ಆ್ಯಪ್ನಗರ

ಮತ್ತೆ 49 ರೌಡಿಗಳ ವಿರುದ್ಧ ಕೇಸ್‌

ಹುಬ್ಬಳ್ಳಿ: ಹು-ಧಾ ಅವಳಿನಗರದಲ್ಲಿನಿರಂತರವಾಗಿ ನಡೆದ ಅಪರಾಧ ಕೃತ್ಯಕ್ಕೆ ಪ್ರತಿಕಾರ ಎಂಬಂತೆ ರೌಡಿಶೀಟರ್‌ಗಳ ನಿವಾಸಗಳ ಮೇಲೆ ಪೊಲೀಸರ ದಾಳಿ ಶುಕ್ರವಾರವೂ ಮುಂದುವರಿಯಿತು.

Vijaya Karnataka 28 Sep 2019, 5:00 am
ಹುಬ್ಬಳ್ಳಿ: ಹು-ಧಾ ಅವಳಿನಗರದಲ್ಲಿನಿರಂತರವಾಗಿ ನಡೆದ ಅಪರಾಧ ಕೃತ್ಯಕ್ಕೆ ಪ್ರತಿಕಾರ ಎಂಬಂತೆ ರೌಡಿಶೀಟರ್‌ಗಳ ನಿವಾಸಗಳ ಮೇಲೆ ಪೊಲೀಸರ ದಾಳಿ ಶುಕ್ರವಾರವೂ ಮುಂದುವರಿಯಿತು.
Vijaya Karnataka Web case against 49 rowdies
ಮತ್ತೆ 49 ರೌಡಿಗಳ ವಿರುದ್ಧ ಕೇಸ್‌


ಪೊಲೀಸ್‌ ಆಯುಕ್ತ ಆರ್‌. ದಿಲೀಪ್‌ ಮಾರ್ಗದರ್ಶನದಲ್ಲಿಡಿಸಿಪಿ ಡಿ.ಎಲ್‌. ನಾಗೇಶ, ಡಾ. ಶಿವಕುಮಾರ ಗುಣಾರೆ, ಎಸಿಪಿ ಎಸ್‌.ಎಂ. ಸಂದಿಗವಾಡ ನೇತೃತ್ವದ ತಂಡ ಶುಕ್ರವಾರ ಬೆಳ್ಳಂಬೆಳಗ್ಗೆ ರೌಡಿಶೀಟರ್‌ ಮನೆಗಳ ಮೇಲೆ ದಾಳಿ ನಡೆಸಿದರು. ನಗರದ 103 ರೌಡಿಶೀಟರ್‌ ನಿವಾಸಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಿದ ಪೊಲೀಸರು, ಒಟ್ಟು 49 ರೌಡಿ ಜನರ ಮೇಲೆ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅದರಂತೆ ಧಾರಾಡ ಉಪವಿಭಾಗದ ಪೊಲೀಸ್‌ ಠಾಣೆಗಳ ವ್ಯಾಪ್ತಿ ಡಿಸಿಪಿ ಡಾ. ಶಿವಕುಮಾರ ಗುಣಾರೆ ನೇತೃತ್ವದಲ್ಲಿಎಸಿಪಿ ರುದ್ರಪ್ಪ ಲಮಾಣಿ ಮತ್ತವರ ತಂಡ ಕಾರ್ಯಾಚರಣೆ ನಡೆಸಿತು. ಒಟ್ಟು 13 ಜನರ ರೌಡಿಶೀಟರ್‌ ಮನೆಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ