ಆ್ಯಪ್ನಗರ

President in Hubballi - ರಾಷ್ಟ್ರಪತಿ ಕಾರ್ಯಕ್ರಮದ ವೇದಿಕೆ ಮುಂದೆ ಕೈ ನಾಯಕರ ಹೈಡ್ರಾಮಾ: ಸೀಟ್ ಇಲ್ಲ ಎಂದ ಸಿಟ್ಟಾದ ಸದಸ್ಯರು

ರಾಷ್ಟ್ರಪತಿಗಳ ಪೌರ ಸನ್ಮಾನ ಕಾರ್ಯಕ್ರಮಕ್ಕೆ ನಮಗೆ ಆಸನ ವ್ಯವಸ್ಥೆ ಕಲ್ಪಿಸಿಲ್ಲ. ಆ ಮೂಲಕ ನಮ್ಮನ್ನು ಅಗೌರವವಾಗಿ ನಡೆಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರು ಆರೋಪಿಸಿದ್ದು, ಕಾರ್ಯಕ್ರಮಕ್ಕೆ ನಾವು ಬರಲ್ಲ ಎಂದು ಕಿಡಿಕಾರಿದರಲ್ಲದೆ, ಪೌರಸನ್ಮಾನಕ್ಕಾಗಿ ನಿರ್ಮಿಸಲಾಗಿರುವ ವೇದಿಕೆಯ ಮುಂಭಾಗದಲ್ಲಿ ಹೈಡ್ರಾಮಾ ಮಾಡಿದರು. ನಿನ್ನೆ ತಡರಾತ್ರಿ ನಾವು ಕಾರ್ಯಕ್ರಮಕ್ಕೆ ಬರಲ್ಲ ಎಂದು ಹೇಳಿದ್ದ ಕೈ ಸದಸ್ಯರು ಈಗ ಇಂತಹದೊಂದು ಹೈಡ್ರಾಮಾ ಸೃಷ್ಟಿಸಿದ್ದಾರೆ.

Edited byಚೇತನ್ ಓ.ಆರ್. | Vijaya Karnataka Web 26 Sep 2022, 2:59 pm
ಹುಬ್ಬಳ್ಳಿ :ರಾಷ್ಟ್ರಪತಿಗಳ ಕಾರ್ಯಕ್ರಮದಲ್ಲಿಯೇ ಕಾಂಗ್ರೆಸ್ ನಾಯಕರು ವೇದಿಕೆಯ ಮುಂದೆ ಹೈಡ್ರಾಮಾ ಮಾಡುವ ಮೂಲಕ ಆಡಳಿತಾರೂಢ ಬಿಜೆಪಿಗೆ ಮುಜುಗರವನ್ನುಂಟು ಮಾಡಿದ್ದಾರೆ.
Vijaya Karnataka Web Congress Leaders
ಧರಣಿ ನಿರತ ಕಾಂಗ್ರೆಸ್ ನಾಯಕರು.


ಹೌದು... ರಾಷ್ಟ್ರಪತಿ ಕಾರ್ಯಕ್ರಮ ಆರಂಭದ ಮುನ್ನವೇ ಕಾಂಗ್ರೆಸ್ ಪಾಲಿಕೆ ಸದಸ್ಯರು ಹೈಡ್ರಾಮಾ ಮಾಡಿದ್ದು,‌ ಪಾಲಿಕೆ ಮುಂಭಾಗದಲ್ಲಿ ನೆಲದ ಮೇಲೆ ಕುಳಿತು ಅಸಮಾಧಾನ ಹೊರಹಾಕಿದ್ದಾರೆ.

Mysuru Dasara 2022 | ವಿಶ್ವವಿಖ್ಯಾತ ಮೈಸೂರು ದಸರಾಗೆ ವಿದ್ಯುಕ್ತ ಚಾಲನೆ ನೀಡಿದ ರಾಷ್ಟ್ರಪತಿ
ಪೌರ ಸನ್ಮಾನ ಕಾರ್ಯಕ್ರಮಕ್ಕೆ ನಮಗೆ ಗೌರವ ಕೊಟ್ಟಿಲ್ಲ ಎಂದು ಕೈ ಸದಸ್ಯರ ಆರೋಪಿಸಿದ್ದು, ಕಾರ್ಯಕ್ರಮಕ್ಕೆ ನಾವು ಬರಲ್ಲ ಎಂದಿದ್ದ ಕೈನಾಯಕರು ಈಗ ಆಸನದ ವ್ಯವಸ್ಥೆ ಇಲ್ಲ ಎಂದು ಆರೋಪಿಸಿ ವೇದಿಕೆ ಮುಂಭಾಗದಲ್ಲಿ ಹೈಡ್ರಾಮಾ ಮಾಡಿದ್ದಾರೆ. ನಿನ್ನೆ ತಡರಾತ್ರಿ ನಾವು ಕಾರ್ಯಕ್ರಮಕ್ಕೆ ಬರಲ್ಲ ಎಂದು ಹೇಳಿದ್ದ ಕೈ ಸದಸ್ಯರು ಈಗ ಇಂತಹದೊಂದು ಹೈಡ್ರಾಮಾ ಸೃಷ್ಟಿಸಿದ್ದಾರೆ.

ಕೊನೆಯ ಕ್ಷಣದಲ್ಲಿ ಬದಲಾದ ನಿಲುವು

ಹುಬ್ಬಳ್ಳಿ-ಧಾರವಾಡ ಮಹಾನಗರ ‌ಪಾಲಿಕೆ‌ ಆಯೋಜಿಸಿರುವ ರಾಷ್ಟ್ರಪತಿಗಳ ಪೌರಸನ್ಮಾನ ಕಾರ್ಯಕ್ರಮ ಬಹಿಷ್ಕರಿಸಲು ಕಾಂಗ್ರೆಸ್ ಸದಸ್ಯರು ಮುಂದಾಗಿದ್ದರು ಅದು ಕೊನೆಯ ಕ್ಷಣದಲ್ಲಿ ಬದಲಾಯಿತು. ‌ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯರು, ರಾಷ್ಟ್ರಪತಿಗಳ ಪೌರ ಸನ್ಮಾನ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಪಾಲಿಕೆ ಪ್ರತಿ ಪಕ್ಷದ ಕಾಂಗ್ರೆಸ್ ಸದಸ್ಯರನ್ನು ಕಡೆಗಣನೆ ಮಾಡಲಾಗಿದೆ.

Mysuru Dasara - ಮೈಸೂರಿನಲ್ಲೇ ತಯಾರಾದ ರೇಷ್ಮೆ ಸೀರೆಯಲ್ಲಿ ಆಗಮಿಸಿ, ದಸರಾಗೆ ವಿಶೇಷ ಮೆರುಗು ತಂದ ರಾಷ್ಡ್ರಪತಿ ಮುರ್ಮು
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸದಸ್ಯರೆಲ್ಲರೂ ಪೌರ ಸನ್ಮಾನ ಕಾರ್ಯಕ್ರಮವನ್ನು ಬಹಿಷ್ಕರಿಸಲು ನಿರ್ಧಾರ ಮಾಡಿದ್ದರು ತಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ.‌ ಎಲ್ಲದರಲ್ಲೂ ಬಿಜೆಪಿ ಸದಸ್ಯರಿಗೆ ಮಾತ್ರ ಅವಕಾಶ ನೀಡಲಾಗಿದೆ. ಪೌರ ಸನ್ಮಾನ ಕಾರ್ಯಕ್ರಮವನ್ನು ಬಿಜೆಪಿ ಪಕ್ಷದ ಕಾರ್ಯಕ್ರಮ ಎಂದು ಮಾಡಲಾಗುತ್ತಿದೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದರು.
ಲೇಖಕರ ಬಗ್ಗೆ
ಚೇತನ್ ಓ.ಆರ್.
ಪ್ರಸ್ತುತ, ವಿಜಯ ಕರ್ನಾಟಕ ವೆಬ್ ನಲ್ಲಿ ಪತ್ರಕರ್ತನಾಗಿ 2022ರಿಂದ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2007ರಲ್ಲಿ ತುಮಕೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ 5ನೇ ರ‍್ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಮೈಸೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ ಪಿಎಚ್ ಡಿ ಪದವಿ ಪಡೆದಿದ್ದಾರೆ. ಜಿಲ್ಲಾ ಸುದ್ದಿಗಳಿಂದ ಹಿಡಿದು ಕ್ರೀಡೆ, ದೇಶ- ವಿದೇಶ, ಸಿನಿಮಾ, ವಿಜ್ಞಾನ- ತಂತ್ರಜ್ಞಾನ ಇತ್ಯಾದಿ ವೈವಿಧ್ಯಯಮ ವಿಷಯಗಳ ಬಗ್ಗೆ ಬರೆಯುವ ಇವರಿಗೆ, ನಾನಾ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಈವರೆಗೆ 16 ವರ್ಷ ಕೆಲಸ ಮಾಡಿದ ಅನುಭವವಿದೆ. ಫೋಟೋಗ್ರಫಿ ಇವರ ಅಚ್ಚುಮೆಚ್ಚಿನ ಹವ್ಯಾಸ. ಸಿನಿಮಾ, ಸಾಕ್ಷ್ಯಚಿತ್ರ, ಸಾಹಿತ್ಯ, ವಿಡಿಯೋ ಸಂಕಲನ, ಪತ್ರಿಕೆ ಪುಟ ವಿನ್ಯಾಸ, ಹಾಡುಗಾರಿಕೆ, ಚಿತ್ರಕಲೆ, ಅನಿಮೇಶನ್, ಸಂಗೀತದಲ್ಲಿಯೂ ಆಸಕ್ತಿಯಿದೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ