ಆ್ಯಪ್ನಗರ

ಭೂ ಮಾಲೀಕರ, ನಿವಾಸಿನಗಳ ನಡುವೆ ವಾಗ್ವಾದ

ಹುಬ್ಬಳ್ಳಿ : ಹೈಕೋರ್ಟ್‌ ಆದೇಶದಂತೆ ಪೊಲೀಸರ ಸಮ್ಮುಖದಲ್ಲಿ ನಿವೇಶನ ಖಾಲಿ ಮಾಡಿಸಲು ಬಂದ ಭೂ ವಾರಸುದಾರರು ಹಾಗೂ ಅಲ್ಲಿನ ನಿವಾಸಿಗಳ ಮಧ್ಯೆ ವಾಗ್ವಾದ ಉಂಟಾದ ಘಟನೆ ಇಲ್ಲಿನ ಹೊಸೂರು ವೃತ್ತದ ಆರ್‌.ಬಿ.ಕುಲಕರ್ಣಿ ಚಾಳದಲ್ಲಿ ಮಂಗಳವಾರ ನಡೆದಿದೆ.

Vijaya Karnataka 30 Jan 2019, 5:00 am
ಹುಬ್ಬಳ್ಳಿ : ಹೈಕೋರ್ಟ್‌ ಆದೇಶದಂತೆ ಪೊಲೀಸರ ಸಮ್ಮುಖದಲ್ಲಿ ನಿವೇಶನ ಖಾಲಿ ಮಾಡಿಸಲು ಬಂದ ಭೂ ವಾರಸುದಾರರು ಹಾಗೂ ಅಲ್ಲಿನ ನಿವಾಸಿಗಳ ಮಧ್ಯೆ ವಾಗ್ವಾದ ಉಂಟಾದ ಘಟನೆ ಇಲ್ಲಿನ ಹೊಸೂರು ವೃತ್ತದ ಆರ್‌.ಬಿ.ಕುಲಕರ್ಣಿ ಚಾಳದಲ್ಲಿ ಮಂಗಳವಾರ ನಡೆದಿದೆ.
Vijaya Karnataka Web DRW-29MANJU2B
ಹುಬ್ಬಳ್ಳಿ ಹೊಸೂರ ವೃತ್ತದ ಆರ್‌.ಬಿ.ಕುಲಕರ್ಣಿ ಚಾಳದಲ್ಲಿ ಕೋರ್ಟ್‌ ಆದೇಶದಂತೆ ಜಾಗ ಖಾಲಿ ಮಾಡಿಸಲು ಬಂದಾಗ ವಾರಸುದಾರರು ಮತ್ತು ಅಲ್ಲಿನ ನಿವಾಸಿಗಳ ಮಧ್ಯೆ ಮಂಗಳವಾರ ಗೊಂದಲ ಉಂಟಾಯಿತು.


ಸುಮಾರು 60 ವರ್ಷಗಳ ಹಿಂದೆ ಆರ್‌.ಬಿ. ಕುಲಕರ್ಣಿ ಚಾಳದ ನಿವಾಸಿಗಳು ಹಾಗೂ ಭೂ ಮಾಲೀಕರಾದ ರೇವಣೆಪ್ಪ ಬದ್ಲಿ ಕುಟುಂಬದ ಮಧ್ಯ 1.13 ಎಕರೆ ನಿವೇಶನಕ್ಕೆ ಸಂಬಂಧಿಸಿದ ವ್ಯಾಜ್ಯ ಹೈಕೋರ್ಟ್‌ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಜಾಗವು ಬದ್ಲಿಯವರಿಗೆ ಸೇರಿದ್ದು, ಕೂಡಲೇ ಅಲ್ಲಿನ ನಿವಾಸಿಗಳು ಜಾಗ ಖಾಲಿ ಮಾಡಬೇಕು ಎಂದು 2016ರಲ್ಲಿಯೇ ಆದೇಶ ಹೊರಡಿಸಿದೆ.

ಜತೆ ಅಲ್ಲಿನ ಹಿರಿಯರ ಬೇಡಿಕೆಯಂತೆ ಜಾಗ ಖಾಲಿ ಮಾಡಲು ಒಂದು ವರ್ಷ ಸಮಯಾವಕಾಶ ನೀಡಲಾಗಿತ್ತು. ಎರಡು ವರ್ಷ ಕಳೆದರೂ ಅಲ್ಲಿನ ನಿವಾಸಿಗಳು ತಮ್ಮ (57 ಮನೆ) ಜಾಗ ಖಾಲಿ ಮಾಡಿರಲಿಲ್ಲ. ಪದೇ ಪದೆ ಸಂದಾನ ಸಭೆ ನಡೆಸಿ, ಸಮಯಾವಕಾಶ ನೀಡಿದ್ದರೂ ಜಾಗ ಖಾಲಿ ಮಾಡಲು ಒಪ್ಪದ ಅಲ್ಲಿನ ನಿವಾಸಿಗಳ ನಡೆಯಿಂದ ಮಾಲೀಕರು ಬೇಸತ್ತಿದ್ದರು.

ಕೋರ್ಟ್‌ ಆದೇಶದ ಹಿಡಿದು ಜಾಗದ ವಾರಸುದಾರರಾದ ರವಿ ಪಾಟೀಲ ಹಾಗೂ ಅಶೋಕ ಪಾಟೀಲ ತಮ್ಮ ವಕೀಲರಾದ ಎಸ್‌.ವಿ.ಶೆಟ್ಟರ್‌ ಜತೆಗೆ ಸ್ಥಳಕ್ಕೆ ಆಗಮಿಸಿದ್ದರು. ಅಲ್ಲಿನ ನಿವಾಸಿಗಳಿಗೆ ನಿವೇಶನ ಬಿಟ್ಟುಕೊಡುವಂತೆ ಕೋರಿದ್ದಾರೆ. ಅಶೋಕ ಅವರ ಮಾತಿಗೆ ಸಮ್ಮತಿಸದ ಅಲ್ಲಿನ ನಿವಾಸಿಗಳು ಯಾವುದೇ ಕಾರಣಕ್ಕೂ ಜಾಗ ಬಿಟ್ಟುಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ನಮಗೆ ದಾನವಾಗಿ ನೀಡಿರುವ ಜಾಗದಲ್ಲಿ ಸುಮಾರು 20-30 ವರ್ಷಗಳಿಂದ ನಾವು ವಾಸಿಸುತ್ತಿದ್ದೇವೆ. ಏಕಾಏಕಿ ನಿವೇಶನ ಖಾಲಿ ಮಾಡುವಂತೆ ಆದೇಶಿಸಿದರೆ ನಾವು ನಿರ್ಗತಿಕರಾಗುತ್ತೇವೆ. ಯಾವುದೇ ಕಾರಣಕ್ಕೂ ನಮ್ಮ ಜಾಗ ಬಿಟ್ಟುಕೊಡುವುದಿಲ್ಲ ಎಂದು ಪಟ್ಟು ಹಿಡಿದರು.

ಆಗ ಮಧ್ಯ ಪ್ರವೇಶಿಸಿದ ಪಾಲಿಕೆ ಮಾಜಿ ಸದಸ್ಯ ಶಿವು ಹಿರೇಕೆರೂರ ಅಲ್ಲಿನ ನಿವಾಸಿಗಳ ಜತೆ ಮಾತುಕತೆ ನಡೆಸಿ ನಿವೇಶನ ತೆರವುಗೊಳಿಸಲು ಸಮಯಾವಕಾಶ ನೀಡುವಂತೆ ಭೂ ಮಾಲೀಕ ಅಶೋಕ ಅವರಲ್ಲಿ ಕೋರಿದರು. ನಿವಾಸಿಗಳು ಒತ್ತಾಯಕ್ಕೆ ಮಣಿದ ಮಾಲೀಕರು ನಿವೇಶನ ತೆರವುಗೊಳಿಸಲು ಎಂಟು ದಿನ ಸಮಯಾವಕಾಶ ನೀಡಿದರು.

ಘಟನೆಯಿಂದ ಸುಮಾರು ಒಂದೂವರೆ ತಾಸು ಇಡೀ ಚಾಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಮುಂಜಾಗ್ರತಾ ಕ್ರಮವಾಗಿ ವಿದ್ಯಾನಗರದ ಪೊಲೀಸ ಅಧಿಕಾರಿಗಳು ಹಾಗೂ ಸುಮಾರು 150ಕ್ಕೂ ಹೆಚ್ಚು ಪೊಲೀಸ ಸಿಬ್ಬಂದಿ ಘಟನಾ ಸ್ಥಳದಲ್ಲಿ ನಿಯೋಜಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ