ಆ್ಯಪ್ನಗರ

ಮಾದಕ ವಸ್ತುಗಳ ನಿಯಂತ್ರಣ ಅಗತ್ಯ

ಹುಬ್ಬಳ್ಳಿ : ಮಾದಕ ವ್ಯಸನಕ್ಕೆ ದಾಸರಾಗಿ ಅಪರಾಧ ಮಾಡಿದವರನ್ನು ನ್ಯಾಯಾಲಯದಲ್ಲಿ ಶಿಕ್ಷೆ ನೀಡುವ ಬದಲು ಅಪರಾಧ ಮಾಡದಂತೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಅಂದಾಗ ಮಾತ್ರ ಅಪರಾಧಗಳ ಸಂಖ್ಯೆ ಕಡಿಮೆಯಾಗುವುದು ಎಂದು ನ್ಯಾಯಾಧಿಶೆ ದೀಪಾ.ಎಂ ಅಭಿಪ್ರಾಯಪಟ್ಟರು.

Vijaya Karnataka 27 Jun 2019, 5:00 am
ಹುಬ್ಬಳ್ಳಿ : ಮಾದಕ ವ್ಯಸನಕ್ಕೆ ದಾಸರಾಗಿ ಅಪರಾಧ ಮಾಡಿದವರನ್ನು ನ್ಯಾಯಾಲಯದಲ್ಲಿ ಶಿಕ್ಷೆ ನೀಡುವ ಬದಲು ಅಪರಾಧ ಮಾಡದಂತೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಅಂದಾಗ ಮಾತ್ರ ಅಪರಾಧಗಳ ಸಂಖ್ಯೆ ಕಡಿಮೆಯಾಗುವುದು ಎಂದು ನ್ಯಾಯಾಧಿಶೆ ದೀಪಾ.ಎಂ ಅಭಿಪ್ರಾಯಪಟ್ಟರು.
Vijaya Karnataka Web control of narcotics is essential
ಮಾದಕ ವಸ್ತುಗಳ ನಿಯಂತ್ರಣ ಅಗತ್ಯ


ನಗರದ ಕಿಮ್ಸ್‌ನಲ್ಲಿ ಕರ್ನಾಟಕ ಇನ್ಸ್‌ಟಿಟ್ಯುಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ಕಾಲೇಜಿ ಮನೋರೋಗ ವಿಭಾಗದಿಂದ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಮಾದಕ ವ್ಯಸನÜ ವಿರೋಧಿ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಡ್ರಗ್ಸ್‌, ಅಫೀಮ್‌, ಗಾಂಜಾದಂತಹ ಮಾದಕ ವಸ್ತುಗಳನ್ನು ನಿಯಂತ್ರಿಸಿದರೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ.ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಸಲಹೆ ನೀಡಿದರು.

ಉಪ ಔಷಧ ನಿರೀಕ್ಷ ಕ ಕೆ.ಎ. ಮಲ್ಲಿಕಾರ್ಜುನ ಮಾತನಾಡಿ, ಪ್ರತಿ ಔಷಧ ಅಂಗಡಿಗಳಲ್ಲಿ ನಿಯಮ ಮೀರಿ ಔಷಧ ಮಾರಾಟ ಮಾಡಿದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಹುಬ್ಬಳ್ಳಿ ವಕೀಲರ ಸಂಘದ ಅಧ್ಯಕ್ಷ ಅಶೋಕ ಬಳಿಗಾರ ಮಾತನಾಡಿದರು. ಪತ್ರಕರ್ತ ಸಂಗಮೇಶ ಮೆಣಸಿನಕಾಯಿ, ಡಾ.ಅರುಣಕುಮಾರ, ಡಾ.ಮಹೇಶ ದೇಸಾಯಿ ಮಾತನಾಡಿದರು.

ಇದಕ್ಕೂ ಮುನ್ನ ಕಿಮ್ಸ್‌ ಕಾಲೇಜು ಕಟ್ಟಡದಿಂದ ಕಿಮ್ಸ್‌ ಮುಖ್ಯ ದ್ವಾರದವರೆಗೂ ತೆರಳಿ ವಿಶ್ವ ಮಾದಕ ವ್ಯಸನ ವಿರೋಧಿ ದಿನದ ಹಿನ್ನೆಲೆ ಜಾಗೃತಿ ಜಾಥಾ ಆಯೋಜಿಸಲಾಗಿತ್ತು. ನಂತರ ಮಾದಕ ವ್ಯಸನಗಳ ಪರಿಣಾಮಗಳ ಕುರಿತು ವೈದ್ಯಕೀಯ ವಿದ್ಯಾರ್ಥಿಗಳಿಂದ ಬೀದಿ ನಾಟಕ ನಡೆಯಿತು.

ಮಾಹಿತಿ ನೀಡಿ
ಐಪಿಸಿ ಸೆಕ್ಷ ನ್‌ ನಂತರ ಅತ್ಯಂತ ಪರಿಣಾಮಕಾರಿ ಕಾನೂನು ಎಂದರೆ ಅದು ಎನ್‌ಡಿಪಿಎಸ್‌ ಆ್ಯಕ್ಟ್. ಇದು ಕೇಂದ್ರ ಸರಕಾರದ ಕಾನೂನಾಗಿದ್ದು, ಮಾದಕ ವ್ಯಸನದ ಮಾಯಾ ಲೋಕಕ್ಕೆ ಚಾಟಿ ಬಿಸುವ ಆ್ಯಕ್ಟ್ ಇದಾಗಿದೆ. ಮಾದಕ ವಸ್ತುಗಳ ಮಾರಾಟ ಅಥವಾ ವ್ಯಸನಕ್ಕೆ ಪ್ರೋತ್ಸಾಹಿಸುವುದು ಸಹ ಅಪರಾಧವಾಗಿದೆ.ಧಿಂತಹ ಚಟುವಟಿಕೆ ಕಂಡು ಬಂದಲ್ಲಿ ಕೂಡಲೇ 100ಕ್ಕೆ ಕರೆ ಮಾಡಿ ಮಾಹಿತಿ ನೀಡಿ ಎಂದು ವಿದ್ಯಾನಗರ ಪೊಲೀಸ್‌ ಠಾಣೆಯ ಪಿಐ ಆನಂದ ಒಣಕಂದ್ರ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ