ಆ್ಯಪ್ನಗರ

ಪೊಲೀಸ್‌ ವಾಹನಕ್ಕೆ ಬೈಕ್‌ ಡಿಕ್ಕಿ: ವ್ಯಕ್ತಿಗೆ ಗಾಯ

ಹುಬ್ಬಳ್ಳಿ : ಪೊಲೀಸ್‌ ಪೆಟ್ರೋಲಿಂಗ್‌ ವಾಹನಕ್ಕೆ ಬೈಕ್‌ ಡಿಕ್ಕಿಯಾಗಿ ಬೈಕ್‌ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಲ್ಲಿಯ ಹು-ಧಾ ಮಾರ್ಗದ ಆರ್‌ಟಿಒ ಕಚೇರಿ ಎದುರು ಸೋಮವಾರ ಮಧ್ಯಾಹ್ನ ಸಂಭವಿಸಿದೆ.

Vijaya Karnataka 25 Dec 2018, 5:00 am
ಹುಬ್ಬಳ್ಳಿ : ಪೊಲೀಸ್‌ ಪೆಟ್ರೋಲಿಂಗ್‌ ವಾಹನಕ್ಕೆ ಬೈಕ್‌ ಡಿಕ್ಕಿಯಾಗಿ ಬೈಕ್‌ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಲ್ಲಿಯ ಹು-ಧಾ ಮಾರ್ಗದ ಆರ್‌ಟಿಒ ಕಚೇರಿ ಎದುರು ಸೋಮವಾರ ಮಧ್ಯಾಹ್ನ ಸಂಭವಿಸಿದೆ.
Vijaya Karnataka Web DRW-24MANJU6A
ಅಪಘಾತದಲ್ಲಿ ಜಖಂಗೊಂಡ ಪೊಲೀಸ್‌ ಪೆಟ್ರೊಲಿಂಗ್‌ ವಾಹನ.


ಹುಬ್ಬಳ್ಳಿಯಿಂದ ಧಾರವಾಡ ಕಡೆ ಹೊರಟಿದ್ದ ಪೊಲೀಸ್‌ ಪೆಟ್ರೋಲಿಂಗ್‌ ವಾಹನಕ್ಕೆ ಧಾರವಾಡ ಕಡೆಯಿಂದ ಬರುತ್ತಿದ್ದ ಬೈಕ್‌ ಡಿಕ್ಕಿಯಾಗಿದೆ. ಬೈಕ್‌ ಸವಾರನ ತಲೆ ಹಾಗೂ ಎದೆಯ ಭಾಗಕ್ಕೆ ಪೆಟ್ಟು ಬಿದ್ದಿದ್ದು, ತೀವ್ರ ರಕ್ತಸ್ರಾವ ಉಂಟಾಗಿದೆ. ಅದರಂತೆ ಪೊಲೀಸ್‌ ವಾಹನದಲ್ಲಿ ಸಿಬ್ಬಂದಿಗೆ ಯಾವುದೇ ಪೆಟ್ಟು ಆಗಿಲ್ಲ. ಬೈಕ್‌ ಸವಾರ ತನ್ನ ದಾರಿ ಬಿಟ್ಟು ತಪ್ಪು ದಾರಿಯಲ್ಲಿ ಬಂದಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೈಕ್‌ ಡಿಕ್ಕಿ ಹೊಡೆದ ರಭಸಕ್ಕೆ ಪೆಟ್ರೋಲಿಂಗ್‌ ವಾಹನ ಮತ್ತು ಬೈಕ್‌ ಜಖಂಡಗೊಂಡಿದೆ. ಅಲ್ಲದೆ ಪೆಟ್ರೋಲಿಂಗ್‌ ವಾಹನದ ಎಂಜಿನ್‌ಗೆ ದೊಡ್ಡ ಹೊಡೆತ ಬಿದ್ದಿದ್ದರಿಂದ ರೇಡಿಯೇಟರ್‌ ಒಡೆದಿದೆ. ಈ ಕುರಿತು ಉತ್ತರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ