ಆ್ಯಪ್ನಗರ

ಬಂಟರು ಎಂಟೆದೆಯ ವೀರರು

ಹುಬ್ಬಳ್ಳಿ: ಇಲ್ಲಿನ ನೆಹರು ಮೈದಾನದಲ್ಲಿಬುಧವಾರ ಹುಬ್ಬಳ್ಳಿ-ಧಾರವಾಡ ಬಂಟರ್‌ ಸಂಘದ ವಾರ್ಷಿಕ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಿತು. ದೀಪ ಬೆಳಗಿ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು, ಬಂಟ ಸಮುದಾಯ ಸಮಾಜದ ದೊಡ್ಡ ಶಕ್ತಿಯಾಗಿದೆ.

Vijaya Karnataka 16 Jan 2020, 5:00 am
ಹುಬ್ಬಳ್ಳಿ: ಇಲ್ಲಿನ ನೆಹರು ಮೈದಾನದಲ್ಲಿಬುಧವಾರ ಹುಬ್ಬಳ್ಳಿ-ಧಾರವಾಡ ಬಂಟರ್‌ ಸಂಘದ ವಾರ್ಷಿಕ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಿತು.
Vijaya Karnataka Web bunters are heroes of enteti
ಬಂಟರು ಎಂಟೆದೆಯ ವೀರರು

ದೀಪ ಬೆಳಗಿ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು, ಬಂಟ ಸಮುದಾಯ ಸಮಾಜದ ದೊಡ್ಡ ಶಕ್ತಿಯಾಗಿದೆ. ಉದ್ಯಮ ಲೋಕದಲ್ಲಿತಮ್ಮದೇ ಆದ ವಿಶಿಷ್ಟ ಹೆಸರು ಗಳಿಸಿದೆ. ಬಂಟರು ಎಂಟದೆಯೇ ವೀರರು ಎಂದು ಬಣ್ಣಿಸಿದರು.

ತಮ್ಮ ನಿತ್ಯದ ಕೆಲಸ ಕಾರ್ಯಗಳ ಒತ್ತಡದಿಂದ ಹೊರ ಬರಲು ಕ್ರೀಡಾಕೂಟಗಳು ಸಹಕಾರಿಯಾಗಿವೆ. ಕ್ರೀಡಾಕೂಟ ಇದ್ದಾಗ ಮಾತ್ರ ಕ್ರೀಡೆಯಲ್ಲಿಪಾಲ್ಗೊಳ್ಳದೇ ನಿತ್ಯವೂ ಕ್ರೀಡಾ ಚಟುವಟಿಕೆಗಳಲ್ಲಿಭಾಗವಹಿಸುವ ಮೂಲಕ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ಹೇಳಿದರು.

ಇದೇ ಸಂದರ್ಭದಲ್ಲಿಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಕ್ರೀಡಾಪಟುವಿಗೆ ಕ್ರೀಡಾಜ್ಯೋತಿ ನೀಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿಬಂಟ ಸಮಾಜದ ಅಧ್ಯಕ್ಷ ದಿನೇಶ ಶೆಟ್ಟಿ ಸುಗ್ಗಿ, ಸುಧಾಕರ ಶೆಟ್ಟಿ, ಅಭಿಮಾನ್‌ ಸತೀಶ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರು, ಕ್ರೀಡಾ ಸಮಿತಿ ಸದಸ್ಯರು ಅಲ್ಲದೇ ಬಂಟ ಸಮುದಾಯದ ನೂರಾರು ಜನರು ಹಾಜರಿದ್ದರು. ನಂತರ ನೆಹರು ಮೈದಾನದಲ್ಲಿದಿನವೀಡಿ ವಿವಿಧ ಕ್ರೀಡೆಗಳು ಜರುಗಿದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ