ಆ್ಯಪ್ನಗರ

ಬಿಜೆಪಿ ಬಂಡವಾಳಿಗರ ಕೈಗೊಂಬೆ: ಆರೋಪ

ಕಲಘಟಗಿ: ಜನತೆ ನಿತ್ಯ ಅನುಭವಿಸುತ್ತಿರುವ ಸಮಸ್ಯೆಗಳಾದ ಬೆಲೆ ಏರಿಕೆ, ನಿರುದ್ಯೋಗ, ಬಡತನ, ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ನಿಯಂತ್ರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಕಮ್ಯುನಿಸ್ಟ್‌ ಪಕ್ಷ ದ ಲೋಕಸಭೆ ಅಭ್ಯರ್ಥಿ ಗಂಗಾಧರ ಬಡಿಗೇರ ತಿಳಿಸಿದರು.

Vijaya Karnataka 11 Apr 2019, 5:00 am
ಕಲಘಟಗಿ: ಜನತೆ ನಿತ್ಯ ಅನುಭವಿಸುತ್ತಿರುವ ಸಮಸ್ಯೆಗಳಾದ ಬೆಲೆ ಏರಿಕೆ, ನಿರುದ್ಯೋಗ, ಬಡತನ, ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ನಿಯಂತ್ರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಕಮ್ಯುನಿಸ್ಟ್‌ ಪಕ್ಷ ದ ಲೋಕಸಭೆ ಅಭ್ಯರ್ಥಿ ಗಂಗಾಧರ ಬಡಿಗೇರ ತಿಳಿಸಿದರು.
Vijaya Karnataka Web HBL-1004-2-3-GANGADAR-KLG 10
ಕಲಘಟಗಿ ಪಟ್ಟಣದಲ್ಲಿ ಕಮ್ಯುನಿಸ್ಟ್‌ ಪಕ್ಷ ದ ಲೋಕಸಭೆ ಅಭ್ಯರ್ಥಿ ಗಂಗಾಧರ ಬಡಿಗೇರ ಮತಯಾಚಿಸಿದರು.


ಪಟ್ಟಣದಲ್ಲಿ ಬುಧವಾರ ಚುನಾವಣಾ ಪ್ರಚಾರದಲ್ಲಿ ಮತಯಾಚಿಸಿ ಅವರು ಮಾತನಾಡಿದರು.

ಜಾಗತೀಕರಣ,ಉದಾರೀಕರಣ, ಖಾಸಗೀಕರಣ ನೀತಿಗಳಿಂದ ಜನರ ಜೀವನ ದುಸ್ತರಗೊಂಡಿದೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರ ದೇಶದ ಬಂಡವಾಳಿಗರ ಕೈಗೊಂಬೆಯಾಗಿದೆ. ಹೊಸ ಉದ್ಯೋಗ ಸೃಷಿಸಿಲ್ಲ. ರೈತರ ಸಾಲಮನ್ನಾ ಮಾಡದೇ ಕಾರ್ಪೋರೇಟ್‌ ಮನೆತನಗಳಿಗೆ ತೆರಿಗೆ ವಿನಾಯಿತಿ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಸಮಾಜಸೇವಕ ಶರಣು ಗೋನವಾರ್‌ ಮಾತನಾಡಿ ದೇಶಾದ್ಯಂತ ಸಾಲಭಾದೆಯಿಂದ ರೈತರ ಆತ್ಮಹತ್ಯೆಗಳು ನಿರಂತರ ನಡೆಯುತ್ತಿವೆ. ಜನಸಾಮಾನ್ಯರು ಹಸಿವು ಹಾಗೂ ಅಪೌಷ್ಟಿಕತೆಯಿಂದ ಮರಣ ಪ್ರಮಾಣ ಹೆಚ್ಚುತ್ತಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಷಾ ಅವರ ಆಸ್ತಿ ವೃದ್ಧಿ ಆಗಿದ್ದು ಬಿಟ್ಟರೆ, ಜನಸಾಮಾನ್ಯರ ಸ್ಥಿತಿ ಚಿಂತಾಜನಕವಾಗಿದೆ. ಎರಡು ದಶಕಗಳಲ್ಲಿ ರೈತ ಕಾರ್ಮಿಕರ, ಅಂಗನವಾಡಿ, ಆಶಾ, ಬಿಸಿಯೂಟ ಕಾರ್ಮಿಕರು, ವಿದ್ಯಾರ್ಥಿ ಯುವ ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸುತ್ತಿರುವ ಕಮ್ಯುನಿಷ್ಟ ಅಭ್ಯರ್ಥಿ ಬ್ಯಾಟ್‌ ಗುರುಗೆ ಮತ ನೀಡುವಂತೆ ಮನವಿ ಮಾಡಿದರು.

ಲಕ್ಷ ್ಮಣ ಜಡಗಣ್ಣವರ, ಮಧುಲತಾ ಗೌಢರ, ಭುವನಾ, ರಮೇಶ ಹೊಸಮನಿ, ವಿಜಯಲಕ್ಷ್ಮಿ, ರಾಜು, ಘಾಳಿ ರಾಯಣ್ಣ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ