ಆ್ಯಪ್ನಗರ

ಅನಧಿಕೃತವಾಗಿ ಬಿಪಿಎಲ… ಕಾರ್ಡ್‌ ಹಿಂದಿರುಗಿಸಲು ಗಡುವು

ಹುಬ್ಬಳ್ಳಿ : ಸುಳ್ಳು ಮಾಹಿತಿ ನೀಡಿ ಅನಧಿಕೃತವಾಗಿ ಬಿಪಿಎಲ… ಕಾರ್ಡ ಪಡೆದಿರುವವರು ಸೆ.30ರೊಳಗಾಗಿ ಕಾರ್ಡ್‌ಗಳನ್ನು ಸರಕಾರಕ್ಕೆ ಹಿಂದಿರುಗಿಸಬೇಕು. ಆದಾಯ ತೆರಿಗೆ ಪಾವತಿಸುತ್ತಿರುವವರು, ಒಂದು ಸಾವಿರ ಚದುರ ಅಡಿಗೂ ದೊಡ್ಡದಾದ ಪಕ್ಕಾ ಮನೆ ಹೊಂದಿರುವವರು, ರಾಜ್ಯ ಹಾಗೂ ಕೇಂದ್ರ ಸರಕಾರದ

Vijaya Karnataka 14 Sep 2019, 5:00 am
ಹುಬ್ಬಳ್ಳಿ : ಸುಳ್ಳು ಮಾಹಿತಿ ನೀಡಿ ಅನಧಿಕೃತವಾಗಿ ಬಿಪಿಎಲ… ಕಾರ್ಡ ಪಡೆದಿರುವವರು ಸೆ.30ರೊಳಗಾಗಿ ಕಾರ್ಡ್‌ಗಳನ್ನು ಸರಕಾರಕ್ಕೆ ಹಿಂದಿರುಗಿಸಬೇಕು.
Vijaya Karnataka Web bpl unauthorizedsurrender
ಅನಧಿಕೃತವಾಗಿ ಬಿಪಿಎಲ… ಕಾರ್ಡ್‌ ಹಿಂದಿರುಗಿಸಲು ಗಡುವು

ಆದಾಯ ತೆರಿಗೆ ಪಾವತಿಸುತ್ತಿರುವವರು, ಒಂದು ಸಾವಿರ ಚದುರ ಅಡಿಗೂ ದೊಡ್ಡದಾದ ಪಕ್ಕಾ ಮನೆ ಹೊಂದಿರುವವರು, ರಾಜ್ಯ ಹಾಗೂ ಕೇಂದ್ರ ಸರಕಾರದ ನೌಕರರು, ಇತರ ಖಾಸಿಗಿ ಕಂಪನಿ, ಬ್ಯಾಂಕ್‌ ಉದ್ಯೋಗಿಗಳು, ಉದ್ದಿಮೆದಾರರು, ಸ್ವತಃ ಕಾರು, ಲಾರಿ, ಜೆಸಿಬಿ ಮೊದಲಾದ ವಾಹನ ಹೊಂದಿರುವರು, ಮನೆ ಬಾಡಿಗೆ ಆದಾಯ ಪಡೆಯುವವರು, ನಿವೃತ್ತಿ ಹೊಂದಿರುವ ಸರಕಾರಿ ನೌಕರರು ಸ್ವಂತ ಹಾಗೂ ಮನೆಯವರ ಹೆಸರಿನಲ್ಲಿಬಿಪಿಎಲ… ಕಾರ್ಡ್‌ ಹೊಂದಿದ್ದಾರೆ. ಇದು ನಿಯಮ ಬಾಹಿರವಾಗಿದೆ. ಇಂಥವರ ವಿರುದ್ಧ 1977ರ ಕರ್ನಾಟಕ ಅನಧಿಕೃತ ಪಡಿತರದ ಮಾಲಿಕತ್ವದ ಪ್ರತಿಬಂಧಕ ಕಾಯಿದೆ ಅನುಸಾರ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು ಎಂದು ಹುಬ್ಬಳ್ಳಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ