ಆ್ಯಪ್ನಗರ

ಮಂಗಳೂರು ಬಾಂಬ್: ಪೊಲೀಸರ ಮೇಲೇ ಅನುಮಾನ ಎಂದ ಎಚ್ಡಿಕೆಗೆ ಪ್ರಹ್ಲಾದ್ ಜೋಶಿ ಚಾಟಿ

'ಕುಮಾರಸ್ವಾಮಿಯವರ ಈ ರೀತಿಯ ಹೇಳಿಕೆ ಪಾಕ್‌ಗೆ ಸಹಕಾರಿ ಆಗುತ್ತದೆ. ಅವರು ಕೂಡಲೇ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಕುಮಾರಸ್ವಾಮಿ ಪಾಕ್‌ ಪರವಾಗಿದ್ದಾರೆ ಎಂದು ತಿಳಿಯಬೇಕಾಗುತ್ತದೆ’ - ಪ್ರಹ್ಲಾದ್ ಜೋಶಿ

Vijaya Karnataka Web 21 Jan 2020, 5:55 pm
ಹುಬ್ಬಳ್ಳಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಪತ್ತೆಯಾದ ಪ್ರಕರಣದಲ್ಲಿ ಪೊಲೀಸರ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆ ಬೇಜವಾಬ್ದಾರಿಯ ಪರಮಾವಧಿ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.
Vijaya Karnataka Web prahlad joshi and hdk
ಮಂಗಳೂರು ಬಾಂಬ್: ಪೊಲೀಸರ ಮೇಲೇ ಅನುಮಾನ ಎಂದ ಎಚ್ಡಿಕೆಗೆ ಪ್ರಹ್ಲಾದ್ ಜೋಶಿ ಚಾಟಿ


ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕುಮಾರಸ್ವಾಮಿ ಅವರಿಗೆ ಯಾರು ಬಾಂಬ್‌ ಇಟ್ಟಿದ್ದಾರೆ ಎಂಬುದು ಗೊತ್ತಿದ್ದರೆ ಕೂಡಲೇ ದೂರು ದಾಖಲಿಸಲಿ. ಅದನ್ನು ಬಿಟ್ಟು ಪೊಲೀಸರು, ಮತ್ತೊಬ್ಬರ ಮೇಲೆ ಸುಳ್ಳು ಆರೋಪ ಮಾಡುವುದು ಸರಿಯಲ್ಲ. ಯಾರು ತಪ್ಪು ಮಾಡಿದ್ದಾರೆಯೋ ಅವರ ಮೇಲೆ ಖಂಡಿತ ಕ್ರಮ ಆಗಿಯೇ ಆಗುತ್ತದೆ. ಆದರೆ ಯಾರೋ ಪೊಲೀಸರು ಬಾಂಬ್‌ ಇಟ್ಟಿರಬೇಕು ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಖಂಡನೀಯ’’ ಎಂದರು.

‘ಇಡೀ ಜಗತ್ತಿನಲ್ಲಿ ಪಾಕಿಸ್ತಾನವನ್ನು ನಾವು ಏಕಾಂಗಿ ಮಾಡಲು ಹೊರಟಿದ್ದೇವೆ. ಅದಕ್ಕಾಗಿ ಜಾಗತಿಕ ವೇದಿಕೆಯೂ ನಿರ್ಮಾಣವಾಗಿದೆ. ಕುಮಾರಸ್ವಾಮಿಯವರ ಈ ರೀತಿಯ ಹೇಳಿಕೆ ಪಾಕ್‌ಗೆ ಸಹಕಾರಿ ಆಗುತ್ತದೆ. ಅವರು ಕೂಡಲೇ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಕುಮಾರಸ್ವಾಮಿ ಪಾಕ್‌ ಪರವಾಗಿದ್ದಾರೆ ಎಂದು ತಿಳಿಯಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಮಂಗಳೂರಿನಲ್ಲಿ ಸಿಕ್ಕಿದ್ದು ಸಜೀವ ಬಾಂಬ್‌ ಅಲ್ಲ ! ಪಟಾಕಿ ಪೌಡರ್ - ಎಚ್‌ಡಿಕೆ ‘ಸ್ಫೋಟಕ ’ ಹೇಳಿಕೆ

ದೇಶ ವಿರೋಧಿಗಳು: ‘ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಪತ್ತೆಯಾಗಿರುವುದು ಆತಂಕಕಾರಿ ವಿಷಯವಾಗಿದೆ. ಈ ಕುರಿತು ಸಮಗ್ರ ತನಿಖೆ ನಡೆಯುತ್ತಿದ್ದು, ಪ್ರಕರಣದಲ್ಲಿ ಭಾಗಿಯಾದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಸಚಿವ ಜೋಶಿ ತಿಳಿಸಿದರು.

‘ಬಾಂಬ್‌ ಪ್ರಕರಣದಲ್ಲಿ ಭಾಗಿಯಾದವರು ದೇಶ ವಿರೋಧಿಗಳೇ ಆಗಿದ್ದಾರೆ. ದೇಶದಲ್ಲಿಅಭದ್ರತೆ ಸೃಷ್ಟಿಸಲು ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಗಲಭೆಯಲ್ಲಿಯೂ ಅವರು ಪ್ರಯತ್ನಿಸಿದ್ದರು’ ಎಂದು ಆರೋಪಿಸಿದರು.

‘ಮಂಗಳೂರು ಗಲಭೆಯಲ್ಲಿ ಪಾಲ್ಗೊಂಡವರ ಪ್ರೇರಣೆಯಿಂದಲೇ ಇದು ಆಗಿರುವ ಸಾಧ್ಯತೆಯಿದೆ. ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಬೇಕು. ರಾಜ್ಯದ ಎಲ್ಲಾ ವಿಮಾನ ಹಾಗೂ ರೈಲ್ವೆ ನಿಲ್ದಾಣಗಳಿಗೆ ಸೂಕ್ತ ಭದ್ರತೆ ನೀಡಬೇಕು’ ಎಂದು ಜೋಶಿ ಸಲಹೆ ನೀಡಿದರು.

ಪೊಲೀಸರ ಮೇಲೆ ಎಚ್‌ಡಿಕೆ ಶಂಕೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ