ಆ್ಯಪ್ನಗರ

ಮೈತ್ರಿ ಮುಂದುವರಿಯಲಿ: ಹೊರಟ್ಟಿ

ಧಾರವಾಡ: ಮುಖ್ಯಮಂತ್ರಿಗಳ ಆರೋಗ್ಯ ಸರಿಯಿಲ್ಲ .ಹೀಗಾಗಿ ಚಿಕಿತ್ಸೆಗೆ ಪಡೆಯುತ್ತಿದ್ದಾರೆ ಇದಕ್ಕೆ ಬೇರೆ ಅರ್ಥ ಕೊಡುವುದು ಬೇಡ, ಆರೋಗ್ಯದ ಕುರಿತು ಎಲ್ಲರೂ ಗಮನ ಹರಿಸಬೇಕು.ನಾಳೆಯಿಂದ ಮುಖ್ಯಮಂತ್ರಿಗಳು ಉಳಿದ ಕೆಲಸಗಳಲ್ಲಿ ಭಾಗಿಯಾಗಲಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ

Vijaya Karnataka 5 May 2019, 5:00 am
ಧಾರವಾಡ: ಮುಖ್ಯಮಂತ್ರಿಗಳ ಆರೋಗ್ಯ ಸರಿಯಿಲ್ಲ .ಹೀಗಾಗಿ ಚಿಕಿತ್ಸೆಗೆ ಪಡೆಯುತ್ತಿದ್ದಾರೆ ಇದಕ್ಕೆ ಬೇರೆ ಅರ್ಥ ಕೊಡುವುದು ಬೇಡ, ಆರೋಗ್ಯದ ಕುರಿತು ಎಲ್ಲರೂ ಗಮನ ಹರಿಸಬೇಕು.ನಾಳೆಯಿಂದ ಮುಖ್ಯಮಂತ್ರಿಗಳು ಉಳಿದ ಕೆಲಸಗಳಲ್ಲಿ ಭಾಗಿಯಾಗಲಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
Vijaya Karnataka Web continue alliance horatti
ಮೈತ್ರಿ ಮುಂದುವರಿಯಲಿ: ಹೊರಟ್ಟಿ


ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೈತ್ರಿ ಕುರಿತು ಜೆಡಿಎಸ್‌ ರಾಜಾಧ್ಯಕ್ಷ ವಿಶ್ವನಾಥ ಹೇಳಿಕೆ ವಿರೋಧಿಸಿದರು. ರಾಜ್ಯದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಿದ್ದÜಕ್ಕೆ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನರಿಂದ ಒಳ್ಳೆಯ ಬೆಂಬಲ ಸಿಕ್ಕಿದೆ. ಹೀಗಾಗಿ ಸ್ಥಳೀಯ ಚುನಾವಣೆಗೂ ಮೈತ್ರಿ ಮುಂದುವರಿಸಬೇಕು. ಪ್ರಸ್ತುತ ಸರಕಾರ ನಡೆಯುವಾಗ ಮೈತ್ರಿ ಮುರಿಯೋದು ಸರಿಯಲ್ಲ .ಇದರಿಂದ ರಾಜ್ಯದ ಜನತೆಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಅಲ್ಲದೇ ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡಿದ್ದರಿಂದಲೇ ಈಗಿನ ಸರಕಾರ ನಡೆಯುತ್ತಿದೆ. ಮೈತ್ರಿ ಮುರಿಯಬೇಕು ಎಂದ್ದಾದರೆ ಮೈತ್ರಿ ಸರಕಾರ ಏಕೆ ಮಾಡಬೇಕಿತ್ತು ಎಂದರು. ಕೋಮವಾದಿ ಬಿಜೆಪಿ ಸರಕಾರ ಆಡಳಿತಕ್ಕೆ ಬರಬಾರದು ಎಂಬ ಕಾರಣಕ್ಕೆ ಮೈತ್ರಿ ಸರಕಾರ ಮಾಡಲಾಗಿದೆ ಈಗ ಮತ್ತೆ ಮೈತ್ರಿ ಮುರಿದುಕೊಂಡರೆ ರಾಜ್ಯದಲ್ಲಿ ಇನಷ್ಟು ಮರ್ಯಾದೆ ಹೋಗುತ್ತದೆ ಎಂದು ವಿಶ್ವನಾಥ ಅವರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದರು.

ಸರಕಾರ ಸುಭದ್ರ

ಲೋಕಸಭಾ ಚುನಾವಣೆ ಬಳಿಕ ಮೈತ್ರಿ ಸರಕಾರ ಉರುಳುತ್ತದೆ ಎನ್ನುತ್ತಿದ್ದಾರೆ. ಅದು ಉಹಾಪೋಹ ಅಷ್ಟೇ. ಸರಕಾರ ಉಳಿಯುವ ನಿಟ್ಟಿನಲ್ಲಿ ಎರಡು ಪಕ್ಷ ಗಳು ಒಂದಾಗಿ ಕೆಲಸ ಮಾಡಬೇಕು. ಮೈತ್ರಿ ಸರಕಾದಲ್ಲಿನ ಎಲ್ಲ ಭಿನ್ನಾಬಿಪ್ರಾಯಗಳನ್ನು ಮರೆತು ಈವರೆಗೂ ಸಮರ್ಥವಾಗಿ ಮೈತ್ರಿ ಸಕಾರ ಆಡಳಿತ ನೀಡದೆ. ಮುಂದೆ ಕೂಡ ಇದೇ ರೀತಿ ಆಡಳಿತ ಮುಂದುವರೆಸಬೇಕು. ಜತೆಗೆ ತೆಲೆಗೆ ಒಬ್ಬರು ಒಂದರಂತೆ ಮಾತನಾಡದೇ, ತಮ್ಮ ಬಾಯಿಗಳಿಗೆ ಬೀಗ ಹಾಕಿಕೊಂಡು ಕೆಲಸ ಮಾಡಬೇಕು ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ