ಆ್ಯಪ್ನಗರ

ವಿಜ್ಞಾನ ಕಟ್ಟಿ ಅವರಿಂದ ಮಕ್ಕಳೊಂದಿಗೆ ಸಂವಾದ

ಧಾರವಾಡ: ನ್ಯಾನೋ ತಂತ್ರಜ್ಞಾನವು ಎಲ್ಲತಂತ್ರಜ್ಞಾನಗಳ ಮೂಲವಾಗಿದೆ. ವೈಜ್ಞಾನಿಕ ಕ್ಷೇತ್ರವಷ್ಟೆ ಅಲ್ಲದಿನನಿತ್ಯದ ಎಲ್ಲಕ್ಷೇತ್ರಗಳಲ್ಲಿಉಪಯುಕ್ತವಾಗಿದೆ. ಭವಿಷ್ಯದಲ್ಲಿಇದರ ಸದುಪಯೋಗವನ್ನು ಯುವಕರು ಪಡೆಯಬೇಕು ಎಂದು ಅಮೆರಿಕದ ನ್ಯಾನೋ ತಂತ್ರಜ್ಞಾನ ಕೇಂದ್ರದ ನಿರ್ದೇಶಕ ವಿಜ್ಞಾನಿ ಕಟ್ಟೇಶ.ಕಟ್ಟಿ ಅವರು ಹೇಳಿದರು.

Vijaya Karnataka 11 Dec 2019, 5:00 am
ಧಾರವಾಡ: ನ್ಯಾನೋ ತಂತ್ರಜ್ಞಾನವು ಎಲ್ಲತಂತ್ರಜ್ಞಾನಗಳ ಮೂಲವಾಗಿದೆ. ವೈಜ್ಞಾನಿಕ ಕ್ಷೇತ್ರವಷ್ಟೆ ಅಲ್ಲದಿನನಿತ್ಯದ ಎಲ್ಲಕ್ಷೇತ್ರಗಳಲ್ಲಿಉಪಯುಕ್ತವಾಗಿದೆ. ಭವಿಷ್ಯದಲ್ಲಿಇದರ ಸದುಪಯೋಗವನ್ನು ಯುವಕರು ಪಡೆಯಬೇಕು ಎಂದು ಅಮೆರಿಕದ ನ್ಯಾನೋ ತಂತ್ರಜ್ಞಾನ ಕೇಂದ್ರದ ನಿರ್ದೇಶಕ ವಿಜ್ಞಾನಿ ಕಟ್ಟೇಶ.ಕಟ್ಟಿ ಅವರು ಹೇಳಿದರು.
Vijaya Karnataka Web conversation with children by science cutty
ವಿಜ್ಞಾನ ಕಟ್ಟಿ ಅವರಿಂದ ಮಕ್ಕಳೊಂದಿಗೆ ಸಂವಾದ


ನಗರದ ಮಾಳಮಡ್ಡಿಯ ಕೆ.ಇ.ಬೋರ್ಡ್‌ನ ಪ್ರೌಢಶಾಲೆಯ ಅಟಲ್‌ ಟಿಂಕರಿಂಗ್‌ ಲ್ಯಾಬ್‌ ಉದ್ಘಾಟಿಸಿ ಸೋಮವಾರ ಅವರು ಮಾತನಾಡಿದರು.

ನ್ಯಾನೊ ಟೆಕ್ನಾಲಜಿಯ ಕುರಿತು ವಿಶೇಷ ಉಪನ್ಯಾಸ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿ, ವಿವಿಧ ಪ್ರಾತ್ಯಕ್ಷಿಕೆಗಳ ಮೂಲಕ ಹೊಸ ಹೊಸ ಆವಿಷ್ಕಾರಗಳ ಕುರಿತು ಮಹಿತಿ ನೀಡಿದರು. ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದರು.

ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಯೂ ಆದ ಅವರು ಉತ್ತರ ಕರ್ನಾಟಕದಲ್ಲಿಕೆ. ಇ. ಬೋರ್ಡ ಸಂಸ್ಥೆಯ ಶೈಕ್ಷಣಿಕ ಕೊಡುಗೆಗಳು ಅಪಾರವಾಗಿವೆ ಎಂದು ಶ್ಲಾಘಿಸಿದರು. ಇತ್ತೀಚೆಗೆ ಶತಮಾನೋವತ್ಸವ ಆಚರಿಸಿಕೊಂಡ ಸಂಸ್ಥೆಗೆ ಅಟಲ್‌ ಟಿಂಕರಿಂಗ್‌ ಲ್ಯಾಬ್‌ ಕೇಂದ್ರ ಸರಕಾರದಿಂದ ಮಂಜೂರು ಆಗಿರುವುದು ಸಂಸ್ಥೆಗೆ ಮತ್ತೊಂದು ಹೆಮ್ಮೆಯ ಗರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಎ. ಎ. ಖಾಜಿ ಮಾತನಾಡಿ, ಶಹರ ಘಟಕದಲ್ಲಿ ಅಟಲ್‌ ಟಿಂಕರಿಂಗ್‌ ಲ್ಯಾಬ್‌ ಕೆ. ಇ. ಬೋರ್ಡಿನಂತಹ ಸಂಸ್ಥೆಗೆ ಮಂಜೂರಾಗಿರುವುದು. ಸಂತೋಷದ ಸಂಗತಿಯಾಗಿದೆ. ಇದರ ಸದುಪಯೋಗವನ್ನು ಸಂಸ್ಥೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪಡೆಯಬೇಕು ಎಂದರು.

ಕಾರ್ಯಕ್ರಮದಲ್ಲಿಕೆ. ಇ. ಬೋರ್ಡಿನ ಆಡಳಿತ ಮಂಡಳಿಯ ಸದಸ್ಯರು, ಶಾಲಾ ಕಾಲೇಜು ಮುಖ್ಯಸ್ಥರು ಹಾಗೂ ಶಿಕ್ಷಕರು ಕಾರ್ಯಕ್ರಮದಲ್ಲಿಪಾಲ್ಗೊಂಡಿದ್ದರು. ಸಂಸ್ಥೆ ಕಾರ್ಯಾಧ್ಯಕ್ಷ ಅರುಣ. ನಾಡಗೀರ ಸ್ವಾಗತಿಸಿ, ಪರಿಚಯಿಸಿದರು. ಉಪಪ್ರಾಂಶುಪಾಲ ಎನ್‌. ಎಸ್‌. ಗೋವಿಂದರಡ್ಡಿ ವಂದಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ