ಆ್ಯಪ್ನಗರ

ಕೌಶಲ ಇದ್ದವರಿಗೆ ಉದ್ಯೋಗಾವಕಾಶ ಹೆಚ್ಚು

ಹುಬ್ಬಳ್ಳಿ : ಉದ್ಯೋಗಾಕಾಂಕ್ಷಿಗಳು ತಮ್ಮ ನೈಪುಣ್ಯತೆ ಮತ್ತು ಕ್ರಿಯಾಶೀಲತೆ ಆಧಾರದ ಮೇಲೆ ಉದ್ಯೋಗ ಆಯ್ಕೆ ಮಾಡಿಕೊಳ್ಳಬೇಕು ಎಂದು ಐಬಿಎಂಆರ್‌ ಕಾಲೇಜಿನ ಸಮೂಹ ಶಿಕ್ಷ ಣ ಸಂಸ್ಥೆಗಳ ಅಧ್ಯಕ್ಷ ವಿನಯಚಂದ್ರ ಮಹೇಂದ್ರಕರ ಹೇಳಿದರು.

Vijaya Karnataka 17 Jul 2019, 5:00 am
ಹುಬ್ಬಳ್ಳಿ : ಉದ್ಯೋಗಾಕಾಂಕ್ಷಿಗಳು ತಮ್ಮ ನೈಪುಣ್ಯತೆ ಮತ್ತು ಕ್ರಿಯಾಶೀಲತೆ ಆಧಾರದ ಮೇಲೆ ಉದ್ಯೋಗ ಆಯ್ಕೆ ಮಾಡಿಕೊಳ್ಳಬೇಕು ಎಂದು ಐಬಿಎಂಆರ್‌ ಕಾಲೇಜಿನ ಸಮೂಹ ಶಿಕ್ಷ ಣ ಸಂಸ್ಥೆಗಳ ಅಧ್ಯಕ್ಷ ವಿನಯಚಂದ್ರ ಮಹೇಂದ್ರಕರ ಹೇಳಿದರು.
Vijaya Karnataka Web careers are high for the skilled
ಕೌಶಲ ಇದ್ದವರಿಗೆ ಉದ್ಯೋಗಾವಕಾಶ ಹೆಚ್ಚು


ನಗರದ ಐಬಿಎಂಆರ್‌ ಮಹಾವಿದ್ಯಾಲಯದಲ್ಲಿ ಐಬಿಎಂಆರ್‌ ಮಹಾವಿದ್ಯಾಲಯ ಹಾಗೂ ಆಕ್ಷ್‌ಫರ್ಡ್‌ ಪಾಲಿಟೆಕ್ನಿಕ ಮತ್ತು ಕನೆಕ್ಟ ಸಂಯುಕ್ತಾಶ್ರಯದಲ್ಲಿ ನಡೆದ ಪ್ರಗತಿ ಬೃಹತ್‌ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲ ಕ್ಷೇತ್ರದಲ್ಲಿಯೂ ಸ್ಪರ್ಧೆ ಅನಿವಾರ್ಯವಾಗಿದೆ. ಅರ್ಹತೆ ಮತ್ತು ವೃತ್ತಿ ಕೌಶಲ ಇರುವವರಿಗೆ ಉತ್ತಮ ನೌಕರಿ ಲಭಿಸುತ್ತದೆ. ಈ ಮೇಳದಲ್ಲಿ 50ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದು, 1800 ಜನರಿಗೆ ಉದ್ಯೋಗ ದೊರೆತಿದೆ ಎಂದು ತಿಳಿಸಿದರು.

ಕಾಲೇಜಿನ ನಿರ್ದೇಶಕ ರಿಯಾಜ ಬಸರಿ ಮಾತನಾಡಿ, ಉದ್ಯೋಗ ಮೇಳದಲ್ಲಿ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿರುವುದು ಹೆಮ್ಮೆಯ ಸಂಗತಿ ಎಂದರು.

ಪ್ರಾಚಾರ್ಯ ಪ್ರೊ. ಆರೋಗ್ಯಸ್ವಾಮಿ, ಪ್ರೊ. ಶ್ವೇತಾ ಮರಿಗೌಡರ, ಡಾ. ವಿಕ್ರಮ ಕುಲಕರ್ಣಿ, ಪ್ರೊ. ನಜೀಮ್‌, ಉದೋಗಾಧಿಕಾರಿ ಆಕಾಶ ಪಾಠಕ, ಕನೆಕ್ಸ್‌ನ ಗಿರೀಶ ಅಂಗಡಿ ಇದ್ದರು. ಡಾ. ಚಿದಾನಂದ ಬಡಿಗೇರ ಸ್ವಾಗತಿಸಿದರು. ಡಾ. ಸದಾನಂದ ಹಾವಣಗಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ