ಆ್ಯಪ್ನಗರ

ಕೋರ್ಟ್‌ ಆದೇಶ 73 ಮನೆಗಳಿಗೆ ಬೀಗ

ಹುಬ್ಬಳ್ಳಿ : ಇಲ್ಲಿಯ ಹೊಸೂರ ಬಳಿ ಇರುವ ಕುಲಕರ್ಣಿ ಚಾಳನಲ್ಲಿರುವ ಖಾಸಗಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ 73 ಮನೆಗಳಿಗೆ ಹೈಕೋರ್ಟ್‌ ಆದೇಶದನ್ವಯ ನೂರಾರು ಪೊಲೀಸರ ಸಮ್ಮುಖದಲ್ಲಿ ಬೀಗ ಜಡಿದು ಮೂಲ ಭೂ ಮಾಲೀಕರು ಸೋಮವಾರ ತಮ್ಮ ವಶಕ್ಕೆ ಪಡೆದರು.

Vijaya Karnataka 16 Jul 2019, 5:00 am
ಹುಬ್ಬಳ್ಳಿ : ಇಲ್ಲಿಯ ಹೊಸೂರ ಬಳಿ ಇರುವ ಕುಲಕರ್ಣಿ ಚಾಳನಲ್ಲಿರುವ ಖಾಸಗಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ 73 ಮನೆಗಳಿಗೆ ಹೈಕೋರ್ಟ್‌ ಆದೇಶದನ್ವಯ ನೂರಾರು ಪೊಲೀಸರ ಸಮ್ಮುಖದಲ್ಲಿ ಬೀಗ ಜಡಿದು ಮೂಲ ಭೂ ಮಾಲೀಕರು ಸೋಮವಾರ ತಮ್ಮ ವಶಕ್ಕೆ ಪಡೆದರು.
Vijaya Karnataka Web court order for 73 homes
ಕೋರ್ಟ್‌ ಆದೇಶ 73 ಮನೆಗಳಿಗೆ ಬೀಗ


ಇಲ್ಲಿಯ ಮಂಗಳಾದೇವಿ ವೀರನಗೌಡ ಪಾಟೀಲ ಹಾಗೂ ಇತರ ಐವರಿಗೆ ಸೇರಿದ 1 ಎಕರೆ 17 ಗುಂಟೆ ಜಾಗದಲ್ಲಿ ನಿರ್ಮಿಸಿದ್ದ 73 ಮನೆಗಳಿಗೆ ಪೊಲೀಸರ ಸಮ್ಮುಖದಲ್ಲಿ ಬೀಗ ಹಾಕಲಾಯಿತು. ಇದೇ ವೇಳೆ ಕೋರ್ಟ್‌ ಆದೇಶದ ಪ್ರಕಾರ ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ ವಾರಸುದಾರರು ಎಲ್ಲ ಮನೆಗಳಿಗೆ ಕೀಲಿ ಹಾಕಿರುವ ವಿಡಿಯೋ ಚಿತ್ರೀಕರಣ ಮಾಡಲಾಯಿತು. ಈ ವೇಳೆ ಅಲ್ಲಿನ ನಿವಾಸಿಗಳು ವಿರೋಧ ವ್ಯಕ್ತಪಡಿಸಿದರು. ಆದರೆ ನ್ಯಾಯಾಲಯ ಆದೇಶ ಪಾಲನೆ ಮಾಡಬೇಕು ಎಂದು ಅಲ್ಲಿನ ನಿವಾಸಿಗಳನ್ನು ಪೊಲೀಸರು ಸಮಾಧಾನಪಡಿಸಿದರು. 60-70 ವರ್ಷಗಳ ಹಿಂದೆ ಜಾಗೆಯ ಮೂಲ ಮಾಲೀಕರು ಕೆಲ ಮನೆಗಳನ್ನು ಬಾಡಿಗೆ ನೀಡಿದ್ದರು. ಆದರೆ ಬಾಡಿಗೆ ಪಡೆದ ನಿವಾಸಿಗಳು ಬಾಡಿಗೆ ನೀಡದೇ ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಆದರೀಗ ಖರೀದಿ ಮಾಡಿದ ಅನೇಕರು ಬೀದಿ ಪಾಲು ಆಗುವಂತಾಗಿದೆ. ಬಾಡಿಗೆ ನೀಡದ ಹಲವರು ಅನಧಿಕೃತವಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದರು. ಹೀಗಾಗಿ ಈ ಜಾಗದ ಕುರಿತು ಮೂಲ ಮಾಲೀಕರು ನ್ಯಾಯಾಲಯ ಮೆಟ್ಟಿಲೇರಿದ್ದರು.

ಈ ಕುರಿತು ವಿಚಾರಣೆ ನಡೆಸಿದ 2ನೇ ಜೆಎಂಎಫ್‌ಸಿ ನ್ಯಾಯಾಲಯ ಮತ್ತು ಹೈಕೋರ್ಟ್‌ ಮೂಲ ಮಾಲೀಕರ ಪರ ಆದೇಶ ಹೊರಡಿಸಿದೆ. ಅಲ್ಲದೆ, ಜಾಗೆಯನ್ನು ಮೂಲ ಮಾಲೀಕರ ವಶಕ್ಕೆ ನೀಡಬೇಕೆಂದು ಸ್ಪಷ್ಟ ನಿರ್ದೇಶನ ನೀಡಿ ಆದೇಶ ನೀಡಿದೆ. ಹೀಗಾಗಿ ನ್ಯಾಯಾಲಯದ ಆದೇಶದಂತೆ ನೂರಾರು ಪೊಲೀಸರ ಸಮ್ಮುಖದಲ್ಲಿ ಅನಧಿಕೃತ ಮನೆಗಳಿಗೆ ಬೀಗ ಜಡಿದು ಮೂಲ ಮಾಲೀಕರ ವಶಕ್ಕೆ ನೀಡಲಾಯಿತು.

2016-17ರ ಅವಧಿಯಲ್ಲಿ 22 ಕುಟುಂಬಗಳು ಜಾಗ ಖಾಲಿ ಮಾಡಿದ್ದವು. ಅಂದಿನಿಂದ ಅನೇಕ ಬಾರಿ ಮನೆ ಖಾಲಿಮಾಡುವಂತೆ ಸೂಚಿಸಲಾಗಿತ್ತು. ಆದರೂ ಇದಕ್ಕೆ ಕ್ಯಾರೆ ಎನ್ನದೇ ಅಲ್ಲಿನ ನಿವಾಸಿಗಳು ಹೈ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಆದರೀಗ ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್‌ ತೆರವುಗೊಳಿಸಬೇಕೆಂದು ಆದೇಶ ನೀಡಿದೆ ಎಂದು ವಕೀಲ ಸುಮಿತ್‌ ಶೆಟ್ಟರ್‌ ತಿಳಿಸಿದರು.

ಮನೆಗೆ ಬೀಗ ಜಡಿಯುವ ಸಂದರ್ಭದಲ್ಲಿ ಮನೆಯಲ್ಲಿದ ಕುಟುಂಬಸ್ಥರು ಕಣ್ಣೀರು ಹಾಕಿದರು. ಇದಲ್ಲದೆ, ಈ ದುಃಖದ ಸನ್ನಿವೇಶದಲ್ಲಿ ಕುಟುಂಬಸ್ಥರು ಸ್ವಯಂ ಪ್ರೇರಣೆಯಿಂದ ಮನೆಯಲ್ಲಿದ್ದ ಸಾಮಗ್ರಿಗಳನ್ನು ಹೊರ ತೆಗೆದು ಒಂದೊಂದಾಗಿ ವಾಹನಕ್ಕೆ ತುಂಬುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅಲ್ಲದೆ, 70 ವರ್ಷಗಳಿಂದ ಇಲ್ಲಿಯೇ ವಾಸವಿದ್ದೇವೆ. ಇದೀಗ ಏಕಾಏಕಿ ಸಂದರ್ಭದಲ್ಲಿ ಮನೆ ಬಿಡಿಸಿದರೆ ಎಲ್ಲಿಗೆ ಹೋಗಬೇಕು. ನಮಗೆ ಯಾರು ದಿಕ್ಕು? ಎಂದು ಅಲ್ಲಿನ ನಿವಾಸಿಗಳು ಅಳಲು ತೋಡಿಕೊಂಡರು.

ಕಾರ್ಯಾಚರಣೆಯಲ್ಲಿ ಡಿಸಿಪಿ ನಾಗೇಶ ಡಿ.ಎಲ್‌., ಎಸಿಪಿ ಎಚ್‌.ಕೆ. ಪಠಾಣ, ಪಿಐಗಳಾದ ಆನಂದ ಒಣಕುದುರೆ, ಜಾಕ್ಸನ್‌ ಡಿಸೋಜಾ, ಪ್ರಭು ಸೂರೀನ, ಜಗದೀಶ ಹಂಚನಾಳ ಸೇರಿದಂತೆ ನೂರಾರು ಪೊಲೀಸ್‌ ಸಿಬ್ಬಂದಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ