ಆ್ಯಪ್ನಗರ

ಸೀರೆಯುಟ್ಟು ನಡೆಯುವ ಸ್ಪರ್ಧೆ ನಾಳೆ

ಧಾರವಾಡ: ರೋಟರಿ ಕ್ಲಬ್‌ ಧಾರವಾಡ ಸೆಂಟ್ರಲ್‌ನ ಮಹಿಳಾ ಘಟಕ ಮತ್ತು ಜೈವ್‌ ಸ್ಟುಡಿಯೋ ಆಶ್ರಯದಲ್ಲಿಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಾ. 1ರಂದು ಮಹಿಳೆಯರಿಗಾಗಿ ಸೀರೆಯುಟ್ಟು ನಡೆಯುವ ಮತ್ತು ಓಡುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ರೋಟರಿ ಕ್ಲಬ… ಧಾರವಾಡ ಸೆಂಟ್ರಲ… ಅಧ್ಯಕ್ಷ ಡಾ. ಕವನ ದೇಶಪಾಂಡೆ ಹೇಳಿದರು.

Vijaya Karnataka 29 Feb 2020, 5:00 am
ಧಾರವಾಡ: ರೋಟರಿ ಕ್ಲಬ್‌ ಧಾರವಾಡ ಸೆಂಟ್ರಲ್‌ನ ಮಹಿಳಾ ಘಟಕ ಮತ್ತು ಜೈವ್‌ ಸ್ಟುಡಿಯೋ ಆಶ್ರಯದಲ್ಲಿಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಾ. 1ರಂದು ಮಹಿಳೆಯರಿಗಾಗಿ ಸೀರೆಯುಟ್ಟು ನಡೆಯುವ ಮತ್ತು ಓಡುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ರೋಟರಿ ಕ್ಲಬ… ಧಾರವಾಡ ಸೆಂಟ್ರಲ… ಅಧ್ಯಕ್ಷ ಡಾ. ಕವನ ದೇಶಪಾಂಡೆ ಹೇಳಿದರು.
Vijaya Karnataka Web competition to be held tomorrow
ಸೀರೆಯುಟ್ಟು ನಡೆಯುವ ಸ್ಪರ್ಧೆ ನಾಳೆ

ನಗರದಲ್ಲಿಶುಕ್ರವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ವಿಶ್ವ ಸಂಸ್ಥೆಯು 1975ರಲ್ಲಿಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆರಂಭಿಸಿತು. ಅಂದಿನಿಂದ ಪ್ರತಿವರ್ಷ ಮಹಿಳಾ ದಿನ ಆಚರಿಸಿಕೊಂಡು ಬರಲಾಗುತ್ತಿದೆ. ಈ ಹಿನ್ನೆಲೆಯಲ್ಲಿರೋಟರಿ ಕ್ಲಬ… ಧಾರವಾಡ ಸೆಂಟ್ರಲ್‌ನ ಮಹಿಳಾ ಘಟಕದ ವತಿಯಿಂದ ಪ್ರಥಮ ಬಾರಿಗೆ ಮಹಿಳೆಯರಿಗಾಗಿ ಸೀರೆಯುಟ್ಟು ನಡೆಯುವ ಮತ್ತು ಓಡುವ ಸ್ಪರ್ಧೆಯನ್ನು ಮಾ. 1ರಂದು ಬೆಳಗ್ಗೆ 7 ಗಂಟೆಗೆ ಕರ್ನಾಟಕ ಕಾಲೇಜಿನಿಂದ ಕಲಾಭವನದವರೆಗೆ ಆಯೋಜಿಸಿದೆ ಎಂದರು.

ಇತೀಚಿನ ದಿನಗಳಲ್ಲಿಮಹಿಳೆಯರಿಗೆ ಸೀರೆಯ ಬಗ್ಗೆ ಅಭಿರುಚಿ ಕಡಿಮೆಯಾಗುತ್ತಿದೆ. ಜತೆಗೆ ಒತ್ತಡದ ಬದುಕಿನಲ್ಲಿಆರೋಗ್ಯದ ಕಡೆಗೆ ಲಕ್ಷ್ಯ ಕಡಿಮೆಯಾಗುತ್ತಿದೆ. ಭಾರತೀಯ ಪರಂಪರೆಯಲ್ಲಿಸೀರೆಗೆ ತನ್ನದೇ ಆದ ವೈಶಿಷ್ಟತೆ ಇದೆ. ಈ ಹಿನ್ನೆಲೆಯಲ್ಲಿಮಹಿಳೆಯರಲ್ಲಿಸೀರೆ ಉಡುವ ಪರಂಪರೆ ಬೆಳೆಸುವುದಾಗಿದೆ. ಈ ಕಾರ್ಯಕ್ರಮದಲ್ಲಿಎಲ್ಲವಯೋಮಾನದ ಮಹಿಳೆಯರು ಭಾಗವಹಿಸಬಹುದು ಎಂದು ಡಾ. ಕವನ ತಿಳಿಸಿದರು. ಡಾ. ಕೋಮಲ ಕುಲಕರ್ಣಿ, ಡಾ. ಪಲ್ಲವಿ ದೇಶಪಾಂಡೆ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ