ಆ್ಯಪ್ನಗರ

ದುಷ್ಕರ್ಮಿಗಳ ಬಂಧನಕ್ಕೆ ಬ್ರಾಹ್ಮಣ ಮಹಾಸಂಘ ಒತ್ತಾಯ

ಹುಬ್ಬಳ್ಳಿ : ಕೊಪ್ಪಳ ಜಿಲ್ಲೆಯ ಆನೆಗೊಂದಿಯ ತುಂಗಭದ್ರಾ ನದಿಯ ದಡದಲ್ಲಿರುವ ನವಬೃಂದಾವನ ನಡುಗಡ್ಡೆಯಲ್ಲಿರುವ ವ್ಯಾಸರಾಯರ ಬೃಂದಾವನ ಧ್ವಂಸಗೊಳಿಸಿದ ದುಷ್ಕರ್ಮಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತ ಬ್ರಾಹ್ಮಣ ಮಹಾಸಂಘದ ಧಾರವಾಡದ ಜಿಲ್ಲಾ ಘಟಕ ಗುರುವಾರ ಸರಕಾರವನ್ನು ಒತ್ತಾಯಿಸಿದೆ.

Vijaya Karnataka 19 Jul 2019, 5:00 am
ಹುಬ್ಬಳ್ಳಿ : ಕೊಪ್ಪಳ ಜಿಲ್ಲೆಯ ಆನೆಗೊಂದಿಯ ತುಂಗಭದ್ರಾ ನದಿಯ ದಡದಲ್ಲಿರುವ ನವಬೃಂದಾವನ ನಡುಗಡ್ಡೆಯಲ್ಲಿರುವ ವ್ಯಾಸರಾಯರ ಬೃಂದಾವನ ಧ್ವಂಸಗೊಳಿಸಿದ ದುಷ್ಕರ್ಮಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತ ಬ್ರಾಹ್ಮಣ ಮಹಾಸಂಘದ ಧಾರವಾಡದ ಜಿಲ್ಲಾ ಘಟಕ ಗುರುವಾರ ಸರಕಾರವನ್ನು ಒತ್ತಾಯಿಸಿದೆ.
Vijaya Karnataka Web brahmin mahasangha insists on arrest of outlaws
ದುಷ್ಕರ್ಮಿಗಳ ಬಂಧನಕ್ಕೆ ಬ್ರಾಹ್ಮಣ ಮಹಾಸಂಘ ಒತ್ತಾಯ

ಈ ಕುರಿತು ತಹಸೀಲ್ದಾರ್‌ರಿಗೆ ಮನವಿ ಸಲ್ಲಿಸಿದ ಮಹಾಸಂಘ ಧಾರವಾಡ ಜಿಲ್ಲಾ ಘಟಕದ ಪದಾಧಿಕಾರಿಗಳು, ಭಾರತೀಯ ಸಂಪ್ರದಾಯದ ಸನಾತನ ಪರಂಪರೆಯಲ್ಲಿ ವ್ಯಾಸರಾಯರು ಶ್ರೇಷ್ಠ ಯತಿಗಳಾಗಿದ್ದಾರೆ. ಅವರ ಮೂಲ ಬೃಂದಾವನ ಧ್ವಂಸ ಮಾಡಿರುವ ಘಟನೆ ಸಮಾಜದ ಜನರಿಗೆ ತೀವ್ರ ನೋವು ಉಂಟು ಮಾಡಿದೆ ಎಂದು ಹೇಳಿದ್ದಾರೆ.

ಎಲ್ಲ ಧರ್ಮಗಳ ರಕ್ಷ ಣೆ ಮತ್ತು ಅವರ ಭಾವನೆಗಳಿಗೆ ಬೆಲೆ ಕೊಡಬೇಕಾಗಿದ್ದು ಮುಖ್ಯಮಂತ್ರಿ ಕರ್ತವ್ಯ. ಈ ಕೃತ್ಯಕ್ಕೆ ಕಾರಣರಾದವರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು. ಮುಂದೆ ಈ ರೀತಿಯ ಘಟನೆ ನಡೆಯದಂತೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು ಎಂದು ಮಹಾಸಂಘದ ಪದಾಧಿಕಾರಿಗಳು ಮನವಿಯಲ್ಲಿ ಆಗ್ರಹಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್‌.ಪುರೋಹಿತ, ಪ್ರಧಾನ ಕಾರ್ಯದರ್ಶಿ ಡಾ. ಪವನ ವಿ. ಜೋಶಿ, ಖಜಾಂಚಿ ಮಾಲತೇಶ ಗ್ರಾಮಪುರೋಹಿತ, ಸಮಾಜದ ಪ್ರಮುಖರಾದ ರಮೇಶ ಕುಲಕರ್ಣಿ, ಸಂಜೀವ ಕುಲಕರ್ಣಿ, ಸಂತೋಷ ಹಾವನೂರ, ಅಭಿಷೇಕ ಕೌಜಲಗಿ, ಪ್ರಕಾಶ ಕುಲಕರ್ಣಿ, ಪ್ರಾಣೇಶ ಕುಲಕರ್ಣಿ, ಸಮೀರ್‌ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ