ಆ್ಯಪ್ನಗರ

ಆತ್ಮವಿಶ್ವಾಸ ಬೆಳೆಸಿಕೊಳ್ಳಿ: ದಿಂಗಾಲೇಶ್ವರ ಶ್ರೀ

ಧಾರವಾಡ : ಜಗತ್ತಿನಲ್ಲಿ ಜನಿಸಿದ ಎಲ್ಲರಲ್ಲಿಯೂ ಅದ್ಭುತ ಶಕ್ತಿ ಅಡಗಿದ್ದು, ದೃೃಢಸಂಕಲ್ಪದೊಂದಿಗೆ ಗುರಿ ತಲುಪುವ ಆತ್ಮವಿಶ್ವ್ವಾಸ ಬೆಳೆಸಿಕೊಳ್ಳಬೇಕು ಎಂದು ಬಾಲೆಹೊಸೂರು ದಿಂಗಾಲೇಶ್ವರ ಮಠದ ದಿಂಗಾಲೇಶ್ವರ ಶ್ರೀ ಹೇಳಿದರು.

Vijaya Karnataka 14 May 2019, 5:00 am
ಧಾರವಾಡ : ಜಗತ್ತಿನಲ್ಲಿ ಜನಿಸಿದ ಎಲ್ಲರಲ್ಲಿಯೂ ಅದ್ಭುತ ಶಕ್ತಿ ಅಡಗಿದ್ದು, ದೃೃಢಸಂಕಲ್ಪದೊಂದಿಗೆ ಗುರಿ ತಲುಪುವ ಆತ್ಮವಿಶ್ವ್ವಾಸ ಬೆಳೆಸಿಕೊಳ್ಳಬೇಕು ಎಂದು ಬಾಲೆಹೊಸೂರು ದಿಂಗಾಲೇಶ್ವರ ಮಠದ ದಿಂಗಾಲೇಶ್ವರ ಶ್ರೀ ಹೇಳಿದರು.
Vijaya Karnataka Web build confidence dingaleshwar shri
ಆತ್ಮವಿಶ್ವಾಸ ಬೆಳೆಸಿಕೊಳ್ಳಿ: ದಿಂಗಾಲೇಶ್ವರ ಶ್ರೀ


ನಗರದ ಲಿಂಗಾಯತ ಸಭಾವನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಚನ್ನಬಸವೇಶ್ವರ ಬಸವ ಜಯಂತಿ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಉಪನ್ಯಾಸ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಮನುಷ್ಯ ತನ್ನ ಬಾಹ್ಯ ಸೌಂದರ್ಯವನ್ನು ತೋರಿಸದೇ ಅಂತರಂಗದ ಸಾಧನೆಯ ಮೂಲಕ ಸೌಂದರ್ಯವನ್ನು ಜಗತ್ತಿಗೆ ತೋರಿಸಬೇಕು. ಆತ್ಮವಿಶ್ವಾಸವಿದ್ದರೆ ಮತ್ತು ಸಾಧಿಸುವ ಛಲ ಹಾಗೂ ಸದೃಢ ಸಂಕಲ್ಪಗಳು ಮಾತ್ರ ನಮ್ಮ ಸಾಧನೆಗೆ ಸಹಾಯಕವಾಗುತ್ತವೆ. ಪ್ರಸ್ತುತ ಸಾಧನೆಯಲ್ಲಿ ತೊಡಗುವವರಿಗೆ ಸಹಕಾರ ನೀಡುವ ಬದಲು ಅಡ್ಡಿಪಡಿಸವರೇ ಹೆಚ್ಚು. ಮತ್ತೊಬ್ಬರಿಗೆ ಸಾಧ್ಯವಾದರೆ ಸಹಾಯ ಮಾಡಿ, ಇಲ್ಲದಿದ್ದರೆ ಸುಮ್ಮನಿರಿ. ಆದರೆ ತೊಂದರೆ, ಕೇಡು ಮಾಡಲು ಹೋಗಬೇಡಿ ಎಂದು ಸಲಹೆ ನೀಡಿದರು.

ಇದೇ ವೇಳೆ ಐಎಎಸ್‌ನಲ್ಲಿ 17ನೇ ಸ್ಥಾನ ಪಡೆದ ರಾಹುಲ್‌ ಸಂಕನೂರ, ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ಸ್ಥಾನ ಪಡೆದ ಪರಿಣಿತಾ ಹಿರೇಮಠ, ಶ್ರಾವಣಿ ಹಿರೇಮಠ, ಮೇಘಾ ಪರಪ್ಪಗೌಡರ ಹಾಗೂ ಪಿಯುಸಿಯಲ್ಲಿ ಸಾಧನೆ ಮಾಡಿದ ಲಾವಣ್ಯ ಕುಸುಗಲ್ಲ, ಆದರ್ಶ ಕೂಬಿಹಾಳ, ಈರಣ್ಣ ಅಕ್ಕೂರ, ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ರಾಚಪ್ಪ ಬಿ.ತಿರ್ಲಾಪೂರ, ಡಿವಾಯ್‌ಎಸ್ಪಿ ಪ್ರಿಯದರ್ಶಿನಿ ಸಾಣಿಕೊಪ್ಪ, ಪಿಎಚ್‌ಡಿ ಪದವಿ ಪಡೆದ ಡಾ.ಸಂಗಯ್ಯ ಸರಗಣಾಚಾರಿ ಅವರನ್ನು ಸನ್ಮಾನಿಸಲಾಯಿತು. ಅಲ್ಲದೇ ಕವಿವಿ ಬಸವ ಅಧ್ಯಯನ ಪೀಠದ ಸಂಯೋಜಕ ಡಾ.ಸಿ.ಎಂ.ಕುಂದಗೋಳ ಉಪನ್ಯಾಸ ನೀಡಿದರು.

ಜಿಲ್ಲಾ ಘಟಕದ ಅಧ್ಯಕ್ಷ ಗುರುರಾಜ ಹುಣಸಿಮರದ ಅಧ್ಯಕ್ಷ ತೆ ವಹಿಸಿದ್ದರು. ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ, ತಹಸೀಲ್ದಾರ್‌ ಪ್ರಕಾಶ ಕುದರಿ, ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್‌.ಎಚ್‌.ಮಿಟ್ಟಲಕೋಡ ಸೇರಿದಂತೆ ಇತರರು ಇದ್ದರು. ಸಿಂಚು ಹುಣಸಿಮರದ ಪ್ರಾರ್ಥಿಸಿದರು. ಶಿವಶರಣ ಕಲಬಶೆಟ್ಟರ ಸ್ವಾಗತಿಸಿದರು. ಬಸನಗೌಡ ಪಾಟೀಲ ಪ್ರಾಸ್ತಾವಿಸಿದರು. ಸಿದ್ದಪ್ಪ ಕಂಬಾರ ನಿರೂಪಿಸಿದರು. ಶಿವಾನಂದ ಕವಳಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ