ಆ್ಯಪ್ನಗರ

ಅವಳಿ ನಗರದಲ್ಲಿಗುಡುಗು ಸಹಿತ ತಂಪೆರೆದ ಮಳೆ

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿಮಂಗಳವಾರ ಮಧ್ಯಾಹ್ನ ಮುಕ್ಕಾಲು ಗಂಟೆಗೂ ಅಧಿಕ ಕಾಲ ಗುಡುಗು ಸಹಿತ ಭರ್ಜರಿ ಸುರಿಯಿತು. ಗುಡುಗು, ಸಿಡಿಲಿನೊಂದಿಗೆ ಆರಂಭವಾದ ಮಳೆಯೂ ಧಾರಾಕಾರವಾಗಿ ಸುರಿಯುವ ಮೂಲಕ ಇಳೆಗೆ ತಂಪನ್ನೆರೆಯಿತು. ಕೊರೊನಾ ಭೀತಿಯಿಂದ ಲಾಕ್ಡೌನ್‌

Vijaya Karnataka 25 Mar 2020, 5:00 am
Vijaya Karnataka Web 24 RAIN 8_21

ಹುಬ್ಬಳ್ಳಿಯಲ್ಲಿಮಂಗಳವಾರ ಮಧ್ಯಾಹ್ನ ಸುರಿದ ಮಳೆ.
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿಮಂಗಳವಾರ ಮಧ್ಯಾಹ್ನ ಮುಕ್ಕಾಲು ಗಂಟೆಗೂ ಅಧಿಕ ಕಾಲ ಗುಡುಗು ಸಹಿತ ಭರ್ಜರಿ ಸುರಿಯಿತು.
ಗುಡುಗು, ಸಿಡಿಲಿನೊಂದಿಗೆ ಆರಂಭವಾದ ಮಳೆಯೂ ಧಾರಾಕಾರವಾಗಿ ಸುರಿಯುವ ಮೂಲಕ ಇಳೆಗೆ ತಂಪನ್ನೆರೆಯಿತು. ಕೊರೊನಾ ಭೀತಿಯಿಂದ ಲಾಕ್ಡೌನ್‌ ಹಿನ್ನೆಲೆಯಲ್ಲಿಬಹುತೇಕರು ಮನೆಯಲ್ಲಿಯೇ ಇದ್ದಿದ್ದರಿಂದ ಸಂಚಾರಕ್ಕೆ ಯಾವುದೇ ಸಮಸ್ಯೆಗಳು ಉಂಟಾಗಲಿಲ್ಲ.

ಮಧ್ಯಾಹ್ನದ ನಂತರ ಸಂಪೂರ್ಣ ಮೋಡ ಕವಿದ ವಾತಾವರಣವಿತ್ತು. ಧಾರವಾಡ, ನವಲಗುಂದದಲ್ಲಿಮೋಡ ಕವಿದು ಗುಡುಗು ಕೇಳಿಬಂದರೂ ಮಳೆಯಾಗಲಿಲ್ಲ. ಹುಬ್ಬಳ್ಳಿಯಲ್ಲಿ 4ಗಂಟೆಯಿಂದ ಸರಿಸುಮಾರು ಮುಕ್ಕಾಲು ಗಂಟೆ ಕಾಲ ಮಳೆಯಾಯಿತು. ಕಳೆದೆರಡು ವಾರದಿಂದ ಬೇಸಿಗೆ ಸೆಕೆಯಿಂದ ಕಂಗೆಟ್ಟಿದ್ದ ಜನತೆಗೆ ಮಂಗಳವಾರ ಸುರಿದ ಮಳೆ ಕೊಂಚ ನೆಮ್ಮದಿ ನೀಡಿತು. ಸಂಜೆವರೆಗೂ ಮೋಡ ಕವಿದ ವಾತಾವರಣವೆ ಇತ್ತು. ಆಗಾಗ ಮಳೆಯ ಸಿಂಚನ ಮುಂದುವರೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ