ಆ್ಯಪ್ನಗರ

ಹುಬ್ಬಳ್ಳಿ: ಕ್ವಾರಂಟೈನ್‌ ಸೌಲಭ್ಯಕ್ಕೆ ಹೋಟೆಲ್ ರೂಮ್‌ ಒದಗಿಸಿದ ಉದ್ಯಮಿ

ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಕ್ವಾರಂಟೈನ್‌ ಸೌಲಭ್ಯಕ್ಕೆ ಹೊಟೇಲ್ ಉದ್ಯಮಿಯೊಬ್ಬರು 46 ಕೊಠಡಿಗಳು ಊಟ ಮತ್ತು ಉಪಹಾರವನ್ನು ಸ್ವಯಂ ಪ್ರೇರಣೆಯಿಂದ ಒದಗಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

Vijaya Karnataka Web 25 Mar 2020, 9:51 am
Vijaya Karnataka Web quarantine
Sanaa, Yemen March 2, 2020. REUTERS/Khaled Abdullah
ಹುಬ್ಬಳ್ಳಿ: ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಕ್ವಾರಂಟೈನ್‌ ಸೌಲಭ್ಯಕ್ಕೆ ಇಲ್ಲಿನ ಕೊಪ್ಪೀಕರ್‌ ರಸ್ತೆಯಲ್ಲಿರುವ ಮೆಟ್ರೊ ಪೊಲೀಸ್‌ ಹೋಟೆಲ್‌ ಒಂದು ಭಾಗದ 46 ಕೊಠಡಿಗಳು ಊಟ ಮತ್ತು ಉಪಹಾರವನ್ನು ಸ್ವಯಂ ಪ್ರೇರಣೆಯಿಂದ ಒದಗಿಸುವುದಾಗಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಶ್ರಫ್‌ ಅಲಿ ಬಶೀರ್‌ ಅಹ್ಮದ್‌ ಅವರು ಜಿಲ್ಲಾಧಿಕಾರಿ ದೀಪಾ ಚೋಳನ್‌ ಅವರಿಗೆ ಪತ್ರ ಹಸ್ತಾಂತರಿಸಿದರು.

ಹೋಟೆಲಿನ ಕೊಠಡಿಗಳನ್ನು ಪರಿಶೀಲಿಸಲು ಅಧಿಕಾರಿಗಳನ್ನು ಕಳಿಸಬಹುದು. ಮೆಟ್ರೊ ಪೊಲೀಸ್‌ ಸಮೂಹವು ಮುಂಬಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತ ಮುತ್ತಲಿನ 70 ಹೋಟೆಲ್‌ ಕೊಠಡಿಗಳನ್ನು ಅಲ್ಲಿನ ಸರಕಾರಕ್ಕೆ ಕ್ವಾರಂಟೈನ್‌ ಸೌಲಭ್ಯಕ್ಕಾಗಿ ನೀಡಿದೆ. ಸಂಸ್ಥೆಯ ಸಿಎಸ್‌ಆರ್‌ ಚಟುವಟಿಕೆಗಳಡಿ ಈ ಕಾರ್ಯ ಕೈಗೊಳ್ಳಲಾಗಿದೆ ಎಂದು ಅಶ್ರಫ್‌ ಅಲಿ ತಿಳಿಸಿದರು.

ಹೋಟೆಲ್‌ ಉದ್ಯಮಿಗಳು ಸ್ವಯಂ ಪ್ರೇರಣೆಯಿಂದ ಕ್ವಾರಂಟೈನ್‌ ಸೌಲಭ್ಯಕ್ಕೆ ಕೊಠಡಿಗಳನ್ನು ನೀಡುತ್ತಿರುವುದು ಮಾದರಿ ಕಾರ್ಯವಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ