ಆ್ಯಪ್ನಗರ

ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್‌ ಹುನ್ನಾರ

ಹುಬ್ಬಳ್ಳಿ: ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಮನೆ ಮತ್ತು ಅವರ ಸಂಸ್ಥೆಗಳ ಮೇಲೆ ನಡೆದ ಐಟಿ ದಾಳಿಯಲ್ಲಿಕಾಂಗ್ರೆಸ್‌ ರಾಜಕೀಯ ಲಾಭ ಪಡೆಯಲು ಹವಣಿಸುತ್ತಿದೆ ಎಂದು ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌ ಆರೋಪಿಸಿದ್ದಾರೆ.

Vijaya Karnataka 14 Oct 2019, 5:00 am
ಹುಬ್ಬಳ್ಳಿ: ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಮನೆ ಮತ್ತು ಅವರ ಸಂಸ್ಥೆಗಳ ಮೇಲೆ ನಡೆದ ಐಟಿ ದಾಳಿಯಲ್ಲಿಕಾಂಗ್ರೆಸ್‌ ರಾಜಕೀಯ ಲಾಭ ಪಡೆಯಲು ಹವಣಿಸುತ್ತಿದೆ ಎಂದು ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌ ಆರೋಪಿಸಿದ್ದಾರೆ.
Vijaya Karnataka Web congress for political gain
ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್‌ ಹುನ್ನಾರ


ಭಾನುವಾರ ಸುದ್ದಿಗಾರೊಂದಿಗೆ ಮಾತನಾಡಿ, ''ಐಟಿ ಮತ್ತು ಇ.ಡಿ ದಾಳಿಯಲ್ಲಿರಾಜಕೀಯ ಮಾಡುವುದು ತಪ್ಪು. ಮೆಡಿಕಲ್‌ ಕಾಲೇಜು ವಿದ್ಯಾರ್ಥಿಗಳ ದೂರಿನನ್ವಯ ಐಟಿ ರೇಡ್‌ ನಡೆದಿದೆ. ಇದರಲ್ಲಿರಾಜಕೀಯ ಇಲ್ಲ. ಕಾನೂನು ಬದ್ಧವಾಗಿ ಎದುರಿಸುತ್ತೇನೆ ಎಂದು ಸ್ವತಃ ಪರಮೇಶ್ವರ ಸ್ಪಷ್ಟನೆ ನೀಡಿದ್ದಾರೆ. ಆದರೆ ಕಾಂಗ್ರೆಸ್‌ ಮುಖಂಡರು ಮೊಸರಿನಲ್ಲಿಕಲ್ಲುಹುಡುಕುವ ಕೆಲಸ ಮಾಡುತ್ತಿದ್ದಾರೆ'' ಎಂದು ದೂರಿದರು.

''ಪಾರದರ್ಶಕ ಆಡಳಿತದಿಂದಾಗಿ ಬಿಜೆಪಿ ಸರಕಾರ ಹಾಗೂ ಪ್ರಧಾನಿ ಮೋದಿ, ಅಮಿಶ್‌ ಶಾ ಬಗ್ಗೆ ಮಾತನಾಡಲು ಕಾಂಗ್ರೆಸ್‌ನವರಿಗೆ ಯಾವುದೇ ವಿಷಯ ಇಲ್ಲ. ಐಟಿ ಕೆಲಸ ಪ್ರಶಂಸೆ ಮಾಡುವುದನ್ನು ಬಿಟ್ಟು ತಮ್ಮ ತಪ್ಪನ್ನು ಮುಚ್ಚಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ತಪ್ಪಿಲ್ಲಎಂದರೆ ಐಟಿ ತನಿಖೆ ಎದುರಿಸಬೇಕು'' ಎಂದು ಸವಾಲು ಹಾಕಿದರು.

''ಪರಮೇಶ್ವರ ಪಿಎ ರಮೇಶ ಆತ್ಮಹತ್ಯೆ ಇವೆಲ್ಲಾಪ್ರಕರಣ ತಿರುವುಗೊಳಿಸುವ ಹುನ್ನಾರು. ಸರಿಯಾದ ತನಿಖೆಯಾಗಿ ನೈಜ ಅಂಶಗಳು ಹೊರಗೆ ಬರಲಿ. ಆತ್ಮಹತ್ಯೆಗೂ ಐಟಿಗೂ ಸಂಬಂಧವಿಲ್ಲ. ಆದರೂ ತನಿಖೆ ಆಗಲಿ'' ಎಂದು ಒತ್ತಾಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ