ಆ್ಯಪ್ನಗರ

ಚಿರಾಗ್‌ ಕ್ರಿಕೆಟ್‌ಗೂ ಜೈ..ಓದಿಗೂ ಸೈ...!

ಹುಬ್ಬಳ್ಳಿ : ಕ್ರೀಡೆಯಲ್ಲಿ ಸಾಧನೆ ಮಾಡಲೆಂದೇ ಶೈಕ್ಷಣಿಕ ಜೀವನ ಮೊಟಕುಗೊಳಿಸಿದವರನ್ನು ಸಾಕಷ್ಟು ಕ್ರೀಡಾಪಟುಗಳನ್ನು ಕಂಡಿದ್ದೇವೆ. ಆದರೆ, ಹುಬ್ಬಳ್ಳಿ ಹುಡಗನೊಬ್ಬ ಕ್ರೀಡೆ ಹಾಗೂ ಓದಿನಲ್ಲಿ ಅತ್ಯುತ್ತಮ ಸಾಧನೆ ಮಾಡಿ ಎಲ್ಲರಿಂದಲೂ ಭೇಷ್‌ ಎನಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾನೆ.

Vijaya Karnataka 13 May 2019, 5:00 am
ಹುಬ್ಬಳ್ಳಿ : ಕ್ರೀಡೆಯಲ್ಲಿ ಸಾಧನೆ ಮಾಡಲೆಂದೇ ಶೈಕ್ಷಣಿಕ ಜೀವನ ಮೊಟಕುಗೊಳಿಸಿದವರನ್ನು ಸಾಕಷ್ಟು ಕ್ರೀಡಾಪಟುಗಳನ್ನು ಕಂಡಿದ್ದೇವೆ. ಆದರೆ, ಹುಬ್ಬಳ್ಳಿ ಹುಡಗನೊಬ್ಬ ಕ್ರೀಡೆ ಹಾಗೂ ಓದಿನಲ್ಲಿ ಅತ್ಯುತ್ತಮ ಸಾಧನೆ ಮಾಡಿ ಎಲ್ಲರಿಂದಲೂ ಭೇಷ್‌ ಎನಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾನೆ.
Vijaya Karnataka Web DRW-11 NADAF 3
ಚಿರಾಗ್‌ ನಾಯ್ಕ್‌


ಕ್ರಿಕೆಟ್‌ನಲ್ಲಿ ಕೆಎಸ್‌ಸಿಎ ಧಾರವಾಡ ವಲಯ ಪ್ರತಿನಿಧಿಸಿರುವ 16 ರ ಪೋರ ಚಿರಾಗ್‌ ನಾಯ್ಕ್‌, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 620 ಅಂಕ ಪಡೆದು ರಾಜ್ಯಕ್ಕೆ 6ನೇ ಸ್ಥಾನ ಪಡೆದಿದ್ದರೆ, ಕೆಎಸ್‌ಸಿಎ ವಲಯಗಳಲ್ಲಿ ನಡೆದ ಟೂರ್ನಿಗಳಲ್ಲಿ ಇದುವರೆಗೆ 1 ದ್ವಿಶತಕ, 14 ಶತಕ, 40 ಅರ್ಧ ಶತಕ ಬಾರಿಸಿದ್ದಾನೆ.

ಹುಬ್ಬಳ್ಳಿಯ ಎನ್‌.ಕೆ. ಠಕ್ಕರ್‌ ಶಾಲೆಯ ವಿದ್ಯಾರ್ಥಿ ಚಿರಾಗ್‌ ತನ್ನ 9ನೇ ವಯಸ್ಸಿನಲ್ಲಿ ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಕ್ರಿಕೆಟ್‌ ತರಬೇತಿ ಆರಂಭಿಸಿದನು. ಅಂಡರ್‌-14, 16, 19 ನಲ್ಲಿ ಆಡಿದ ಚಿರಾಗ್‌ ಬಿಸಿಸಿಐ ವ್ಯಾಪ್ತಿಯಲ್ಲಿ ನಡೆಯುವ ವಿಜಯ್‌ ಮರ್ಚೆಂಟ್‌ ಟ್ರೋಫಿ ಟೂರ್ನಿಯಲ್ಲಿ ರಾಜ್ಯ ತಂಡದಲ್ಲಿ ಸ್ಥಾನ ಪಡೆದಿದ್ದನು. 2018ರಲ್ಲಿ ಬೆಂಗಳೂರಿನಲ್ಲಿ ನಡೆದ ಅಂತರ್‌ ಕ್ಲಬ್‌ ಟೂರ್ನಿಯಲ್ಲಿ 251 ಬಾಲ್‌ನಲ್ಲಿ 225 ರನ್‌ ಗಳಿಸುವ ಮೂಲಕ ತನ್ನ ಮೊದಲ ದ್ವಿಶತಕ ಬಾರಿಸಿವ ಮೂಲಕ ಕೆಎಸ್‌ಸಿಎ ಧಾರವಾಡ ವಲಯಕ್ಕೆ ಹೆಸರು ತಂದಿದ್ದಾನೆ.

ಎಸ್‌ಎಸ್‌ಎಲ್‌ಸಿಯಲ್ಲಿ ಸಾಧನೆ

ಆಟದ ಜತೆ ಜತೆಗೆ ಓದನ್ನು ಸಮನಾಗಿ ನಿಭಾಯಿಸಿಕೊಂಡು ಬರುತ್ತಿರುವ ಚಿರಾಗ್‌ ಇಂಗ್ಲಿಷ್‌-124, ಕನ್ನಡ- 100, ಹಿಂದಿ-99, ಗಣಿತ- 98, ವಿಜ್ಞಾನ 99, ಸಮಾಜ ವಿಜ್ಞಾನ -100, ಶೇ. 99.2 ಮತ್ತು (625ಕ್ಕೆ 620) ಅಂಕ ಪಡೆಯುವ ಮೂಲಕ ರಾಜ್ಯಕ್ಕೆ 6ನೇ ಸ್ಥಾನ, ಧಾರವಾಡ ಜಿಲ್ಲೆಗೆ 4ನೇ ಸ್ಥಾನ ಪಡೆಯುವ ಮೂಲಕ ಸಾಧನೆ ಮಾಡಿದ್ದಾನೆ. ಕ್ರಿಕೆಟ್‌, ಈಜು, ಸಂಗೀತದ ಜತೆ ಓದಿನಲ್ಲೂ ಚಿರಾಗ್‌ ಮುಂದೆ ಇದ್ದಾನೆ. ಕ್ರಿಕೆಟ್‌ನಲ್ಲಿ ಸಾಧನೆ ಮಾಡಿದಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ್ಲಲಿ ರಾಜ್ಯಕ್ಕೆ 6ನೇ ಸ್ಥಾನ ಪಡೆಯುವ ಮೂಲಕ ಚಿರಾಗ್‌ ನಮ್ಮ ಭರವಸೆ ಉಳಿಸಿಕೊಂಡಿದ್ದಾನೆ. ಮಗನ ಸಾಧನೆಗೆ ಚಿರಾಗ್‌ ತಂದೆ ರಾಮಮನೋಹರ್‌ ನಾಯ್ಕ್‌ ಹೆಮ್ಮೆ ಪಡುತ್ತಾರೆ.

ವಿರಾಟ್‌ ಕೊಹ್ಲಿ ಅಂದ್ರೆ ಇಷ್ಟ

ಅಂಡರ್‌-19 ತಂಡದ ಸಾಧನೆ ಮಾಡುವ ಮೂಲಕ ಭಾರತ ತಂಡಕ್ಕೆ ಆಯ್ಕೆಯಾಗಿ ಸಾಧನೆ ಮಾಡುತ್ತಿರುವ ವಿರಾಟ್‌ ಕೊಹ್ಲಿ ಅಂದ್ರೆ ಚಿರಾಗ್‌ ನಾಯ್ಕ್‌ಗೆ ಪಂಚಪ್ರಾಣ. ಕೊಹ್ಲಿಯಂತೆ ತಾನು ರಾಜ್ಯ ತಂಡ, ಭಾರತ ತಂಡದಲ್ಲಿ ಆಡಬೇಕು ಎಂಬ ಕನಸು ಹೊತ್ತಿರುವ ಚಿರಾಗ್‌ಗೆ ತಂದೆ ರಾಮ್‌ಮನೋಹರ್‌, ತಾಯಿಯ ಪ್ರೋತ್ಸಾಹವೂ ಇದೆ. ಈಗಾಲೇ ಅಂತರ್‌ ಕ್ಲಬ್‌, ಶಾಲಾ ಟೂರ್ನಿ, ಡಿವಿಜನ್‌ ಟೂರ್ನಿನಲ್ಲಿ ಆಡುವ ಮೂಲಕ ಗಮನ ಸೆಳೆದ ಚಿರಾಗ್‌ಗೆ ಕೆಎಸ್‌ಸಿಎ ಧಾರವಾಡ್‌ ವಲಯ ಸೂಕ್ತ ಮಾರ್ಗದರ್ಶನ ನೀಡುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ