ಆ್ಯಪ್ನಗರ

ತಂದೆಯ ಅಗಲಿಕೆ ನೋವಿನಲ್ಲೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಶಿವಳ್ಳಿ ಪುತ್ರಿ

Vijaya Karnataka Web 23 Mar 2019, 12:20 pm
ಹುಬ್ಬಳ್ಳಿ: ತಂದೆಯ ಅಗಲಿಕೆಯ ನೋವಿನಲ್ಲೂ ಪೌರಾಡಳಿತ ಸಚಿವ ಸಿ‌ ಎಸ್ ಶಿವಳ್ಖಿಯವರ ದ್ವಿತಿಯ ಪುತ್ರಿ ಎಸ್ ಎಸ್ ಎಲ್ ಸಿ‌ ಪರೀಕ್ಷೆ ಬರೆದಿದ್ದಾರೆ.
Vijaya Karnataka Web SSLC Exam


ಸಿ ಎಸ್ ಶಿವಳ್ಳಿ ಅವರ ಎರಡನೇ ಪುತ್ರಿ ರೂಪಾ ಅವರು ಹುಬ್ಬಳ್ಳಿಯ ಮಂಜುನಾಥ ನಗರದಲ್ಲಿ ಇರುವ ಕೆ ಎಲ್ ಈ ಕಾಲೇಜ್ ನಲ್ಲಿ 10 ನೇ ತರಗತಿಯ ಓದುತ್ತಿದ್ದಾರೆ.
ಹುಬ್ಬಳ್ಳಿಯ ಸೆಂಟ್ ಆಂಟೋನಿ ಶಾಲೆಯಲ್ಲಿ ಹತ್ತನೇ ತರಗತಿಯ ಸಿ ಬಿ ಎಸ್ ಇ ಇಂಗ್ಲೀಷ್ ಪರೀಕ್ಷೆ ಗೆ ಹಾಜರಾಗಿದ್ದಾರೆ. ತಂದೆಯ ಅಗಲಿಕೆಯ ನಡುವೇ ಅಳುತ್ತಲೇ ಸೇಂಟ್ ಅಂಥೋನಿಸ್ ಪಬ್ಲಿಕ್ ಸ್ಕೂಲ್ ನಲ್ಲಿ ರೂಪಾ ಅವರು ಪರೀಕ್ಷೆ ಬರೆಯುತ್ತಿದ್ದಾರೆ.

ಪ್ರಸ್ತುತವಾಗಿ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯುತ್ತಿರುವ ಪರೀಕ್ಷಾ ಕೇಂದ್ರಗಳು ಹಾಗೂ ಪರೀಕ್ಷಾ ಕಾರ್ಯಗಳನ್ನು ನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿ ಹೊರತುಪಡಿಸಿ ಜಿಲ್ಲೆಯ ಎಲ್ಲ ಸರಕಾರಿ ಕಚೇರಿಗಳಿಗೂ ಮತ್ತು ಎಲ್ಲ ಶಾಲಾ ಕಾಲೇಜುಗಳಿಗೂ (ಅನುದಾನ ಪಡೆಯುವ ಎಲ್ಲ ವಿದ್ಯಾಸಂಸ್ಥೆಗಳು ಸೇರಿದಂತೆ) ಮಾ.23 ರಂದು ರಜೆ ಘೋಷಿಸಿದೆ. ರಜೆಯನ್ನು ನೆಗೋಷಿಯೇಬಲ್‌ ಇನ್ಸಸ್ಟ್ರೂಮೆಂಟ್‌ ಆಕ್ಟ್ 1881ರ ಪ್ರಕಾರವೂ ಸಹ ಸಾರ್ವಜನಿಕ ರಜೆ ಎಂದು ಘೋಷಿಸಲಾಗಿದೆ.

ಮೃತರ ಅಂತ್ಯಕ್ರಿಯೆಯನ್ನು ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿಸುವಂತೆ ಸರಕಾರದ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ (ರಾಜ್ಯ ಶಿಷ್ಟಾಚಾರ) ಅಧೀನ ಕಾರ್ಯದರ್ಶಿಗಳು ಅಧಿಸೂಚನೆ ಹೊರಡಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ