ಆ್ಯಪ್ನಗರ

ಸ್ವಚ್ಛತಾ ಅಭಿಯಾನ, ಜಾಗೃತಿ ಜಾಥಾ

ಧಾರವಾಡ : ನಗರದ ಶ್ರೀಯಾ ನಸಿಂರ್‍ಗ್‌ ಕಾಲೇಜು, ಧಾರವಾಡ ಬಾಂಡ್ಸ್‌, ಮಹಾನಗರ ಪಾಲಿಕೆ ವತಿಯಿಂದ ಶನಿವಾರ ಗ್ರಾಮೀಣ ಬಸ್‌ ನಿಲ್ದಾಣ ಹಾಗೂ ಸುಭಾಷ ರಸ್ತೆಯಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡು ಬಸ್‌ ನಿಲ್ದಾಣ ಹಾಗೂ ಸುಭಾಷ್‌ ರಸ್ತೆ ಸ್ವಚ್ಛಗೊಳಿಸಲಾಯಿತು.

Vijaya Karnataka 21 Jan 2019, 5:00 am
ಧಾರವಾಡ : ನಗರದ ಶ್ರೀಯಾ ನಸಿಂರ್‍ಗ್‌ ಕಾಲೇಜು, ಧಾರವಾಡ ಬಾಂಡ್ಸ್‌, ಮಹಾನಗರ ಪಾಲಿಕೆ ವತಿಯಿಂದ ಶನಿವಾರ ಗ್ರಾಮೀಣ ಬಸ್‌ ನಿಲ್ದಾಣ ಹಾಗೂ ಸುಭಾಷ ರಸ್ತೆಯಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡು ಬಸ್‌ ನಿಲ್ದಾಣ ಹಾಗೂ ಸುಭಾಷ್‌ ರಸ್ತೆ ಸ್ವಚ್ಛಗೊಳಿಸಲಾಯಿತು.
Vijaya Karnataka Web clean up campaign and awareness
ಸ್ವಚ್ಛತಾ ಅಭಿಯಾನ, ಜಾಗೃತಿ ಜಾಥಾ


ಈ ವೇಳೆ ಶ್ರೀಯಾ ನಸಿಂರ್‍ಗ್‌ ಕಾಲೇಜಿನ ವಿದ್ಯಾರ್ಥಿಗಳು ಬೀದಿಗಳಲ್ಲಿ ಕಸ ಚೆಲ್ಲುವದು ಹಾಗೂ ಉಗುಳುವದರ ಕುರಿತು ಬಸ್‌ ನಿಲ್ದಾಣ ಹಾಗೂ ಸುಭಾಷ್‌ ರಸ್ತೆಗಳಲ್ಲಿ ಬೀದಿ ನಾಟಕಗಳನ್ನು ಪ್ರಸ್ತುತಪಡಿಸಿ, ಸಾರ್ವಜನಿಕರಿಗೆ ಸ್ವಚ್ಛತೆಯ ಅರಿವು ಮೂಡಿಸಿದರು. ಅಲ್ಲದೇ ಘನ ತ್ರಾಜ್ಯಗಳನ್ನು ಹೇಗೆ ವಿಂಗಡಿಸಬೇಕು ಎಂಬುದನ್ನು ಪ್ರಾತ್ಯಕ್ಷಿಕೆಯ ಮೂಲಕ ಮಹಾನಗರ ಪಾಲಿಕೆ ತಿಳುವಳಿಕೆ ನೀಡಿದರು.

ವಿವಿಧ ಸ್ಥಳಗಳಲ್ಲಿ ಕಸದ ಡಬ್ಬಿಗಳು ಹಾಗೂ ಉಗುಳುವ ಡಬ್ಬಿಗಳ ವ್ಯವಸ್ಥೆ ಮಾಡಬೇಕು. ಸಾರ್ವಜನಿಕ ಸ್ಥಳದಲ್ಲಿ ಎಲ್ಲೆಂದರಲ್ಲಿ ಉಗುಳುವವರಿಗೆ ದಂಡ ವಿಧಿಸಬೇಕು ಎಂದು ವಿದ್ಯಾರ್ಥಿಗಳು ಜಿಲ್ಲಾ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು. ಅಲ್ಲದೇ ಸುಭಾಷ್‌ ರಸ್ತೆ, ಮಾರುಕಟ್ಟೆ ಪ್ರದೇಶದಲ್ಲಿ ಸೇರಿದಂತೆ ವಿವಿಧ ನಗರಗಳಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಜಾಥಾ ನಡೆಸಿದರು.

ಈ ಸಂದರ್ಭದಲ್ಲಿ ಡಿಸಿಪಿ ಬಿ.ಎಸ್‌.ನೇಮಗೌಡ, ಮಹಾನಗರ ಪಾಲಿಕೆ ಸಹಾಯಕ ಆಯುಕ್ತ ಆನಿಶೆಟ್ಟರ್‌, ಟ್ರಾಪಿಕ್‌ ಇನ್ಸಪೆಕ್ಟರ್‌ ಮುರುಗೇಶ್‌ ಚನ್ನಣ್ಣವರ, ಕಿರಣ ಹಿರೇಮಠ, ಪಂಚಯ್ಯ ಹಿರೇಮಠ, ಚಂದ್ರಶೇಖರ್‌, ಡಾ ಸತೀಶ ಇರಕಲ್‌, ಧಾರವಾಡ ಬಾಂಡ್ಸ್‌ನ ಸದಸ್ಯರಾದ ವಿಜಯಾ ಕುಲಕರ್ಣಿ, ಅಜಿತ ಕಾಶಿಕರ, ಪೂರ್ತಿ ಶರ್ಮಾ, ರೂಪಾ ಮಾಚಿಗಣಿ, ರಮಾ ಕೌತಾಳ, ಮಿಲಿಂದ್‌ ರಾಯಚೂರ, ಅಬ್ಬಿಹಾಳ ಸೇರಿದಂತೆ ಇತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ