ಆ್ಯಪ್ನಗರ

‘ಸಿಎಂ ಬದಲಾವಣೆ ಮಾಧ್ಯಮಗಳ ಸೃಷ್ಟಿ’

ಧಾರವಾಡ: ಕೊರೋನಾ ಹಾಗೂ ಅತಿವೃಷ್ಟಿ ಸಂಕಷ್ಟದಲ್ಲೂಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಉತ್ತಮ ಕೆಲಸ ಮಾಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳ ಬದಲಾವಣೆ ಮಾಧ್ಯಮಗಳ ಸೃಷ್ಟಿ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.

Vijaya Karnataka 21 Sep 2020, 5:00 am
ಧಾರವಾಡ: ಕೊರೋನಾ ಹಾಗೂ ಅತಿವೃಷ್ಟಿ ಸಂಕಷ್ಟದಲ್ಲೂ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಉತ್ತಮ ಕೆಲಸ ಮಾಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳ ಬದಲಾವಣೆ ಮಾಧ್ಯಮಗಳ ಸೃಷ್ಟಿ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
Vijaya Karnataka Web aravind bellad


ನಗರದಲ್ಲಿಭಾನುವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸಂದಿಗ್ಧ ಪರಿಸ್ಥಿತಿಯಲ್ಲಿಅತ್ಯುತ್ತಮ ಕೆಲಸ ಮಾಡಿದ ಯಡಿಯೂರಪ್ಪರ ಆಡಳಿತಕ್ಕೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿಎಂ ಬದಲಾವಣೆ ಬಗ್ಗೆ ಜನರಿಗೆ ತಪ್ಪು ತಿಳಿವಳಿಕೆ ನೀಡಬಾರದೆಂದು ಮಾಧ್ಯಮಗಳಿಗೆ ಕೋರಿದರು.

ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ಆಕಾಂಕ್ಷೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆಕಾಂಕ್ಷಿಗಳು ಬಹಳಷ್ಟಿದ್ದಾರೆ. ಪ್ರಸಕ್ತ ಪಕ್ಷ ನನಗೆ ಶಾಸಕ ಸ್ಥಾನದ ಜೊತೆಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಿದೆ. ನಮ್ಮ ಪಕ್ಷ ನೀಡಿದ ಯಾವುದೇ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಶಾಸಕರಾದ ಎಲ್ಲರಿಗೂ ಸಚಿವರಾಗುವ ಆಸೆ ಇರುತ್ತದೆ. ಇದು ಕ್ಷೇತ್ರದ ಜನರ ಆಸೆಯೂ ಹೌದು. ನಾನು ಸಚಿವನಾಗಿ ಮಾಡುವ ಕೆಲಸ ಶಾಸಕನಾಗಿಯೇ ಮಾಡುತ್ತಿರುವೆ. ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದರು.

ನಮ್ಮ ತಂದೆ (ಚಂದ್ರಕಾಂತ ಬೆಲ್ಲದ) ಐದು ಬಾರಿ ಶಾಸಕರಾದರೂ, ಸಚಿವ ಸ್ಥಾನ ನೀಡಿಲ್ಲವೆಂಬ ಬೇಸರ ಕ್ಷೇತ್ರದ ಜನತೆಗೆ ಇದೆ. ಆದರೆ, ಪಕ್ಷದ ನಾಯಕತ್ವ ವಿಶಿಷ್ಟ ಕಾರ್ಯ ನಿರ್ವಹಣೆ ಮಾಡುತ್ತಿದೆ. ಯಾವಾಗ ಯಾರಿಗೆ ಅವಕಾಶ ಕೊಡಬೇಕೆಂಬುದು ಅವರಿಗೆ ಬಿಟ್ಟಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ