ಆ್ಯಪ್ನಗರ

ಬಿಆರ್‌ಟಿಎಸ್‌ ಐಟಿಎಸ್‌ಗೆ ಬಾಲಗ್ರಹ ಪೀಡೆ

​ಹುಬ್ಬಳ್ಳಿ : 22.15 ಕಿ.ಮೀ ಮಧ್ಯೆ 100 ಎಸಿ ಬಸ್‌ಗಳು ಸರಿಯಾಗಿ, ಸಮರ್ಪಕವಾಗಿ ಸಂಚರಿಸುತ್ತವೆಯೋ ಇಲ್ಲವೋ ಮತ್ತು ಸಾರಿಗೆ ವ್ಯವಸ್ಥೆಯ ಪ್ರತಿ ಚಲನವಲಗಳನ್ನು ಗಮನಿಸಲು ಮತ್ತು ಬಸ್‌ಗಳ ಮೇಲೆ ನಿಗಾ ವಹಿಸಲು ಬಿಆರ್‌ಟಿಎಸ್‌ ಕಂಪನಿಯು ಬರೋಬ್ಬರಿ 126 ಕೋಟಿ ರೂ. ಖರ್ಚು ಮಾಡುತ್ತಿದೆ !

Vijaya Karnataka 30 Oct 2019, 5:00 am
ಕಾಶಪ್ಪ ಕರದಿನ
Vijaya Karnataka Web brts attacks its
ಬಿಆರ್‌ಟಿಎಸ್‌ ಐಟಿಎಸ್‌ಗೆ ಬಾಲಗ್ರಹ ಪೀಡೆ

ಹುಬ್ಬಳ್ಳಿ : 22.15 ಕಿ.ಮೀ ಮಧ್ಯೆ 100 ಎಸಿ ಬಸ್‌ಗಳು ಸರಿಯಾಗಿ, ಸಮರ್ಪಕವಾಗಿ ಸಂಚರಿಸುತ್ತವೆಯೋ ಇಲ್ಲವೋ ಮತ್ತು ಸಾರಿಗೆ ವ್ಯವಸ್ಥೆಯ ಪ್ರತಿ ಚಲನವಲಗಳನ್ನು ಗಮನಿಸಲು ಮತ್ತು ಬಸ್‌ಗಳ ಮೇಲೆ ನಿಗಾ ವಹಿಸಲು ಬಿಆರ್‌ಟಿಎಸ್‌ ಕಂಪನಿಯು ಬರೋಬ್ಬರಿ 126 ಕೋಟಿ ರೂ. ಖರ್ಚು ಮಾಡುತ್ತಿದೆ !

ಇಂಟಲಿಜೆಂಟ್‌ ಟ್ರಾನ್ಸಪೋರ್ಟ ಸಿಸ್ಟೆಮ್‌ (ಐಟಿಎಸ್‌) ಎನ್ನುವ ತಂತ್ರಜ್ಞಾನ ಇದಾಗಿದ್ದು, ಇದು ಬಿಆರ್‌ಟಿಎಸ್‌ ಸಾರಿಗೆ ಚಟುವಟಿಕೆಗಳ ಮೇಲೆ ಗುಪ್ತಚರದಂತೆ ಕಾರ್ಯನಿರ್ವಹಿಸುತ್ತದೆ. ಈ ವ್ಯವಸ್ಥೆಯನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಂಡರೆ ಸೋರಿಕೆ ಹಾಗೂ 'ಅ'ವ್ಯವಸ್ಥೆ ಸೇರಿದಂತೆ ಹಲವು ಸಂಗತಿಗಳಿಗೆ ಕಡಿವಾಣ ಬೀಳುತ್ತದೆ. ಅಲ್ಲದೇ ಐಟಿಎಸ್‌ ತಂತ್ರಜ್ಞಾನವನ್ನು ಸಂಪೂರ್ಣ ಹೊಂದಿದಲ್ಲಿಬಿಆರ್‌ಟಿಎಸ್‌ ಸಾರಿಗೆಯ ಚಿತ್ರಣವೇ ಬದಲಾಗುತ್ತದೆ. ಆದರೆ, ಒಂದು ವರ್ಷ 20 ದಿನ ಕಳೆದರೂ ಬಿಆರ್‌ಟಿಎಸ್‌ ಇನ್ನೂವರೆಗೆ ಇದನ್ನು ಅಳವಡಿಸಿಕೊಳ್ಳಲು ಯಾಕೆ ಮುಂದಾಗುತ್ತಿಲ್ಲ, ವಿಳಂಬ ಧೋರಣೆ ಏಕೆ ? ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.

ಈ ತಂತ್ರಜ್ಞಾನ ಅಳವಡಿಸುವ ಎಂಜಿನಿಯರ್‌ಗಳಿಗೆ ಬಿಆರ್‌ಟಿಎಸ್‌ ಅಧಿಕಾರಿಗಳು ಸಹಕರಿಸುತ್ತಿಲ್ಲಎಂಬ ಆರೋಪಗಳು ಕೇಳಿಬರುತ್ತಿವೆ. ಪರಿಣಾಮ ಕಳೆದ ಆರೇಳು ತಿಂಗಳಲ್ಲಿಹಲವಾರು ಎಂಜಿನಿಯರ್‌ಗಳು ಕೆಲಸ ಬಿಟ್ಟು ಹೋಗಿದ್ದಾರೆ. ಐಟಿಎಸ್‌ ವ್ಯವಸ್ಥೆಯನ್ನು ಅತ್ಯಂತ ಶಿಸ್ತುಬದ್ಧವಾಗಿ ಜೋಡಿಸಿ, ದತ್ತಾಂಶಗಳು ಮತ್ತು ದತ್ತಾಂಶ ವಿಶ್ಲೇಷಣೆ ವರದಿ ನೀಡಿದರೂ, ಅದು ಸರಿ ಇಲ್ಲ, ಇದು ಸರಿ ಇಲ್ಲಎಂದು ಎಂದೆಲ್ಲಹೇಳುತ್ತಾ ವಿನಾಕಾರಣ ತೊಂದರೆ ನೀಡುತ್ತಿದ್ದಾರೆ ಎನ್ನುವ ಆಪಾದನೆಯೂ ಸಾಮಾನ್ಯವಾಗಿದೆ.

ಜರ್ಮನಿ, ಅಮೆರಿಕ, ಸ್ವೀಡನ್‌ ಸೇರಿ ಇತರ ಪ್ರಮುಖ ರಾಷ್ಟ್ರಗಳಲ್ಲಿಕೆಲಸ ಮಾಡಿದ ನುರಿತ ತಂತ್ರಜ್ಞರು ಕೂಡ ಐಟಿಎಸ್‌ ಜಾರಿಯಲ್ಲಿಕೆಲಸ ನಿರ್ವಹಿಸಿದ್ದಾರೆ. ಕಿರಿಕಿರಿ ತಾಳದೇ ಅವರೂ ಕೆಲಸ ಬಿಟ್ಟಿದ್ದಾರೆ. ಹೀಗಾಗಿ ಬಿಆರ್‌ಟಿಎಸ್‌ದಲ್ಲಿಐಟಿಎಸ್‌ ಮೇಲ್ನೋಟಕ್ಕೆ ಬಾಲಗ್ರಹ ಪೀಡೆಗೊಳಗಾಗಿದೆ ಎಂದು ಅಲ್ಲಿನ ಹಿರಿಯ ಅಧಿಕಾರಿಗಳೇ ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಏನಿದು ಐಟಿಎಸ್‌ ?
ಸಾರಿಗೆ ವ್ಯವಸ್ಥೆಯಲ್ಲಿಚಲನಶೀಲತೆ ಮತ್ತು ದಕ್ಷತೆ ಸುಧಾರಿಸುವುದೇ ಐಟಿಎಸ್‌ ತಂತ್ರಜ್ಞಾನ. ಸಾರಿಗೆಯಲ್ಲಿಸಂವೇದನೆ, ವಿಶ್ಲೇಷಣೆ, ನಿಯಂತ್ರಣ ಮತ್ತು ಸಂವಹನ ಅಭಿವೃದ್ಧಿಪಡಿಸುವುದು. ದಟ್ಟಣೆಯನ್ನು ಸರಾಗಗೊಳಿಸುವ, ಸಂಚಾರ ದಟ್ಟಣೆ ಸುಧಾರಣೆ, ಪರಿಸರಕ್ಕೆ ಪೂರಕವಾಗಿರಲಿದೆ. ಯಾವ ಬಸ್‌ ಎಷ್ಟು ಗಂಟೆ ಹೊರಡುತ್ತಿದೆ, ಎಲ್ಲಿದೆ, ಹೇಗೆ ಸಂಚರಿಸುತ್ತಿದೆ, ಡ್ರೈವರ್‌ನ ಚಟುವಟಿಕೆಗಳು ಹೀಗೆ ಬಸ್‌ನ ಪ್ರತಿ ಕ್ಷಣದ ಮಾಹಿತಿಗಳನ್ನು ನಿಖರವಾಗಿ ಐಟಿಎಸ್‌ ಸೆರೆ ಹಿಡಿಯುತ್ತದೆ. ಬಸ್‌ಗಳು ಎಷ್ಟು ಟ್ರಿಪ್‌ಗಳು ಸಂಚರಿಸಿದವು. ಅವರು ಕೆಲಸ ಮಾಡಿದ ಒಟ್ಟು ಅವಧಿಯನ್ನು ತಿಳಿಸುತ್ತದೆ.

ಬಸ್‌ನ ವೇಗ ಹೆಚ್ಚಿದ್ದರೆ ತಗ್ಗಿಸಲು ಮತ್ತು ಕಡಿಮೆ ಇದ್ದರೆ ಸುಧಾರಿಸಿಕೊಳ್ಳಲು ಕುಳಿತಲ್ಲೇ ಸೂಚನೆ ನೀಡಬಹುದಾಗಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ವೆಚ್ಚ ತಗ್ಗಿಸುವಲ್ಲಿಯೂ ಐಟಿಎಸ್‌ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಪ್ರಯಾಣಕರಿಗೆ ಪ್ರಯಾಣದ ಸಮಯ, ವೇಗ, ವಿಳಂಬ, ರಸ್ತೆಗಳಲ್ಲಿಅಪಘಾತಗಳು, ಮಾರ್ಗದಲ್ಲಿನ ಬದಲಾವಣೆ, ತಿರುವುಗಳು, ಕೆಲಸದ ವಲಯದ ಪರಿಸ್ಥಿತಿಗಳು ಮುಂತಾದ ನೈಜ-ಸಮಯದ ಮಾಹಿತಿಯನ್ನು ಈ ವ್ಯವಸ್ಥೆ ನೀಡುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ