ಆ್ಯಪ್ನಗರ

ಸ್ತನ್ಯಪಾನದಿಂದ ತಾಯಿ ಮಗುವಿನ ಬಾಂಧವ್ಯ ವೃದ್ಧಿ

ಉಪ್ಪಿನಬೆಟಗೇರಿ : ಮಕ್ಕಳಿಗೆ ಎದೆಹಾಲು ಕುಡಿಸುವುದರಿಂದ ತಾಯಿ ಮತ್ತು ಮಗುವಿನ ಬಾಂಧವ್ಯ ವೃದ್ಧಿಸುವ ಜತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಲು ಸಹಾಯವಾಗುತ್ತದೆ ಎಂದು ಆಶಾ ಕಾರ್ಯಕರ್ತೆ ಶಾಂತಾ ಚೌಹಾಣ ಹೇಳಿದರು.

Vijaya Karnataka 8 Aug 2019, 5:00 am
ಉಪ್ಪಿನಬೆಟಗೇರಿ : ಮಕ್ಕಳಿಗೆ ಎದೆಹಾಲು ಕುಡಿಸುವುದರಿಂದ ತಾಯಿ ಮತ್ತು ಮಗುವಿನ ಬಾಂಧವ್ಯ ವೃದ್ಧಿಸುವ ಜತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಲು ಸಹಾಯವಾಗುತ್ತದೆ ಎಂದು ಆಶಾ ಕಾರ್ಯಕರ್ತೆ ಶಾಂತಾ ಚೌಹಾಣ ಹೇಳಿದರು.
Vijaya Karnataka Web breastfeeding enhances mother child attachment
ಸ್ತನ್ಯಪಾನದಿಂದ ತಾಯಿ ಮಗುವಿನ ಬಾಂಧವ್ಯ ವೃದ್ಧಿ

ಸ್ಥಳೀಯ ಹನಮನಕಪ್ಪದ ಅಂಗನವಾಡಿ ಕೇಂದ್ರ 2ರಲ್ಲಿ ಏರ್ಪಡಿಸಲಾಗಿದ್ದ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ತಾಯಂದಿರಿಗೆ ಮಾಹಿತಿ ನೀಡಿದರು. ಜನಿಸಿದ ಅರ್ಧ ಗಂಟೆಯೊಳಗೆ ಮಗುವಿಗೆ ಕಡ್ಡಾಯವಾಗಿ ಎದೆ ಹಾಲು ಕುಡಿಸಬೇಕು. ಮೂರು ತಿಂಗಳವರೆಗೆ ಪ್ರತಿದಿನ ಪ್ರತಿ ಎರಡು ಗಂಟೆಗೊಮ್ಮೆ ಹಾಲುಣಿಸುವುದರಿಂದ ತಾಯಿಯ ಬೆಚ್ಚನೆಯ ಸನಿಹದಿಂದ ಮಗುವಿನ ತೂಕ ಹೆಚ್ಚಲು ಸಹಾಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಎಸ್‌.ಬಿ.ಹಕ್ಕಿ, ಅಂಗನವಾಡಿ ಕಾರ್ಯಕರ್ತೆ ಫಕ್ಕಿರವ್ವ ಜಾಧವ, ಮಲ್ಲಮ್ಮ ಮಸೂತಿ, ಆಶಾ ಕಾರ್ಯಕರ್ತೆ ರೂಪಾ ಈಸರಗೊಂಡ, ಕವಿತಾ ಕಿತ್ತೂರು, ಬಾಲ ವಿಕಾಸ ಸಮಿತಿ ಸದಸ್ಯೆ ಷಹನಾಜ್‌ ಗೋಲಂದಾಜ್‌, ಶೈನಾಜ್‌ ಉಡಕೇರಿ ಮತ್ತು ತಾಯಂದಿರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ