಹಮ್ಮಿಕೊಳ್ಳುವ ಗುರಿ ಇಟ್ಟುಕೊಂಡಿದ್ದೇವೆ'' ಎಂದು ತಿಳಿಸಿದರು.

''ಭಗವದ್ಗೀತೆ ಜಯಂತಿ ಸಾರ್ವಜನಿಕ ಹಬ್ಬವಾಗಬೇಕು. ಆ ಹಬ್ಬದಂದು ಪ್ರತಿಯೊಬ್ಬರು ಮನೆ, ಮನದಲ್ಲಿ ಭಗವದ್ಗೀತೆ ಪಠಣ ಮತ್ತು ವಿಶೇಷ ಉಪನ್ಯಾಸಗಳನ್ನು ಆಯೋಜಿಸಬೇಕು'' ಎಂದು ಹೇಳಿದರು.

''ಜಗತ್ತಿನಲ್ಲೇ ಭಾರತ ಅತ್ಯಧಿಕ ಸಕ್ಕರೆ ರೋಗಿಗಳನ್ನು ಹೊಂದಿದ ರಾಷ್ಟ್ರವಾಗಿದೆ. ಈ ಸಕ್ಕರೆ ಕಾಯಿಲೆ ಬರಲು ಮಾನಸಿಕ ಒತ್ತಡವೇ ಕಾರಣವಾಗಿದೆ. ಇಂತಹ ರೋಗಿಗಳನ್ನು ಕರೆದು ನಾವು ಮೂರು ಬಾರಿ ಶಿಬಿರ ಮಾಡಿದ್ದೇವೆ. ಶಿಬಿರದಲ್ಲಿ ಭಾಗವಹಿಸಿದವರಿಗೆ ಗೀತಾ ಪಠಣ, ಯೋಗ ಹಾಗೂ ಹಿತಮಿತ ಆಹಾರ ನೀಡಿದಾಗ ಉತ್ತಮ ಆರೋಗ್ಯ ಹೊಂದುವಂತಾಗಿದೆ. ಮನುಷ್ಯನ ಜೀವನದಲ್ಲಿ ಭಗವದ್ಗೀತೆ ದಿವ್ಯಔಷಧವಾಗಿದೆ'' ಎಂದರು.

ಸಮಾರಂಭದಲ್ಲಿ ಹವ್ಯಕ, ರಾಮಕ್ಷತ್ರೀಯ, ಕುರುಬ, ಸ್ವಕುಳಸಾಳಿ, ರಜಪೂತ, ಗುಜರಾತಿ, ಲಿಂಗಾಯತ, ಚಿತ್ಪಾವನ, ಅಶ್ವತ್ಥಪೂರ ದೇಶಸ್ತ, ಸಾರಸ್ವತ, ಭಾವಸಾರ ಕ್ಷತ್ರೀಯ, ಎಸ್‌ಎಸ್‌ಕೆ, ಶಿಂದೀ ಸಮಾಜ, ಮಾಳಿ, ಮರಾಠಾ, ಜೈನ್‌, ಕುರುಹೀನಶೆಟ್ಟಿ, ಕೊರವ, ಆರ್ಯವೈಶ್ಯ, ಅಗರವಾಲ, ಬಂಜಾರ, ಗೊಂದಳಿ, ಸಮಗಾರ, ವಾಲ್ಮೀಕಿ, ಹರಳಯ್ಯ, ಪಟೇಲ, ದಕ್ಷಿಣ ಕನ್ನಡ ದ್ರಾವಿಡ, ಉಪ್ಪಾರ, ಬಂಟ, ಚಿತ್ರಗಾರ ಸೇರಿದಂತೆ ಒಟ್ಟು 40 ಸಾಮಾಜದ ಮುಖಂಡರು ಪಾಲ್ಗೊಂಡಿದ್ದರು.

ಅಭಿಯಾನದ ಕಾರ್ಯಾಧ್ಯಕ್ಷ ಎಂ.ಬಿ. ನಾತು ಸ್ವಾಗತಿಸಿದರು. ಶ್ರೀಧರ ಜೋಶಿ ಪ್ರಾಸ್ತಾವಿಕ ಮಾತನಾಡಿದರು. ನೀಲಕಂಠಸಾ ಜಡಿ, ಅಧ್ಯಕ್ಷ ಜಿತೇಂದ್ರ ಮಜೆಥಿಯಾ, ಪ್ರಧಾನ ಸಂಚಾಲಕ ಎ.ಸಿ. ಗೋಪಾಲ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ