ಆ್ಯಪ್ನಗರ

ವಿನಯ ಕುಲಕರ್ಣಿ ವಿರುದ್ಧ ಬಿಜೆಪಿ ಷಡ್ಯಂತ್ರ: ಕೌಲಗಿ ಆರೋಪ

ಹುಬ್ಬಳ್ಳಿ : ಪ್ರತಿ ಚುನಾವಣೆಯಲ್ಲಿಯೂ ಬಿಜೆಪಿ ಮಾಜಿ ಸಚಿವ ವಿನಯ ಕುಲಕರ್ಣಿ ವಿರುದ್ಧ ಕುತಂತ್ರ ಮಾಡುತ್ತಲೇ ಬಂದಿದೆ. ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿಯೂ ಯೋಗೇಶಗೌಡ ಪ್ರಕರಣದಲ್ಲಿ ಸುಳ್ಳು ದೂರು ನೀಡಿ ಎಫ್‌ಐಆರ್‌ ದಾಖಲಿಸಲು ಷಡ್ಯಂತ್ರ ನಡೆಸಿದೆ ಎಂದು ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್‌ ಸಮಿತಿ ವಕ್ತಾರ ವೇದವ್ಯಾಸ ಕೌಲಗಿ ಆರೋಪಿಸಿದ್ದಾರೆ.

Vijaya Karnataka 10 Apr 2019, 5:00 am
ಹುಬ್ಬಳ್ಳಿ : ಪ್ರತಿ ಚುನಾವಣೆಯಲ್ಲಿಯೂ ಬಿಜೆಪಿ ಮಾಜಿ ಸಚಿವ ವಿನಯ ಕುಲಕರ್ಣಿ ವಿರುದ್ಧ ಕುತಂತ್ರ ಮಾಡುತ್ತಲೇ ಬಂದಿದೆ. ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿಯೂ ಯೋಗೇಶಗೌಡ ಪ್ರಕರಣದಲ್ಲಿ ಸುಳ್ಳು ದೂರು ನೀಡಿ ಎಫ್‌ಐಆರ್‌ ದಾಖಲಿಸಲು ಷಡ್ಯಂತ್ರ ನಡೆಸಿದೆ ಎಂದು ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್‌ ಸಮಿತಿ ವಕ್ತಾರ ವೇದವ್ಯಾಸ ಕೌಲಗಿ ಆರೋಪಿಸಿದ್ದಾರೆ.
Vijaya Karnataka Web loka samar

ಈ ಕುರಿತು ಮಂಗಳವಾರ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ವಿನಯ ಕುಲಕರ್ಣಿ ಗೆಲ್ಲುತ್ತಾರೆಂಬ ಕಾರಣಕ್ಕಾಗಿ ಅವರ ಆಪ್ತ ಸಹಾಯಕನ ಮೇಲೆ ಐಟಿ ದಾಳಿ ಮಾಡಿಸಿ ಕಾರ್ಯಕರ್ತರ ಎಲ್ಲ ಮಾಹಿತಿ ಇದ್ದ ಅವರನ್ನು ಮೂರು ದಿನ ಹಿಡಿದಿಟ್ಟುಕೊಂಡರು. ಸಹಾಯಕರಿಲ್ಲದೆ ಅಸಹಾಯಕರಾದ ವಿನಯ ವಿಧಾನಸಭೆ ಚುನಾವಣೆಯಲ್ಲಿ ಸೋತರು. ಪ್ರಸ್ತುತ ಲೋಕಸಭೆಯಲ್ಲಿ ವಿನಯ ಸ್ಪರ್ಧಿಸುತ್ತಾರೆಂದು ತಿಳಿದು ಈ ಹಿಂದೆಯೇ ದೂರು ದಾಖಲಿಸಲು ಜೋಶಿ ಪ್ರೇರಣೆ ನೀಡಿದ್ದರು ಎಂದು ಅವರು ದೂರಿದ್ದಾರೆ.

ಇನ್ನು ಉದ್ದೇಶಪೂರ್ವಕವಾಗಿ ಈಗ ಎಫ್‌ಐಆರ್‌ ದಾಖಲಾಗಿ ಇದನ್ನೇ ಮುಂದಿಟ್ಟುಕೊಂಡು ಅಪಪ್ರಚಾರ ಮಾಡಲು ಬಿಜೆಪಿ ಹುನ್ನಾರ ನಡೆಸಿದೆ. ಯಾವ ತಪ್ಪೂ ಮಾಡದ ವಿನಯ್‌ಗೆ ಯಾವುದೇ ಅಂಜಿಕೆ ಇಲ್ಲ. ಇದೆಲ್ಲವನ್ನು ಜಿಲ್ಲೆಯ ಮತದಾರರು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಜೋಶಿ ಅವರಿಗೆ ತಕ್ಕ ಉತ್ತರ ನೀಡಲಿದ್ದಾರೆ. ಎಫ್‌ಐಆರ್‌ ದಾಖಲಾದ ತಕ್ಷಣ ವಿನಯ್‌ ಕುಲಕರ್ಣಿ ಅಪರಾಧಿ ಅಲ್ಲ. ಮಾಧ್ಯಮಗಳು ಹೇಳುವಂತೆ ವಿನಯ್‌ಗೆ ಯಾವುದೇ ಸಂಕಷ್ಟವಿಲ್ಲ. ಈ ಬಾರಿ ವಿನಯ ಕುಲಕರ್ಣಿ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ