ಆ್ಯಪ್ನಗರ

ಸರಕಾರ ಬಹಳ ದಿನ ಉಳಿಯಲ್ಲ ಅಂತಾ ನಾವು‌ ಹೇಳಿದ್ದ ರೀತಿಯೇ ಆಗುತ್ತಿದೆ: ಯಡಿಯೂರಪ್ಪ

ಸಮ್ಮಿಶ್ರ ಸರಕಾರ ಬಹಳ ದಿನ ಉಳಿಯಲ್ಲ ಅಂತಾ ನಾವು‌ ಹೇಳಿದ್ದ ರೀತಿಯೇ ಆಗುತ್ತಿದೆ. ಸರಕಾರ ಬೀಳುವ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

Vijaya Karnataka Web 18 May 2019, 9:27 pm

ಹುಬ್ಬಳ್ಳಿ: ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗೋದೆ ಉತ್ತಮ ಎಂಬ ಜೆಡಿಎಸ್ ಹಿರಿಯ ಮುಖಂಡ ಬಸವರಾಜ್ ಹೊರಟ್ಟಿ ಹೇಳಿಕೆಗೆ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
Vijaya Karnataka Web yeddyurappa 1


ಈ ಸಂಬಂಧ ಹುಬ್ಬಳ್ಳಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷರು, '' ಜೆಡಿಎಸ್ ಹಿರಿಯ ಮುಖಂಡ ಬಸವರಾಜ್ ಹೊರಟ್ಟಿ ಸರಕಾರ ವಿಸರ್ಜಿಸಬೇಕೆಂದು ಹೇಳಿಕೆ ಕೊಟ್ಟಿದ್ದಾರೆ. ವಿಶ್ವನಾಥ್ ಮತ್ತೊಂದು ರೀತಿ ಹೇಳಿಕೆ ಕೊಟ್ಟಿದ್ದಾರೆ. ಆದರೆ, ಸಿಎಂ ಕುಮಾರಸ್ವಾಮಿ ಇದ್ಯಾವುದಕ್ಕೂ ಪ್ರತಿಕ್ರಿಯಿಸಿಲ್ಲ. ಚುನಾವಣೆ ಫಲಿತಾಂಶ ಬರುವ ಮೊದಲೇ ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿನ ಗೊಂದಲ‌ ಉಲ್ಬಣಗೊಂಡಿದೆ ಎಂದು ಯಡಿಯೂರಪ್ಪ ಆರೋಪಿಸಿದ್ದಾರೆ. ಈ ಸಮ್ಮಿಶ್ರ ಸರಕಾರ ಬಹಳ ದಿನ ಉಳಿಯಲ್ಲ ಅಂತಾ ನಾವು‌ ಹೇಳಿದ್ದ ರೀತಿಯೇ ಆಗುತ್ತಿದೆ. ಸರಕಾರ ಬೀಳುವ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ. ಸರಕಾರ ವಿಸರ್ಜನೆ ಸುಲಭದ‌ ಕೆಲಸವಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಿಗೆ ಸೇರಿ ಕ್ಯಾಬಿನೆಟ್‌ನಲ್ಲಿ ಬಹುಮತದ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತೆ. ಇದಕ್ಕೆ ಕಾಂಗ್ರೆಸ್ ವಿರೋಧಿಸಿದ್ರೆ ಕೇವಲ ಜೆಡಿಎಸ್‌ನಿಂದ ವಿಸರ್ಜನೆ ಮಾಡಕ್ಕೆ ಬರಲ್ಲ. ಕಾನೂನಿನ ತೊಡಕು ಇದೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್‌ನವರ ಮನಸ್ಸಲ್ಲೇನಿದೆ, ಏನಾಗುತ್ತೆ ಕಾದು ನೋಡೋಣ. ಒಟ್ಟಾರೆ ಇದೆಲ್ಲದರ ಅರ್ಥ ಲೋಕಸಭಾ ಚುನಾವಣೆ ಮೈತ್ರಿಗೆ ತಿರುಗು ಮುರುಗಾಗುತ್ತೆ ಅನ್ನೋದು‌ ಸ್ಪಷ್ಟ. ಕಾಂಗ್ರೆಸ್ ಅತಿರಥ ಮಹಾರಥರು ಸೋಲುತ್ತಿದ್ದಾರೆ. ಇದೆಲ್ಲದರಿಂದ ಕಾಂಗ್ರೆಸ್, ಜೆಡಿಎಸ್‌ನಲ್ಲಿ ಗೊಂದಲದ ಗೂಡಾಗಿದೆ. ಹೀಗಾಗಿ ಇಂತಹ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ವ್ಯಂಗ್ಯವಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ