ಆ್ಯಪ್ನಗರ

ಕಾನೂನು ಸೇವೆ ಸದ್ಬಳಕೆಗೆ ಕರೆ

ಧಾರವಾಡ : ಗ್ರಾಮೀಣ ಭಾಗದ ಜನರ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಸುಲಭ ರೀತಿಯಲ್ಲಿ ಜನ ಸಾಮಾನ್ಯರ ಮನೆ ಬಾಗಿಲಿಗೆ ಕಾನೂನು ಸಾಕ್ಷರತಾ ರಥ ಪ್ರಚಾರಾಂದೋಲನ ಜರುಗಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿ. ಶ್ರೀಶಾನಂದ ಹೇಳಿದರು.

ವಿಕ ಸುದ್ದಿಲೋಕ 27 Mar 2016, 4:00 am
ಧಾರವಾಡ : ಗ್ರಾಮೀಣ ಭಾಗದ ಜನರ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಸುಲಭ ರೀತಿಯಲ್ಲಿ ಜನ ಸಾಮಾನ್ಯರ ಮನೆ ಬಾಗಿಲಿಗೆ ಕಾನೂನು ಸಾಕ್ಷರತಾ ರಥ ಪ್ರಚಾರಾಂದೋಲನ ಜರುಗಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿ. ಶ್ರೀಶಾನಂದ ಹೇಳಿದರು.
Vijaya Karnataka Web call the legal service sadbalakege
ಕಾನೂನು ಸೇವೆ ಸದ್ಬಳಕೆಗೆ ಕರೆ


ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಶನಿವಾರ ನಡೆದ ಕಾನೂನು ಸಾಕ್ಷರತಾ ರಥ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಧಾರವಾಡ ಜಿಲ್ಲೆಯಲ್ಲಿ ಶನಿವಾರದಿಂದ 15 ದಿನಗಳವರೆಗೆ ಕಾನೂನು ಸಾಕ್ಷರತಾ ರಥ ಯಾತ್ರೆಯ ಅಂಗವಾಗಿ ಅರಿವು ಜಾಗತಿ ಕಾರ್ಯಕ್ರಮ ಜರುಗಲಿದೆ. ಧಾರವಾಡದಲ್ಲಿ 3 ದಿನ, ಹುಬ್ಬಳ್ಳಿಯಲ್ಲಿ 3 ದಿನ, ಕಲಘಟಗಿಯಲ್ಲಿ 3 ದಿನ, ಕುಂದಗೋಳದಲ್ಲಿ 3 ದಿನ, ನವಲಗುಂದದಲ್ಲಿ 3 ದಿನ ಕಾರ್ಯಕ್ರಮಗಳು ಜರುಗಲಿವೆ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವದ್ಧಿ ಇಲಾಖೆ, ಆರೋಗ್ಯ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ನೆಮ್ಮದಿ ಹಾಗೂ ಶಾಂತಿ ನೆಲಸಿದ್ದರೆ ಅಭಿವದ್ಧಿ ತನ್ನಿಂದ ತಾನೆ ಅಭಿವದ್ಧಿ ಹೊಂದುತ್ತದೆ. ಗ್ರಾಮೀಣ ಭಾಗದ ಜನ ಸಾಮಾನ್ಯರು , ಕಕ್ಷಿದಾರರು ತಮ್ಮ ಅನುಮಾನ, ಸಂಶಯಗಳನ್ನು ಹಾಗೂ ಕಾನೂನು ಸಲಹೆಗಳಿಗಾಗಿ ತಮ್ಮ ಊರಿಗೆ ಬಂದ ಕಾನೂನು ರಥ ಯಾತ್ರೆಯ ಉಚಿತ ಸೌಲಭ್ಯ ಪಡೆದುಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಅಭಿಪ್ರಾಯ ಪಟ್ಟರು.

ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾದ ಪಾಂಡುರಂಗ ಎಚ್. ರಾಣೆ, ಜಿಲ್ಲಾಧಿಕಾರಿ ಪಿ.ರಾಜೇಂದ್ರ ಚೋಳನ್, ವಕೀಲ ಸಂಘದ ಅಧ್ಯಕ್ಷ ವಿ.ಡಿ. ಕಾಮರೆಡ್ಡಿ, ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರಾದ ಬಿ.ಎಸ್. ಸಂಗಟಿ, ಪ್ರಫುಲ್ಲಾ ಎಸ್. ನಾಯ್ಕ, ವಕೀಲರಾದ ವೆಂಕಟೇಶ ಕುಲಕರ್ಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ ಮೀನಾ, ಎಸ್.ಎನ್. ಹೆಗಡೆ ಸೇರಿದಂತೆ ಮತ್ತಿತರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ