ಆ್ಯಪ್ನಗರ

ಚುನಾವಣೆ ಬಳಿಕ ಖಂಡಿತ ರಾಜ್ಯದಲ್ಲಿ ಬದಲಾವಣೆ: ಸಚಿವ ಪ್ರಹ್ಲಾದ್‌ ಜೋಶಿ

ವಿಜಯಪುರ ಶಾಸಕ ಬಸನಗಗೌಡ ಪಾಟೀಲ, ಸಚಿವ ರಮೇಶ ಜಾರಕಿಹೊಳಿ ಹೇಳಿಕೆಗಳು, ಬಿಹಾರ ಚುನಾವಣೆ ಬಳಿಕ ಬದಲಾವಣೆಗಳಾಗಲಿವೆಯೇ ಕುರಿತು ಮಾಧ್ಯಮದವರು ಸುದ್ದಿಗೋಷ್ಠಿಯಲ್ಲಿ ಸೋಮವಾರ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರತಿಕ್ರಿಯೆ ನೀಡಿದ್ದು ಕೆಲವೊಂದು ಸಂಗತಿಗಳ ಬಗ್ಗೆ ಮಾರ್ಮಿಕವಾಗಿ ನುಡಿದಿದ್ದಾರೆ.

Vijaya Karnataka Web 26 Oct 2020, 3:46 pm
ಹುಬ್ಬಳ್ಳಿ: ಬಿಹಾರ ಚುನಾವಣೆ ಬಳಿಕ ಖಂಡಿತವಾಗಿಯೂ ಬದಲಾವಣೆಯಾಗಲಿದೆ. ಅದು ರಾಜಕೀಯವಾಗಿ ಅಲ್ಲ, ಅಭಿವೃದ್ಧಿಯಲ್ಲಿ ಕಾಣುತ್ತೇವೆ. ಅಷ್ಟೇ ಅಲ್ಲದೇ ರಾಜ್ಯದಲ್ಲಿ ನಡೆಯುತ್ತಿರುವ ಪರಿಷತ್ ಹಾಗೂ ವಿಧಾನಸಭೆ 2 ಕ್ಷೇತ್ರಗಳ ಉಪಚುನಾವಣೆಗಳು ಮಹತ್ವದ್ದಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾರ್ಮಿಕವಾಗಿ ಹೇಳಿದ್ದಾರೆ.
Vijaya Karnataka Web Prahlad-Joshi


ವಿಜಯಪುರ ಶಾಸಕ ಬಸನಗಗೌಡ ಪಾಟೀಲ, ಸಚಿವ ರಮೇಶ ಜಾರಕಿಹೊಳಿ ಹೇಳಿಕೆಗಳು, ಬಿಹಾರ ಚುನಾವಣೆ ಬಳಿಕ ಬದಲಾವಣೆಗಳಾಗಲಿವೆಯೇ ಕುರಿತು ಮಾಧ್ಯಮದವರು ಸುದ್ದಿಗೋಷ್ಠಿಯಲ್ಲಿ ಸೋಮವಾರ ಈ ರೀತಿ ಪ್ರತಿಕ್ರಿಯೆ ನೀಡಿದರು. ಸಿಎಂ ಬದಲಾವಣೆ ವಿಚಾರ ರಾಷ್ಟ್ರೀಯ ನಾಯಕರ ಮುಂದೆ ಇಲ್ಲ. ಯಡಿಯೂರಪ್ಪನವರು ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಹೇಳಿದರು. ಎಷ್ಟು ವರ್ಷ ಎಂಬ ಪ್ರಶ್ನೆಗೆ, ಜೋಶಿಯವರು, ಗಲಿಬಿಲಿಗೊಳಗಾಗಿ ನೇರವಾಗಿ ಉತ್ತರಿಸದೇ ಈ ವಿಚಾರ ರಾಷ್ಟ್ರೀಯ ನಾಯಕರ ಮುಂದೆ ಇಲ್ಲ ಎಂದು ಪುನರುಚ್ಚರಿಸಿದರು.

ಕಾಂಗ್ರೆಸ್‌ನ ವಿನಯ ಕುಲಕರ್ಣಿ ಹಾಗೂ ಎಂ.ಬಿ. ಪಾಟೀಲ ಬಿಜೆಪಿ ಸೇರ್ಪಡೆ ಬಗ್ಗೆ ಯಾವುದೇ ಚರ್ಚೆಯೇ ಆಗಿಲ್ಲ. ಇದು ಮಾಧ್ಯಮಗಳಿಂದಲೇ ತಿಳಿದಿದೆ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಹಾಗೂ ಪ್ರಧಾನ ಕಾರ್ಯದರ್ಶಿ ಸಂತೋಷ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಅವರು ಸಹ ಯಾವುದನ್ನೂ ಹೇಳಿಲ್ಲ ಎಂದಷ್ಟೇ ತಿಳಿಸಿದರು. ಈ ಚುನಾವಣೆ ವಿಧಾನಪರಿಷತ್‌ನ 4 ಹಾಗೂ ವಿಧಾನಸಭೆಯ ಶಿರಾ ಹಾಗೂ ಆರ್‌ಆರ್ ನಗರ ಉಪಚುನಾವಣೆ ಬಿಜೆಪಿಗೆ ಮಹತ್ವದ್ದಾಗಿದೆ.

ಚುನಾವಣೆಗೂ ಮೊದಲೇ ಸಿದ್ದರಾಮಯ್ಯ ಡಿಕೆಶಿ ಸಿಎಂ ಕುರ್ಚಿಗಾಗಿ ಫೈಟ್‌: ಸಚಿವ ಜಗದೀಶ್‌ ಶೆಟ್ಟರ್‌

ಆರು ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದು ಪ್ರತಿಪಕ್ಷಗಳಿಗೆ ಉತ್ತರ ನೀಡುತ್ತೇವೆ. ಅಲ್ಲದೇ ಒಂದೂವರೆ ವರ್ಷದ ಬಿಜೆಪಿ ಸರಕಾರದ ಅಭಿವೃದ್ಧಿ ಕೆಲಸಗಳು ಹಾಗೂ ಪ್ರವಾಹ, ಕೊರೊನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳು ಸಹ ಉತ್ತರ ನೀಡಲಿವೆ ಎಂದು ಜೋಶಿ ತಿಳಿಸಿದರು. ಕಾಂಗ್ರೆಸ್ ಪ್ರಜಾಪ್ರಭುತ್ವದ ಆಶಯಗಳಿಗೆ ಗೌರವ ನೀಡುತ್ತಿಲ್ಲ. ಚುನಾವಣೆಯಲ್ಲಿ ಜನರ ತೀರ್ಪನ್ನು ಅವಹೇಳನ ಮಾಡುತ್ತಿದೆ. ಪ್ರತಿಪಕ್ಷವಾಗಿ ಕೆಲಸ ಮಾಡದ ಕಾಂಗ್ರೆಸ್ ಇರೋದೇ ಅಧಿಕಾರಕ್ಕೆ ಎನ್ನುವಂತೆ ವರ್ತಿಸುತ್ತಿದೆ ಎಂದು ಇದೆ ವೇಳೆ ಜೋಶಿ ಟೀಕಿಸಿದರು. ಅ

ಜೋಶಿ ಸವಾಲು!
ರಾಜ್ಯದಲ್ಲಿ ಅತಿವೃಷ್ಟಿಘಿ, ಅನಾವೃಷ್ಟಿ ಪರಿಹಾರವಾಗಿ ಎನ್‌ಡಿಆರ್‌‌ ಅಡಿಯಲ್ಲಿ ಕೇಂದ್ರ ಎನ್‌ಡಿಎ ಸರಕಾರ 2014-2020 ರವರೆಗೆ 11,750 ಕೋಟಿ ರೂ. ನೀಡಿದೆ. ಈ ಅವಧಿಯಲ್ಲಿ ರಾಜ್ಯ ಸರಕಾರ 27208 ಕೋಟಿ ರೂ. ಬೇಡಿಕೆ ಸಲ್ಲಿಸಿತ್ತು. ಆದರೆ, ಕೇಂದ್ರ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ 2004-2014 ರವರೆಗೆ 4609 ಕೋಟಿ ರೂ. ಮಾತ್ರ ಕೊಟ್ಟಿದೆ. ಈ ಅವಧಿಯಲ್ಲಿ ರಾಜ್ಯದಿಂದ 46509 ಕೋಟಿ ರೂ. ಬೇಡಿಕೆ ಪ್ರಸ್ತಾವನೆ ಬಂದಿತ್ತು. ಈ ಬಗ್ಗೆ ಸಿದ್ದರಾಮಯ್ಯ ಉತ್ತರ ಕೊಡಲಿ ಎಂದು ಸಚಿವ ಪ್ರಹ್ಲಾದ ಜೋಶಿ ಸವಾಲು ಹಾಕಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ